ಕೆನಡಾ ಓಪನ್‌: ಕಶ್ಯಪ್‌ ಫೈನಲಿಗೆ

Team Udayavani, Jul 8, 2019, 5:52 AM IST

ಹೊಸದಿಲ್ಲಿ: ಮಾಜಿ ಕಾಮನ್‌ವೆಲ್ತ್‌ ಗೇಮ್ಸ್‌ ಚಾಂಪಿಯನ್‌ ಪಾರುಪಳ್ಳಿ ಕಶ್ಯಪ್‌ ಮತ್ತೆ ಅಮೋಘ ಪ್ರದರ್ಶನ ನೀಡಿ “ಕೆನಡಾ ಓಪನ್‌ ಸೂಪರ್‌ 100 ಬ್ಯಾಡ್ಮಿಂಟನ್‌’ ಕೂಟದ ಫೈನಲ್‌ ಹಂತಕ್ಕೇರಿದ್ದಾರೆ.

3 ಗೇಮ್‌ಗಳ ಕಠಿನ ಹೋರಾ ಟದಲ್ಲಿ ಕಶ್ಯಪ್‌ 4ನೇ ಶ್ರೇಯಾಂಕದ ಚೈನೀಸ್‌ ತೈಪೆಯ ವಾಂಗ್‌ ಟಿಜು ವೆಯಿ ಅವರನ್ನು ಉರುಳಿಸಿದರು. ಮೊದಲ ಗೇಮ್‌ ಕಳೆದುಕೊಂಡರೂ ವಿಚಲಿತರಾಗದ ಕಶ್ಯಪ್‌ 14-21, 21-17, 21-18 ಅಂತರದಿಂದ ಗೆದ್ದರು. ಕಳೆದ ಮಾರ್ಚ್‌ನಲ್ಲಿ ನಡೆದ ಇಂಡಿಯಾ ಓಪನ್‌ನಲ್ಲೂ ವಾಂಗ್‌ ಅವರನ್ನು ಕಶ್ಯಪ್‌ ಸೋಲಿಸಿದ್ದರು.

ಫೈನಲ್‌ನಲ್ಲಿ ಕಶ್ಯಪ್‌ ಚೀನದ ಲಿ ಶಿ ಫೆಂಗ್‌ ಅವರ ಸವಾಲನ್ನು ಎದುರಿಸಲಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ