ಕೌಂಟಿ ಜತೆ ಪೂಜಾರ ಒಪ್ಪಂದ ರದ್ದು
Team Udayavani, Apr 10, 2020, 6:37 AM IST
ಹೊಸದಿಲ್ಲಿ: ಕೋವಿಡ್ 19 ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಕೌಂಟಿ ಚಾಂಪಿಯನ್ಶಿಪ್ನ ಮೊದಲ ಆರು ಪಂದ್ಯಗಳಿಗೆ ಭಾರತದ ಖ್ಯಾತ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ ಅವರು ಗ್ಲೌಸೆಸ್ಟರ್ಶೈರ್ ಕೌಂಟಿ ಜತೆ ಮಾಡಿಕೊಂಡ ಒಪ್ಪಂದವು ರದ್ದುಗೊಂಡಿದೆ.
ಪೂಜಾರ ಕೌಂಟಿಯ ಮೊದಲ ಅವಧಿಯಲ್ಲಿ ಕ್ಲಬ್ ಪರ ಆರು ಪಂದ್ಯಗಳಲ್ಲಿ ಆಡಬೇಕಿತ್ತು. ಆದರೆ ಜಾಗತಿಕವಾಗಿ ಆರೋಗ್ಯ ಸಮಸ್ಯೆ ಕಾಡುತ್ತಿರುವ ಕಾರಣ ಇಂಗ್ಲೆಂಡ್ ಮಂಡಳಿ ಮೇ 28ರ ವರೆಗಿನ ಎಲ್ಲ ಕ್ರಿಕೆಟ್ ಪಂದ್ಯಗಳನ್ನು ರದ್ದುಗೊಳಿಸಿದ್ದ ರಿಂದ ಪೂಜಾರ ಆಡುತ್ತಿಲ್ಲ.
ಕೋವಿಡ್ 19ದಿಂದ ಸದ್ಯ ಮೇ ಅಂತ್ಯದವರೆಗೆ ಕ್ರಿಕೆಟ್ ಆಟ ರದ್ದುಗೊಂಡಿದೆ. ಆದರೆ ಇದು ಮುಂದುವರಿಯುವ ಸಾಧ್ಯತೆ ಬಲವಾಗಿದೆ. ಹೀಗಾಗಿ ಪೂಜಾರ ಅವರ ಆಟವನ್ನು ನೋಡುವ ಅವಕಾಶದಿಂದ ವಂಚಿತರಾಗಿದ್ದೇವೆ ಎಂದು ಕ್ಲಬ್ನ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ