ಚೇತೇಶ್ವರ ಪೂಜಾರ ಮತ್ತೆ ಸಸೆಕ್ಸ್ ಕೌಂಟಿಗೆ
Team Udayavani, Oct 25, 2022, 10:35 AM IST
ನವದೆಹಲಿ: ಭಾರತದ ಟೆಸ್ಟ್ ಬ್ಯಾಟರ್ ಚೇತೇಶ್ವರ ಪೂಜಾರ ಮತ್ತೆ ಇಂಗ್ಲಿಷ್ ಕೌಂಟಿ ಕ್ರಿಕೆಟ್ನಲ್ಲಿ ಸಸೆಕ್ಸ್ ಕೌಂಟಿಯನ್ನು ಪ್ರತಿನಿಧಿಸಲಿದ್ದಾರೆ.
2023ರ ಒಡಂಬಡಿಕೆಗೆ ಸಹಿ ಹಾಕಿದ ಬಳಿಕ ಮಾತಾಡಿದ ಚೇತೇಶ್ವರ ಪೂಜಾರ, 2023ರಲ್ಲೂ ಸಸೆಕ್ಸ್ ಕೌಂಟಿಯನ್ನು ಪ್ರತಿನಿಧಿಸುತ್ತಿರುವುದು ಖುಷಿಕೊಟ್ಟಿದೆ. ಕಳೆದ ಋತುವಿನುದ್ದಕ್ಕೂ ಸಂತಸ ಅನುಭವಿಸಿದೆ. ಮುಂದೆಯೂ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಲು ಬಯಸುತ್ತೇನೆ’ ಎಂದರು.
ಇದನ್ನೂ ಓದಿ:ಬಾಂಗ್ಲಾದೇಶದಲ್ಲಿ ಸಿತ್ರಂಗ್ ಚಂಡಮಾರುತದ ಹಾವಳಿ: 9 ಮಂದಿ ಬಲಿ; ಭಾರತದ ಹಲವೆಡೆ ಭಾರೀ ಮಳೆ
ಸಸೆಕ್ಸ್ ಕೌಂಟಿಯ ಪರ್ಫಾರ್ಮೆನ್ಸ್ ಡೈರೆಕ್ಟರ್ ಕೀತ್ ಗ್ರೀನ್ ಫೀಲ್ಡ್ ಅವರು ಪೂಜಾರ ಪುನರಾಗಮನವನ್ನು ಸಾರಿದರು. 2022ರ ಕೌಂಟಿ ಋತುವಿನಲ್ಲಿ ಪೂಜಾರ 3 ದ್ವಿಶತಕ ಸೇರಿದಂತೆ, 109.4ರ ಸರಾಸರಿಯಲ್ಲಿ ಸಾವಿರ ರನ್ ಬಾರಿಸಿದ್ದರು. ಟಾಮ್ ಹೇನ್ಸ್ ಗಾಯಾಳಾಗಿ ಹೊರಗುಳಿದಾಗ ರಾಯಲ್ ಲಂಡನ್ ಕಪ್ ಸರಣಿಯಲ್ಲಿ ತಂಡದ ನಾಯಕನಾಗುವ ಅವಕಾಶವೂ ಪೂಜಾರ ಅವರಿಗೆ ಒಲಿದು ಬಂದಿತ್ತು.