ನೋಬಾಲ್ ಎಸೆದು ಲೆವಿಸ್ ಶತಕ ತಡೆದ ಪೊಲಾರ್ಡ್!
Team Udayavani, Sep 5, 2017, 6:45 AM IST
ಕಿಂಗ್ಸ್ಟನ್(ವೆಸ್ಟ್ ಇಂಡೀಸ್): ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ (ಸಿಪಿಎಲ್) ಕೈರನ್ ಪೊಲಾರ್ಡ್ ಉದ್ದೇಶಪೂರ್ವಕವಾಗಿ ನೋಬಾಲ್ ಎಸೆಯುವ ಮೂಲಕ ಎವಿನ್ ಲೆವಿಸ್ ಶತಕ ತಪ್ಪಿಸಿದ್ದಾರೆ.
ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿ ವರ್ತಿಸಿದ್ದರಿಂದ ಪೊಲಾರ್ಡ್ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಟಿ20 ಪಂದ್ಯದಲ್ಲಿ ಬಾರ್ಬಡೋಸ್ ಟ್ರೈಡೆಂಟ್ ಮೊದಲ ಬ್ಯಾಟಿಂಗ್ ಮಾಡಿತ್ತು. ಗುರಿ ಬೆನ್ನುಹತ್ತಿದ ಸೇಂಟ್ ಕಿಟ್ಸ್ ತಂಡದ ಪರ ಎವಿನ್ ಲೆವಿಸ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದರು. ಲೆವಿಸ್ 32 ಎಸೆತದಲ್ಲಿ 97 ರನ್ ಬಾರಿಸಿದ್ದರು. ಈ ಹಂತದಲ್ಲಿ ತಂಡದ ಗೆಲುವಿಗೆ 1 ರನ್ ಅಗತ್ಯವಿತ್ತು. ಬೌಲಿಂಗ್ ಮಾಡುತ್ತಿದ್ದ ಪೊಲಾರ್ಡ್ ನೋಬಾಲ್ ಎಸೆದಿದ್ದಾರೆ. ಇದರಿಂದ ಲೆವಿಸ್ ಶತಕದಿಂದ ವಂಚಿತರಾಗಿದ್ದಾರೆ. 2010ರಲ್ಲಿ ಭಾರತ ಮತ್ತು ಲಂಕಾ ನಡುವಿನ ಏಕದಿನ ಪಂದ್ಯದಲ್ಲಿ ವೀರೇಂದ್ರ ಸೆಹವಾಗ್ 99 ರನ್ ಬಾರಿಸಿ ಕ್ರೀಸ್ನಲ್ಲಿದ್ದರು. ತಂಡದ ಗೆಲುವಿಗೆ ಮತ್ತು ಶತಕಕ್ಕೆ ಎರಡಕ್ಕೂ 1 ರನ್ ಅಗತ್ಯವಿತ್ತು. ಈ ಹಂತದಲ್ಲಿ ಬೌಲಿಂಗ್ ಮಾಡಿದ ಲಂಕಾ ಸ್ಪಿನ್ನರ್ ಸೂರಜ್ ರಣದಿವೆ ನೋಬಾಲ್ ಎಸೆದಿದ್ದರು. ಆ ನಂತರ ಸೆಹವಾಗ್ ಅವರಲ್ಲಿ ಸೂರಜ್ ಕ್ಷಮೆ ಕೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ