ಸರ್ವಾಧಿಕ ಸಿಕ್ಸರ್: ವಿಶ್ವದಾಖಲೆ ಸರಿದೂಗಿಸಿದ ಕ್ರಿಸ್ ಗೇಲ್
Team Udayavani, Jul 31, 2018, 9:52 AM IST
ಬಸೆಟರ್ (ಸೇಂಟ್ ಕಿಟ್ಸ್): ವೆಸ್ಟ್ ಇಂಡೀಸಿನ ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸರ್ವಾಧಿಕ ಸಿಕ್ಸರ್ ಬಾರಿಸಿದ ಪಾಕಿಸ್ಥಾನದ ಶಾಹಿದ್ ಅಫ್ರಿದಿ ಅವರ ವಿಶ್ವದಾಖಲೆಯನ್ನು ಸರಿದೂಗಿಸಿದ್ದಾರೆ.
ಬಾಂಗ್ಲಾದೇಶ ವಿರುದ್ಧ ಇಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಕ್ರಿಸ್ ಗೇಲ್ ಅಂತಾರಾಷ್ಟ್ರೀಯ ಕ್ರಿಕೆಟಿನ 476ನೇ ಸಿಕ್ಸರ್ ಬಾರಿಸಿದರು. ಅಫ್ರಿದಿ ಕೂಡ ಇಷ್ಟೇ ಸಿಕ್ಸರ್ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ್ದರು. ಆದರೆ ಅಫ್ರಿದಿ ಇದಕ್ಕಾಗಿ 524 ಪಂದ್ಯಗಳನ್ನಾಡಿದರೆ, ಗೇಲ್ ಕೇವಲ 443 ಪಂದ್ಯಗಳಲ್ಲಿ ವಿಶ್ವದಾಖಲೆ ಸರಿದೂಗಿಸಿದ್ದು ವಿಶೇಷ.
ಅಫ್ರಿದಿ ಏಕದಿನದಲ್ಲಿ 351 ಸಿಕ್ಸರ್, ಟಿ ಟ್ವೆಂಟಿಯಲ್ಲಿ 73 ಸಿಕ್ಸರ್ ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ 52 ಸಿಕ್ಸರ್ ಬಾರಿಸಿದ್ದಾರೆ. ಗೇಲ್ ಏಕದಿನದಲ್ಲಿ 275, ಟಿ ಟ್ವೆಂಟಿಯಲ್ಲಿ 103 ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ 98 ಸಿಕ್ಸರ್ ಸಿಡಿಸಿದ್ದಾರೆ.
ಭಾರತೀಯ ಸಿಕ್ಸರ್ ದಾಖಲೆ ಮಹೇಂದ್ರ ಸಿಂಗ್ ಧೋನಿ ಹೆಸರಲ್ಲಿದೆ (504 ಪಂದ್ಯಗಳಿಂದ 342 ಸಿಕ್ಸರ್). ಈ ಯಾದಿಯಲ್ಲಿ ಅವರಿಗೆ 5ನೇ ಸ್ಥಾನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Athletics: ಕಿರಿಯರ ಏಷ್ಯನ್ ಆ್ಯತ್ಲೆಟಿಕ್ಸ್ ಜಾವೆಲಿನ್ನಲ್ಲಿ ದೀಪಾಂಶುಗೆ ಬಂಗಾರ
Gukesh: ಚಾಂಪಿಯನ್ ಗುಕೇಶ್ಗೆ ಭವ್ಯ ಸ್ವಾಗತ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್