ಬಿಡಬ್ಲ್ಯುಎಫ್ ವರ್ಲ್ಡ್ ಟೂರ್‌ ಫೈನಲ್ಸ್‌ ಕೆಂಟೊ ಮೊಮೊಟ ಚಾಂಪಿಯನ್‌

Team Udayavani, Dec 16, 2019, 1:45 AM IST

ಗ್ವಾಂಗ್‌ಜೂ: ವಿಶ್ವದ ನಂಬರ್‌ ವನ್‌ ಶಟ್ಲರ್‌ ಜಪಾನಿನ ಕೆಂಟೊ ಮೊಮೊಟ “ಬಿಡಬ್ಲ್ಯುಎಫ್ ವರ್ಲ್ಡ್ ಟೂರ್‌ ಫೈನಲ್ಸ್‌’ ಬ್ಯಾಡ್ಮಿಂಟನ್‌ ಕೂಟದ ಪುರುಷರ ಸಿಂಗಲ್ಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಇದರೊಂದಿಗೆ ವರ್ಷದ 11ನೇ ಬ್ಯಾಡ್ಮಿಂಟನ್‌ ಪ್ರಶಸ್ತಿಯನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ.

ರವಿವಾರ ನಡೆದ ಫೈನಲ್‌ನಲ್ಲಿ ಕೆಂಟೊ ಮೊಮೊಟ ತೀವ್ರ ಪೈಪೋಟಿಯೊಡ್ಡಿದ ಇಂಡೋ ನೇಶ್ಯದ ಆ್ಯಂಟನಿ ಸಿನಿಸುಕ ಗಿಂಟಿಂಗ್‌ ಅವರನ್ನು 17-21, 21-17, 21-14 ಅಂಕಗಳಿಂದ ಪರಾಭವಗೊಳಿಸಿದರು. 87 ನಿಮಿಷಗಳ ತನಕ ಇವರಿಬ್ಬರ ಜಿದ್ದಾಜಿದ್ದಿ ಸ್ಪರ್ಧೆ ಸಾಗಿತು.

ಮೊದಲ ಗೇಮ್‌ ಗೆದ್ದ ಸಿನಿಸುಕ 3ನೇ ನಿರ್ಣಾಯಕ ಗೇಮ್‌ನಲ್ಲೂ 12-5 ಅಂತರದ ಭರ್ಜರಿ ಮುನ್ನಡೆಯಲ್ಲಿದ್ದರು. ಆದರೆ 2 ಬಾರಿಯ ವಿಶ್ವ ಚಾಂಪಿಯನ್‌ ಖ್ಯಾತಿಯ ಮೊಮೊಟ ತಮ್ಮ ಸಾಮರ್ಥ್ಯವನ್ನೆಲ್ಲ ಮೀರಿ ನಿಂತು ತಿರುಗಿ ಬಿದ್ದರು. 17-14ರ ಮುನ್ನಡೆ ಸಾಧಿಸಿದರು. ಈ ಹಂತದಲ್ಲಿ ಗಿಂಟಿಂಗ್‌ ಬಲ ಪಾದದ ನೋವಿಗೆ ಸಿಲುಕಿ ವೈದ್ಯಕೀಯ ನೆರವು ಪಡೆದರು. ಬಳಿಕ ಆಟ ಮುಂದುವರಿಸಿದರೂ ಮೊಮೊಟ ಅವರಿಗೆ ಸಾಟಿಯಾಗಲಾಗಲಿಲ್ಲ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ