ಇಂದಿನಿಂದ 44ನೇ ಚೆಸ್‌ ಒಲಿಂಪಿಯಾಡ್‌: ಆತಿಥೇಯ ಭಾರತಕ್ಕೆ ಪ್ರತಿಷ್ಠೆಯ ಪಂದ್ಯಾವಳಿ

ದೇಶದ 6 ತಂಡಗಳಿಗೆ ವಿಶ್ವನಾಥನ್‌ ಆನಂದ್‌ ಮೆಂಟರ್‌

Team Udayavani, Jul 28, 2022, 5:15 AM IST

ಇಂದಿನಿಂದ 44ನೇ ಚೆಸ್‌ ಒಲಿಂಪಿಯಾಡ್‌: ಆತಿಥೇಯ ಭಾರತಕ್ಕೆ ಪ್ರತಿಷ್ಠೆಯ ಪಂದ್ಯಾವಳಿ

ಮಾಮಲ್ಲಪುರಂ (ತಮಿಳುನಾಡು): ಪ್ರತಿಷ್ಠಿತ ಚೆಸ್‌ ಒಲಿಂಪಿಯಾಡ್‌ ಸ್ಪರ್ಧೆ ಗುರುವಾರದಿಂದ ತಮಿಳುನಾಡಿನಲ್ಲಿ ಆರಂಭವಾಗಲಿದೆ.

ತಾಣ, ಚೆನ್ನೈನಿಂದ 58 ಕಿ.ಮೀ. ದೂರದ ಮಾಮಲ್ಲಪುರಂ. ಕಳೆದ ಕೆಲವು ವರ್ಷಗಳಿಂದ ಚದುರಂಗದಲ್ಲಿ ಗಮನಾರ್ಹ ಸಾಧನೆಯೊಂದಿಗೆ ಮಿಂಚುತ್ತಿರುವ ಭಾರತದ ಪಾಲಿಗೆ ಇದೊಂದು ಪ್ರತಿಷ್ಠೆಯ ಪಂದ್ಯಾವಳಿಯಾಗಿದೆ.

ಚೆಸ್‌ ಪವರ್‌ಹೌಸ್‌ ರಷ್ಯಾ ಮತ್ತು ಚೀನ ಗೈರಿನಿಂದಾಗಿ ಭಾರತಕ್ಕೆ ಇಲ್ಲಿ ಮೇಲುಗೈ ಸಾಧಿಸುವ ಉತ್ತಮ ಅವಕಾಶ ಇದೆ ಎಂಬುದೊಂದು ಲೆಕ್ಕಾಚಾರ. ಓಪನ್‌ ಮತ್ತು ವನಿತಾ ವಿಭಾಗಗಳಲ್ಲಿ ಭಾರತ ತಲಾ 3 ತಂಡಗಳನ್ನು ಕಣಕ್ಕಿಳಿಸಲಿದೆ. 5 ಬಾರಿಯ ವಿಶ್ವ ಚಾಂಪಿಯನ್‌ ವಿಶ್ವನಾಥನ್‌ ಆನಂದ್‌ ಮೆಂಟರ್‌ ಆಗಿರುವುದರಿಂದ ಭಾರತೀಯರಿಗೆ ಲಾಭವಾಗುವ ಸಾಧ್ಯತೆ ಹೆಚ್ಚು.

ಓಪನ್‌ ವಿಭಾಗದಲ್ಲಿ 188 ತಂಡಗಳು ಹಾಗೂ ವನಿತಾ ವಿಭಾಗದಲ್ಲಿ 162 ತಂಡಗಳು ಸ್ಪರ್ಧಿಸುತ್ತಿರುವುದು ಚೆಸ್‌ ಒಲಿಂಪಿಯಾಡ್‌ ಇತಿಹಾಸದಲ್ಲೇ ಒಂದು ದಾಖಲೆ. ಭಾರತ ಎ ತಂಡವಿಲ್ಲಿ ದ್ವಿತೀಯ ಶ್ರೇಯಾಂಕ ಹೊಂದಿದೆ. ಅಮೆರಿಕಕ್ಕೆ ಅಗ್ರ ಶ್ರೇಯಾಂಕ ಲಭಿಸಿದೆ. ದೊಡ್ಡ ಪದಕಕ್ಕಾಗಿ ಭಾರತ ತಂಡ ನಾರ್ವೆ ಮತ್ತು ಅಜರ್‌ಬೈಜಾನ್‌ ಜತೆಯೂ ಸೆಣೆಸಬೇಕಿದೆ.

ಪಿ.ಹರಿಕೃಷ್ಣ, ಅರ್ಜುನ್‌ ಇರಿಗೇಸಿ, ವಿದಿತ್‌ ಗುಜರಾತಿ, ಕೆ. ಶಶಿಕಿರಣ್‌, ಎಸ್‌.ಎಲ್‌.ನಾರಾಯಣ್‌ ಈ ವಿಭಾಗದಲ್ಲಿದ್ದಾರೆ.

ಭಾರತ “ಬಿ’ ತಂಡ ಪ್ರತಿಭಾನ್ವಿತ ಆಟಗಾರರನ್ನು ಹೊಂದಿದೆ. ಡಿ.ಗುಕೇಶ್‌, ಆರ್‌.ಪ್ರಜ್ಞಾನಂದ, ನಿಖೀಲ್‌ ಸರಿನ್‌, ರೌನಕ್‌ ಸಾಧ್ವನಿ, ಬಿ.ಅಧಿಬನ್‌ ಮೇಲೆ ಭಾರೀ ನಿರೀಕ್ಷೆ ಇಡಲಾಗಿದೆ ಎಂದು ಕೋಚ್‌ ರಮೇಶ್‌ ಹೇಳಿದ್ದಾರೆ.

ಭಾರತದ ಸಿ ತಂಡ ಅಗ್ರ ಶ್ರೇಯಾಂಕಿತರನ್ನು ಹಾಗೂ ಯುವ ಆಟಗಾರರನ್ನು ಹೊಂದಿದೆ. ಸೂರ್ಯಶೇಖರ್‌ ಗಂಗೂಲಿ ಇಲ್ಲಿನ ನೆಚ್ಚಿನ ಆಟಗಾರ. ಎಸ್‌.ಪಿ.ಸೇತುರಾಮನ್‌, ಅಭಿಜಿತ್‌ ಗುಪ್ತ, ಕಾರ್ತಿಕೇಯನ್‌ ಮುರಳಿ, ಅಭಿಮನ್ಯು ಪುರಾಣಿಕ್‌ ಉಳಿದ ಆಟಗಾರರು. ಆದರೆ ಶ್ರೇಯಾಂಕದಲ್ಲಿ ಸಿ ತಂಡ 17ರಷ್ಟು ಕೆಳ ಸ್ಥಾನದಲ್ಲಿದೆ.

ಅಮೆರಿಕವನ್ನು ಈ ಕೂಟದ ನೆಚ್ಚಿನ ತಂಡವೆಂದು ಬಣ್ಣಿಸಲಾಗುತ್ತಿದೆ. ಫ್ಯಾಬಿಯೊ ಕ್ಯಾರುವಾನ, ವೆಸ್ಲಿ ಸೋ, ಲೆವನ್‌ ಅರೋನಿಯನ್‌, ಸ್ಯಾಮ್‌ ಶಂಕ್‌ಲ್ಯಾಂಡ್‌, ಲೀನಿಯರ್‌ ಡೊಮಿನಿಗ್ವೆಝ್ ಅವರೆಲ್ಲ ಅಮೆರಿಕದ ಪ್ರಮುಖ ಸ್ಪರ್ಧಿಗಳು.

ವನಿತಾ ವಿಭಾಗ: ವನಿತೆಯರ ಎ ವಿಭಾಗಕ್ಕೆ ಅಗ್ರಶ್ರೇಯಾಂಕ ಲಭಿಸಿದೆ. ಕೊನೇರು ಹಂಪಿ, ಡಿ.ಹರಿಕಾ, ಆರ್‌.ವೈಶಾಲಿ, ತನಿಯಾ ಸಚೆªàವ್‌, ಭಕ್ತಿ ಕುಲಕರ್ಣಿ ಅವರೆಲ್ಲ ಇಲ್ಲಿನ ಪ್ರಮುಖ ಆಟಗಾರ್ತಿಯರು. ಬಿ ವಿಭಾಗದಲ್ಲಿ ವಂತಿಕಾ ಅಗರ್ವಾಲ್‌, ಸೌಮ್ಯಾ ಸ್ವಾಮಿನಾಥನ್‌, ಮೇರಿ ಆ್ಯನ್‌ ಗೋಮ್ಸ್‌, ಪದ್ಮಿನಿ ರಾವತ್‌, ದಿವ್ಯಾ ದೇಶ್‌ಮುಖ್‌; ಸಿ ವಿಭಾಗದಲ್ಲಿ ಇಶಾ ಕರ್ವಡೆ, ಸಾಹಿತಿ ವರ್ಷಿಣಿ, ಪ್ರತ್ಯೂಷಾ ಬೊಡ್ಡ, ಪಿ.ವಿ.ನಂದಿತಾ, ವಿಶ್ವಾ ವಸ್ನಾವಾಲ ಇದ್ದಾರೆ.

ಟಾಪ್ ನ್ಯೂಸ್

ಚೀನ ಮಾಜಿ ಅಧ್ಯಕ್ಷ ಜಿಯಾಂಗ್‌ ಜೆಮಿನ್‌ ನಿಧನ

ಚೀನ ಮಾಜಿ ಅಧ್ಯಕ್ಷ ಜಿಯಾಂಗ್‌ ಜೆಮಿನ್‌ ನಿಧನ

1-sadadasd

ಅಫ್ಘಾನ್ ಧಾರ್ಮಿಕ ಕೇಂದ್ರಕ್ಕೆ ಉಗ್ರ ದಾಳಿ : 10 ವಿದ್ಯಾರ್ಥಿಗಳು ಬಲಿ

tdy-20

ಮದುವೆಯಾದ ಕೆಲವೇ ಗಂಟೆಗಳಲ್ಲಿ ಉಸಿರು ನಿಲ್ಲಿಸಿದ ಖ್ಯಾತ ಗಾಯಕ: ಸಾವಿರಾರು ಮಂದಿ ಕಂಬನಿ

1-sddfdsf

ತಂದೆಗೆ ಮತ್ತೊಮ್ಮೆ ಸಿಎಂ ಆಗುವ ಅವಕಾಶವಿದೆ: ಡಾ.ಯತೀಂದ್ರ ಸಿದ್ದರಾಮಯ್ಯ

1 weqwew

ಯಕ್ಷರಂಗದ ಸು’ಪ್ರಾಸ’ಸಿದ್ದ ರಾಜಕಾರಣಿ ಕುಂಬಳೆಯ ರಾಯರು

ಕಾಸರಗೋಡು: ಚಿನ್ನ, ವಿದೇಶಿ ಕರೆನ್ಸಿ ಸಹಿತ ನಾಲ್ವರು ವಶಕ್ಕೆ

ಕಾಸರಗೋಡು: ಚಿನ್ನ, ವಿದೇಶಿ ಕರೆನ್ಸಿ ಸಹಿತ ನಾಲ್ವರು ವಶಕ್ಕೆ

ವಿಜಯ್ ಹಜಾರೆ ಟ್ರೋಫಿ: ಸೆಮಿಯಲ್ಲಿ ಸೋತ ಕರ್ನಾಟಕ; ಫೈನಲ್ ಪ್ರವೇಶಿಸಿದ  ಸೌರಾಷ್ಟ್ರ

ವಿಜಯ್ ಹಜಾರೆ ಟ್ರೋಫಿ: ಸೆಮಿಯಲ್ಲಿ ಸೋತ ಕರ್ನಾಟಕ; ಫೈನಲ್ ಪ್ರವೇಶಿಸಿದ  ಸೌರಾಷ್ಟ್ರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಜಯ್ ಹಜಾರೆ ಟ್ರೋಫಿ: ಸೆಮಿಯಲ್ಲಿ ಸೋತ ಕರ್ನಾಟಕ; ಫೈನಲ್ ಪ್ರವೇಶಿಸಿದ  ಸೌರಾಷ್ಟ್ರ

ವಿಜಯ್ ಹಜಾರೆ ಟ್ರೋಫಿ: ಸೆಮಿಯಲ್ಲಿ ಸೋತ ಕರ್ನಾಟಕ; ಫೈನಲ್ ಪ್ರವೇಶಿಸಿದ  ಸೌರಾಷ್ಟ್ರ

ಟೀಂ ಇಂಡಿಯಾಗೆ ಕರುಣೆ ತೋರಿದ ವರುಣ: ಅಂತಿಮ ಪಂದ್ಯವೂ ರದ್ದು; ಕಿವೀಸ್ ಗೆ ಸರಣಿ

ಟೀಂ ಇಂಡಿಯಾಗೆ ಕರುಣೆ ತೋರಿದ ವರುಣ: ಅಂತಿಮ ಪಂದ್ಯವೂ ರದ್ದು; ಕಿವೀಸ್ ಗೆ ಸರಣಿ

ಕಾಮನ್ವೆಲ್ತ್‌ ಪವರ್ ಲಿಫ್ಟಿಂಗ್‌: ಚಿನ್ನ ಗೆದ್ದ ಸತೀಶ್‌ ಖಾರ್ವಿ, ಪ್ರತೀಕ್ಷಾ ನಾಯಕ್

ಕಾಮನ್ವೆಲ್ತ್‌ ಪವರ್ ಲಿಫ್ಟಿಂಗ್‌: ಚಿನ್ನ ಗೆದ್ದ ಸತೀಶ್‌ ಖಾರ್ವಿ, ಪ್ರತೀಕ್ಷಾ ನಾಯಕ್

VVS Laxman backs Rishabh Pant in ODIs

ನಾಲ್ಕನೇ ಕ್ರಮಾಂಕದಲ್ಲಿ ಪಂತ್ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ: ವಿವಿಎಸ್ ಲಕ್ಷ್ಮಣ್

ಮತ್ತೆ ಮಳೆಯ ಮುನ್ಸೂಚನೆ: ಭಾರತಕ್ಕೆ ಸರಣಿ ಜಾರುವ ಆತಂಕ

ಮತ್ತೆ ಮಳೆಯ ಮುನ್ಸೂಚನೆ: ಭಾರತಕ್ಕೆ ಸರಣಿ ಜಾರುವ ಆತಂಕ

MUST WATCH

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

udayavani youtube

ಶಾರಿಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ವೈರಲ್ ಆಗುತ್ತಿದೆ ಸಿಸಿಟಿವಿ ಫೂಟೇಜ್…

ಹೊಸ ಸೇರ್ಪಡೆ

ಜೆಡಿಎಸ್‌ ಗೆದ್ದು ಎಚ್‌ಡಿಕೆ ಸಿಎಂ ಆಗ್ತಾರೆ: ಇಬ್ರಾಹಿಂ

ಜೆಡಿಎಸ್‌ ಗೆದ್ದು ಎಚ್‌ಡಿಕೆ ಸಿಎಂ ಆಗ್ತಾರೆ: ಇಬ್ರಾಹಿಂ

1-adasdasdsd

ವಾಂತಿ ಭೇದಿಯಿಂದ ಗ್ರಾಮಸ್ಥರು ಭಯ ಭೀತ; ಬಚನಾಳಕ್ಕೆ ವೈದ್ಯರ ತಂಡ, ಅಧಿಕಾರಿಗಳು

ಚೀನ ಮಾಜಿ ಅಧ್ಯಕ್ಷ ಜಿಯಾಂಗ್‌ ಜೆಮಿನ್‌ ನಿಧನ

ಚೀನ ಮಾಜಿ ಅಧ್ಯಕ್ಷ ಜಿಯಾಂಗ್‌ ಜೆಮಿನ್‌ ನಿಧನ

ಲೋಕಾಪುರ: ಜನರನ್ನು ತಪ್ಪು ದಾರಿಗೆಳೆಯಬೇಡಿ

1-dssadad

ಸುಳ್ಯ; ಅಸೌಖ್ಯದಿಂದ 8 ವರ್ಷದ ಬಾಲಕಿ ವಿಧಿವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.