ಚಾಂಪಿಯನ್‌ ಬುಲ್ಸ್‌ ಗೆಲುವಿನ ಆರಂಭ

ಪ್ರೊ ಕಬಡ್ಡಿ 7: ಮೊದಲ ಮುಖಾಮುಖೀಯಲ್ಲಿ ಮುಂಬಾ ಜಯ

Team Udayavani, Jul 21, 2019, 12:09 AM IST

ಹೈದರಾಬಾದ್‌: ಇಲ್ಲಿನ ಗಚ್ಚಿಬೌಲಿ ಒಳ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾದ 7ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಹಾಲಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ತಂಡ ಶುಭಾರಂಭ ಮಾಡಿದೆ. ದಿನದ ದ್ವಿತೀಯ ಪಂದ್ಯದಲ್ಲಿ ಅದು ಪಾಟ್ನಾ ಪೈರೇಟ್ಸ್‌ಗೆ 34-32 ಅಂಕಗಳ ಸೋಲುಣಿಸಿದೆ.

ಮೊದಲ ಮುಖಾಮುಖೀಯಲ್ಲಿ ಆತಿಥೇಯ ತೆಲುಗು ಟೈಟಾನ್ಸ್‌ ತಂಡವನ್ನು ಯು ಮುಂಬಾ 31-25 ಅಂಕಗಳಿಂದ ಮಣಿಸಿತು.

ಅಭಿಷೇಕ್‌, ನರ್ವಾಲ್‌ ಮಿಂಚು
ಮುಂಬಾ ಗೆಲುವಿಗೆ ಅಭಿಷೇಕ್‌ ಸಿಂಗ್‌ ಮತ್ತು ಸಂದೀಪ್‌ ನರ್ವಾಲ್‌ ನೆರವಾದರು. ದಾಳಿಯಲ್ಲಿ ಮಿಂಚಿದ ಅಭಿಷೇಕ್‌ 16 ಬಾರಿ ಯತ್ನ ನಡೆಸಿ 10 ಅಂಕ ಗಳಿಸಿದರು. ಇನ್ನೊಂದು ಕಡೆ ರೋಹಿತ್‌ ಬಲಿಯನ್‌ ಕೂಡ ದಾಳಿಯಲ್ಲಿ ಮಿಂಚಿ 4 ಅಂಕ ಗಳಿಸಿದರು. ಇವರಿಗೆ ರಕ್ಷಣೆಯಲ್ಲಿ ಸಂದೀಪ್‌ ನರ್ವಾಲ್‌ ನೆರವಿಗೆ ನಿಂತರು. ಎದುರಾಳಿಯನ್ನು ಕೆಡವಿಕೊಳ್ಳಲು 5 ಬಾರಿ ಯತ್ನ ನಡೆಸಿ ಅದರಲ್ಲಿ 4 ಅಂಕ ಪಡೆದರು. ಇದು ಮುಂಬಾ ಗೆಲುವನ್ನು ಖಚಿತಪಡಿಸಿತು.

ಇಡೀ ಪಂದ್ಯ ಅತ್ಯಂತ ಜಿದ್ದಾಜಿದ್ದಿಯಿಂದ ಕೂಡಿತ್ತು. ಒಂದೊಂದು ಅಂಕ ಗಳಿಸಲೂ ಎರಡೂ ತಂಡಗಳು ಪರದಾಡಿದವು. ಮುಂಬಾ ತಂಡ ಸಂಘಟಿತವಾಗಿ ಆಡಿದ್ದರಿಂದ ತೆಲುಗು ಟೈಟಾನ್ಸ್‌ ಸವಾಲನ್ನು ಮೀರಿ ನಿಲ್ಲಲು ಸಾಧ್ಯವಾಯಿತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ