ಕೆನಡಿಯನ್ ಮಾಸ್ಟರ್: ಹ್ಯೂಬರ್ಟ್ ಹುರ್ಕಾಝ್- ಪಾಬ್ಲೊ ಕರೆನೊ ಬುಸ್ಟ ಮುಖಾಮುಖಿ
Team Udayavani, Aug 14, 2022, 11:00 PM IST
ಟೊರೊಂಟೊ: ಟೊರೊಂಟೊ ಮಾಸ್ಟರ್ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಪೋಲೆಂಡ್ನ ಹ್ಯೂಬರ್ಟ್ ಹುರ್ಕಾಝ್ ಮತ್ತು ಸ್ಪೇನ್ನ ಪಾಬ್ಲೊ ಕರೆನೊ ಬುಸ್ಟ ಎದುರಾಗಲಿದ್ದಾರೆ.
ಹ್ಯೂಬರ್ಟ್ ಹುರ್ಕಾಝ್ 5-7, 6-3, 6-2 ಅಂತರದಿಂದ ಕ್ಯಾಸ್ಪರ್ ರೂಡ್ಗೆ ಆಘಾತವಿಕ್ಕಿದರು. ಬುಸ್ಟ 7-5, 6-7 (7), 6-2ರಿಂದ ಬ್ರಿಟನ್ನ ಡ್ಯಾನ್ ಇವಾನ್ಸ್ಗೆ ಸೋಲುಣಿಸಿದರು.
ಹಾಲೆಪ್-ಮಯಾ ಮುಖಾಮುಖಿ
ವನಿತಾ ಸಿಂಗಲ್ಸ್ನಲ್ಲಿ ಎರಡು ಬಾರಿಯ ಚಾಂಪಿ ಯನ್ ಸಿಮೋನಾ ಹಾಲೆಪ್ “ನ್ಯಾಶನಲ್ ಬ್ಯಾಂಕ್ ಓಪನ್ ಟೆನಿಸ್ ಟೂರ್ನಿ’ಯ ಫೈನಲ್ನಲ್ಲಿ ಬ್ರಝಿಲ್ನ ಹದ್ದಾದ್ ಮಯಾ ಅವರನ್ನು ಎದುರಿಸಲಿದ್ದಾರೆ.
ರೊಮೇನಿಯಾದ ಸಿಮೋನಾ ಹಾಲೆಪ್ ಸೆಮಿಫೈನಲ್ನಲ್ಲಿ ಅಮೆರಿಕದ ಜೆಸ್ಸಿಕಾ ಪೆಗುಲಾ ಅವರನ್ನು 2-6, 6-3, 6-4ರಿಂದ ಮಣಿಸಿದರು. ಹದ್ದಾದ್ ಮಯಾ ಜೆಕ್ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ ವಿರುದ್ಧ 6-4, 7-6 (7) ಅಂತರದ ಗೆಲುವು ಸಾಧಿಸಿದರು.
ಮಾಂಟ್ರಿಯಲ್ನಲ್ಲಿ ನಡೆದ 2016 ಮತ್ತು 2018ರ ಪಂದ್ಯಾವಳಿಯಲ್ಲಿ ಸಿಮೋನಾ ಹಾಲೆಪ್ ಚಾಂಪಿಯನ್ ಆಗಿ ಮೂಡಿಬಂದಿದ್ದರು. ಇನ್ನೊಂದೆಡೆ ಹದ್ದಾದ್ ಮಯಾ ಅವರಿಗೆ ಇದು ಮೊದಲ ಡಬ್ಲ್ಯುಟಿಎ ಮಾಸ್ಟರ್ ಫೈನಲ್. ಫೈನಲ್ ಹಾದಿಯಲ್ಲಿ ಅವರು ಫ್ರೆಂಚ್ ಓಪನ್ ಚಾಂಪಿಯನ್ ಐಗಾ ಸ್ವಿಯಾಟೆಕ್ಗೆ ಸೋಲುಣಿಸಿದ್ದರು.