ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಬ್ಯಾಡ್ಮಿಂಟನ್ : ಸಿಂಧು,ಶ್ರೀಕಾಂತ್ ಮೇಲೆ ಭಾರತದ ನಿರೀಕ್ಷೆ
Team Udayavani, Jan 27, 2021, 7:20 AM IST
ಬ್ಯಾಂಕಾಕ್: ಭಾರತದ ಬ್ಯಾಡ್ಮಿಂಟನ್ ತಾರೆಗಳಾದ ಕೆ. ಶ್ರೀಕಾಂತ್ ಮತ್ತು ಪಿವಿ ಸಿಂಧು ಕಳೆದ ಎರಡು ವಾರಗಳಲ್ಲಿ ಅನುಭವಿಸಿದ ನಿರಾಶೆಗಳನ್ನು ಮರೆಯುವ ತವಕದಲ್ಲಿದ್ದು ಬುಧವಾರ ಇಲ್ಲಿ ಆರಂಭವಾಗುವ ಬಿಡಬ್ಲ್ಯುಎಫ್ ವಿಶ್ವ ಟೂರ್ ಫೈನಲ್ಸ್ ಕೂಟದಲ್ಲಿ ಗೆಲುವಿನ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.
ಈ ಸ್ಪರ್ಧೆಯಲ್ಲಿ ಅಗ್ರ ಸ್ಥಾನದಲ್ಲಿರುವ 8 ಆಟ ಗಾರರು ಮಾತ್ರ ಪ್ರವೇಶ ಪಡೆಯುತ್ತಾರೆ. ಈ ಕೂಟ ಕಳೆದ ಡಿಸೆಂಬರ್‌ನಲ್ಲಿ ಚೀನದಲ್ಲಿ ನಡೆಯ ಬೇಕಿತ್ತು. ಆದರೆ ಕೊರೊನಾ ವೈರಸ್ ಹಾವಳಿಯಿಂದ 2021ರ ಜನವರಿಗೆ ಮುಂದೂಡಲ್ಪಟ್ಟಿತು. ಕೂಟದ ಆತಿಥ್ಯ ಕೂಡ ಬದಲಾಗಿ ಥಾಯ್ಲೆಂಡ್ ಪಾಲಾಯಿತು.
ಸಿಂಧುಗೆ ಒಲಿದ ಅದೃಷ್ಟ :
ವಿಶ್ವ ರ್‍ಯಾಂಕಿಂಗ್‌ನಲ್ಲಿ ಸಿಂಧು 7ನೇ ಸ್ಥಾನದಲ್ಲಿ ದ್ದರೂ ಕೂಟದ ರ್‍ಯಾಂಕಿಂಗ್‌ನಲ್ಲಿ 10ನೇ ಸ್ಥಾನದಲ್ಲಿದ್ದಾರೆ. ಈ ಸ್ಫರ್ದೆಯಲ್ಲಿ ಆಡುವ ಅವಕಾಶ ಸಿಗಬೇಕಾದರೆ ಅಗ್ರ 8ರಲ್ಲಿ ಸ್ಥಾನ ಪಡೆಯಬೇಕು. ಹಾಗೆಯೇ ಒಂದು ದೇಶದಿಂದ ಇಬ್ಬರಿಗಷ್ಟೇ ಪ್ರವೇಶ ಸಿಗುತ್ತದೆ. ಅತಿಥೇಯ ನಾಡಿನ ಮೂವರಿದ್ದ ಕಾರಣ ಮತ್ತು ಜಪಾನಿನ ನವೋಮಿ ಒಕುಹಾರ ಕೂಟದಿಂದ ಹಿಂದೆ ಸರಿದ ಕಾರಣದಿಂದ ಈ ಸ್ಥಾನ ಸಿಂಧು ಪಾಲಾಯಿತು.
ಶ್ರೇಷ್ಠ ಪ್ರದರ್ಶನ ಅಗತ್ಯ :
ಟೋಕಿಯೊ ಒಲಿಂಪಿಕ್ಸ್ ಹಿನ್ನೆಲೆಯಲ್ಲಿ ಸಿಂಧು ಮತ್ತು ಶ್ರೀಕಾಂತ್ ಅವರಿಗೆ ಈ ಟೂರ್ನಿ ಮಹತ್ವದ್ದಾಗಿದೆ. ಕಳೆದ ವಾರವಷ್ಟೆ ಮುಕ್ತಾಯ ಗೊಂಡ ಎರಡು ಹಂತದ “ಥಾಯ್ಲೆಂಡ್ ಓಪನ್’ನಲ್ಲಿ ನೀರಸ ಪ್ರದರ್ಶನ ತೋರಿದ ಇವರಿಬ್ಬರೂ ಮತ್ತೂಂದು ಸುತ್ತಿನ ಅಗ್ನಿಪರೀಕ್ಷೆಗೆ ಒಳಗಾಗಿದ್ದಾರೆ. 2018ರಲ್ಲಿ ಈ ಕೂಟದ ಚಾಂಪಿಯನ್ ಆಗಿದ್ದ ಸಿಂಧು ಬಳಿಕ ಸೆಮಿಫೈನಲ್ ಕೂಡ ತಲುಪಿಲ್ಲ. ಅವರಿಂದ ಗ್ರೇಟ್ ಕಮ್‌ಬ್ಯಾಕ್ ಸಾಧ್ಯವೇ ಎಂಬುದೊಂದು ಪ್ರಶ್ನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಇಂದಿರಾಗಾಂಧಿ ತುರ್ತುಪರಿಸ್ಥಿತಿ ಹೇರಿಕೆ ತಪ್ಪುನಿರ್ಧಾರ; ಆದರೆ RSS ಇಂದು.. :ರಾಹುಲ್ ಗಾಂಧಿ
ನಿತ್ಯಭವಿಷ್ಯ: ಈ ರಾಶಿಯವರು ಇಂದು ವಾಹನ ಸಂಚಾರದಲ್ಲಿ ಅತೀ ಜಾಗ್ರತೆ ವಹಿಸಿ !
ಕಾಂಗ್ರೆಸ್ನಲ್ಲಿ ತಳಮಳ : ಸಿದ್ದರಾಮಯ್ಯ ಕೋಪ ತಣಿಸಲು ಹೈಕಮಾಂಡ್ ಪ್ರಯತ್ನ
ನಾಳೆಯಿಂದ ಬಜೆಟ್ ಅಧಿವೇಶನ : ಸಿ.ಡಿ. ಬಾಂಬ್, ಮೀಸಲಾತಿ ಸದ್ದಿನ ನಿರೀಕ್ಷೆ
ವ್ಯಕ್ತಿ ನಿರ್ಮಾಣವೇ ಸಂಘದ ಪರಮಗುರಿ