ಕೇಂದ್ರ ಕ್ರೀಡಾ ಸಚಿವ ರಿಜಿಜು ಕಾರ್ಯಾರಂಭ
Team Udayavani, Jun 2, 2019, 10:16 AM IST
ಹೊಸದಿಲ್ಲಿ: ಹೊಸದಾಗಿ ಕೇಂದ್ರ ಕ್ರೀಡಾ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಅರುಣಾಚಲಪ್ರದೇಶದ ಕಿರಣ್ ರಿಜಿಜು ಕಾರ್ಯಾರಂಭಿಸಿದ್ದಾರೆ. ಇದನ್ನು ಭಾರತೀಯ ಕ್ರೀಡಾಲೋಕ ಸ್ವಾಗತಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಿಜಿಜು, ‘ನಾವೊಂದು ತಂಡವಾಗಿ ಕೆಲಸ ಮಾಡುತ್ತೇವೆ. ನಾನು ಹಿಂದಿನ ಕ್ರೀಡಾಮಂತ್ರಿ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರನ್ನು ಭೇಟಿ ಮಾಡುತ್ತೇನೆ. ಅವರು ಹಿಂದೇನು ಮಾಡಿದ್ದಾರೋ ಅದನ್ನು ಮುಂದುವ ರಿಸುತ್ತೇನೆ. ಹೊಸತನ್ನು ಅದಕ್ಕೆ ಸೇರಿಸುತ್ತೇನೆ’ ಎಂದು ಹೇಳಿದ್ದಾರೆ.
46 ವರ್ಷದ ರಿಜಿಜು, ಆಗಾಗ ತಾವು ವ್ಯಾಯಾಮ ಮಾಡುತ್ತಿರುವ ವೀಡಿಯೋಗಳನ್ನು ಪ್ರಕಟಿಸುವ ಮೂಲಕ ತಾನು ಕ್ರೀಡಾಖಾತೆ ನಿರ್ವಹಿಸಬಲ್ಲೆ ಎಂಬ ಸಂದೇಶ ರವಾನಿಸಿದ್ದಾರೆ. ಇವರಿಗೂ ಮುನ್ನ ರಾಜ್ಯವರ್ಧನ್ ಸಿಂಗ್ ಕ್ರೀಡಾಮಂತ್ರಿಯಾಗಿ ಧಾರಾಳ ಯಶಸ್ಸು ಕಂಡಿದ್ದರು. ಈ ಬಾರಿ ಅವರು ಕೇಂದ್ರ ಸಂಪುಟಕ್ಕೆ ಆಯ್ಕೆಯಾಗುವಲ್ಲಿ ವಿಫಲರಾಗಿದ್ದಾರೆ.