ಬಿಡಬ್ಲ್ಯುಎಫ್ ವರ್ಲ್ಡ್ ಟೂರ್‌ ಫೈನಲ್‌: ಸಿಂಧುಗೆ ಸಮಾಧಾನಕರ ಜಯ

Team Udayavani, Dec 13, 2019, 11:49 PM IST

ಗ್ವಾಂಗ್‌ಜೂ: ಈಗಾಗಲೇ “ಬಿಡಬ್ಲ್ಯುಎಫ್ ವರ್ಲ್ಡ್ ಟೂರ್‌ ಫೈನಲ್‌’ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಸೆಮಿಫೈನಲ್‌ ರೇಸ್‌ನಿಂದ ಹೊರಬಿದ್ದಿರುವ ಭಾರತದ ಪಿ.ವಿ. ಸಿಂಧು, ಗ್ರೂಪ್‌ “ಎ’ ವಿಭಾಗದ 3ನೇ ಪಂದ್ಯದಲ್ಲಿ ಸಮಾಧಾನಕರ ಗೆಲುವು ದಾಖಲಿಸಿದ್ದಾರೆ.

ಶುಕ್ರವಾರದ ಪಂದ್ಯದಲ್ಲಿ ಸಿಂಧು ಚೀನದ ಎಡಗೈ ಆಟಗಾರ್ತಿ ಹೆ ಬಿಂಗ್‌ ಜಿಯಾವೊ ಪಿ.ವಿ. ಸಿಂಧು, ಗ್ರೂಪ್‌ “ಎ’ ವಿಭಾಗದ 3ನೇ ಪಂದ್ಯದಲ್ಲಿ ಸಮಾಧಾನಕರ ಗೆಲುವು ದಾಖಲಿಸಿದ್ದಾರೆ.ವಿರುದ್ಧ 21-19, 21-19 ನೇರ ಗೇಮ್‌ಗಳ ಜಯ ಸಾಧಿಸಿದರು. ಮೊದಲ ಗೇಮ್‌ನಲ್ಲಿ 9-18ರ ಭಾರೀ ಹಿನ್ನಡೆ ಬಳಿಕ ಸಿಂಧು ತಿರುಗಿ ಬಿದ್ದದ್ದೊಂದು ವಿಶೇಷ. ಬಿಂಗ್‌ ಜಿಯಾವೊ ವಿರುದ್ಧ ಸತತ 4 ಪಂದ್ಯಗಳು° ಸೋತ ಬಳಿಕ ಸಿಂಧು ಸಾಧಿಸಿದ ಜಯ ಇದಾಗಿದೆ.

ಇವರೆದುರು ಭಾರತೀಯಳ ಗೆಲುವಿನ ದಾಖಲೆ 6-9ಕ್ಕೆ ಏರಿದೆ.ಅಕಾನೆ ಯಮಾಗುಚಿ ಮತ್ತು ಚೆನ್‌ ಯುಫಿ ವಿರುದ್ಧ ಈ ಕೂಟದ ಸತತ 2 ಪಂದ್ಯಗಳನ್ನು ಸೋತಾಗಲೇ ಹಾಲಿ ಚಾಂಪಿಯನ್‌ ಸಿಂಧು ಸೆಮಿಫೈನಲ್‌ ರೇಸ್‌ನಿಂದ ಹೊರಬಿದ್ದಿದ್ದರು. ಸಿಂಧು ಅವರಿನ್ನು “ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌’ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ