ಮುಂದಿನ ಪಂದ್ಯದಲ್ಲಿ ತಪ್ಪನ್ನು ಮರುಕಳಿಸಲಾರೆವು: ರಾಹುಲ್
Team Udayavani, Oct 2, 2020, 6:51 PM IST
ಅಬುಧಾಬಿ: ಪಂಜಾಬ್ ತಂಡದ ನಾಯಕ ಕೆ.ಎಲ್. ರಾಹುಲ್ ರೂಪಿಸಿದ್ದ ಯೋಜನೆ ಎರಡನೇ ಬಾರಿಯೂ ವಿಫಲವಾಯಿತು. ಕಳೆದ ಪಂದ್ಯದಲ್ಲಿ 223 ರನ್‌ಗಳಿಗೆ ರಾಜಸ್ಥಾನ್ ರಾಯಲ್ಸ್ ತಂಡವನ್ನು ಕಟ್ಟಿ ಹಾಕುವಲ್ಲಿ ವಿಫಲವಾಗಿದ್ದ ಪಂಜಾಬ್ ಮತ್ತೂಮ್ಮೆ ಗುರುವಾರ ರಾತ್ರಿ ಮುಂಬೈ ವಿರುದ್ಧ 48 ರನ್‌ಗಳ ಅಂತರದಲ್ಲಿ ಸೋಲು ಅನುಭವಿಸಿದೆ.
ಪಂದ್ಯದ ಬಳಿಕ ಮಾತನಾಡಿ ರಾಹುಲ್ ಇದು ನಿರಾಶಾದಾಯಕ ಎಂದು ನಾನು ಹೇಳುವುದಿಲ್ಲ ಆದರೆ ಸ್ಪಷ್ಟವಾಗಿ ಇದು ನಿರಾಶಾದಾಯಕವಾಗಿದೆ. ನಾವು ಸುಲಭವಾಗಿ ನಾಲ್ಕು ಪಂದ್ಯದಲ್ಲಿ ಮೂರು ಗೆಲುವು ಸಾಧಿಸಬಹುದಿತ್ತು. ಈ ಪಂದ್ಯದ ಕೊನೆಯಲ್ಲಿ ನಾವು ಚೆನ್ನಾಗಿ ಬೌಲಿಂಗ್ ಮಾಡಿಲ್ಲ. ತಪ್ಪುಗಳಿಂದ ಕಲಿತು ಮುಂದಿನ ಪಂದ್ಯಗಳಿಗೆ ಬಲಿಷ್ಠವಾಗಿ ಮರಳುತ್ತೇವೆ. ತಂಡಕ್ಕೆ ಮತ್ತೂಂದು ಬೌಲಿಂಗ್ ಆಯ್ಕೆ ಇದ್ದಿದ್ದರೆ ಚೆನ್ನಾಗಿರುತಿತ್ತು. ಮುಂದಿನ ಪಂದ್ಯದಲ್ಲಿ ತರಬೇತುದಾರರೊಂದಿಗೆ ಚರ್ಚಿಸಿ ಹೆಚ್ಚುವರಿ ಬೌಲರ್ ಅಥವಾ ಅದೇ ತಂಡವನ್ನು ಮುಂದುವರಿಸಬೇಕೇ ಎಂದು ನಿರ್ಧರಿಸುತ್ತೇವೆ ಎಂದು ಕೆ.ಎಲ್ ರಾಹುಲ್ ತಿಳಿಸಿದರು.