ರವೀಂದ್ರಪಾಲ್‌ ಟಿ20 ಶತಕ ದಾಖಲೆ

Team Udayavani, Aug 22, 2019, 5:33 AM IST

ಟೊರಂಟೊ: ಕೆನಡಾದಲ್ಲಿ ನಡೆಯುತ್ತಿರುವ ಗ್ಲೋಬಲ್‌ ಟಿ20 ಕ್ರಿಕೆಟ್‌ ಕೂಟದಲ್ಲಿ ಭಾರತೀಯ ಮೂಲದ ಬ್ಯಾಟ್ಸ್‌ಮನ್‌ ರವೀಂದ್ರಪಾಲ್‌ ಸಿಂಗ್‌ ಪದಾರ್ಪಣ ಪಂದ್ಯದಲ್ಲೇ ಶತಕ ಬಾರಿಸಿದ ವಿಶ್ವದ ಮೊದಲ ಕ್ರಿಕೆಟಿಗನೆಂಬ ದಾಖಲೆಗೆ ಪಾತ್ರರಾಗಿದ್ದಾರೆ.

ಯುವರಾಜ್‌ ಸಿಂಗ್‌ ನಾಯಕತ್ವದ ಟೊರಂಟೊ ನ್ಯಾಶನಲ್ಸ್‌ ತಂಡದ ಪರ ಚೊಚ್ಚಲ ಪಂದ್ಯದಲ್ಲಿ ರವೀಂದ್ರಪಾಲ್‌ ಸಿಂಗ್‌ 101 ರನ್‌ ಸಿಡಿಸಿದರು. ಕೇವಲ 48 ಎಸೆತ ಎದುರಿಸಿ 10 ಸಿಕ್ಸರ್‌, 6 ಬೌಂಡರಿ ಬಾರಿಸಿ ಅಬ್ಬರಿಸಿದರು. 2005ರಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧದ ಟಿ20 ಪದಾರ್ಪಣ ಪಂದ್ಯದಲ್ಲಿ ರಿಕಿ ಪಾಂಟಿಂಗ್‌ 98 ರನ್‌ ಬಾರಿಸಿದ್ದು ಈವರೆಗಿನ ದಾಖಲೆಯಾಗಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ