ಮಿಲಿಟರಿ ವಿಶ್ವ ಗೇಮ್ಸ್‌ಗೆ ಚೀನ ಸಿದ್ಧತೆ

Team Udayavani, Jul 22, 2019, 5:48 AM IST

ವುಹಾನ್‌: ಬೀಜಿಂಗ್‌ ಒಲಿಂಪಿಕ್‌ ಕೂಟವನ್ನು 2008ರಲ್ಲಿ ಅತ್ಯಂತ ಯಶಸ್ವಿಯಾಗಿ ಆಯೋಜಿಸಿದ ಚೀನ ಇದೀಗ ಮತ್ತೂಂದು ಬೃಹತ್‌ ಕೂಟವನ್ನು ಆಯೋಜಿಸಲು ಸಿದ್ಧತೆ ನಡೆಸುತ್ತಿದೆ.

ಮಿಲಿಟರಿ ವಿಶ್ವ ಗೇಮ್ಸ್‌ ಅಕ್ಟೋಬರ್‌ನಲ್ಲಿ ನಡೆಯಲಿದ್ದು, ವುಹಾನ್‌ನ ಹುಬೆಯ್‌ ನಗರವು ಭಾರತ ಸಹಿತ 100ಕ್ಕೂ ಹೆಚ್ಚಿನ ರಾಷ್ಟ್ರಗಳ ಮಿಲಿಟರಿ ಆ್ಯತ್ಲೀಟ್‌ಗಳ ಸ್ವಾಗತಕ್ಕೆ ಸಿದ್ಧವಾಗಿದೆ.

ನೂರಾರು ಸರೋವರಗಳ ನಗರವೆಂಬ ಖ್ಯಾತಿಯ ಹುಬೆಯ್‌ನಲ್ಲಿ ಅ. 18ರಿಂದ 27ರ ವರೆಗೆ 7ನೇ ಮಿಲಿಟರಿ ವಿಶ್ವ ಗೇಮ್ಸ್‌ ನಡೆಯಲಿದ್ದು, ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಸುವ ನಿಟ್ಟಿನಲ್ಲಿ ಇದೇ ಹುಬೆಯ್‌ ನಗರದಲ್ಲಿ ಮಾತುಕತೆ ನಡೆಸಿದ್ದರು.

ಮಿಲಿಟರಿ ಸೈನಿಕರ ಒಲಿಂಪಿಕ್ಸ್‌ ಎಂದೇ ಕರೆಯ ಲ್ಪಡುವ ಮಿಲಿಟರಿ ವಿಶ್ವ ಗೇಮ್ಸ್‌ ಜಗತ್ತಿನಾ ದ್ಯಂತದ ಸೈನಿಕರಿಗಾಗಿ ಇರುವ ಅತ್ಯುನ್ನತ ಗುಣಮಟ್ಟದ ಬಹು ಕ್ರೀಡೆಗಳ ಕೂಟವಾಗಿದೆ.

10 ಸಾವಿರ ಮಿಲಿಟರಿ ಆ್ಯತ್ಲೀಟ್ಸ್‌
ಸಂಘಟಕರು ಹೇಳುವಂತೆ ನೂರಕ್ಕಿಂತ ಹೆಚ್ಚಿನ ದೇಶಗಳ 10 ಸಾವಿರ ಮಿಲಿಟರಿ ಆ್ಯತ್ಲೀಟ್‌ಗಳು 27 ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಲಿದ್ದಾರೆ.

ಈ ಹಿಂದೆ ಭಾರತ, ಇಟಲಿ, ಕ್ರೊವೇಶಿಯ, ಬ್ರಝಿಲ್‌ ಮತ್ತು ದಕ್ಷಿಣ ಕೊರಿಯದಲ್ಲಿ ಈ ಕೂಟ ನಡೆದಿತ್ತು. 2007ರ ಮಿಲಿಟರಿ ವಿಶ್ವ ಗೇಮ್ಸ್‌ ಹೈದರಾಬಾದ್‌-ಸಿಕಂದರಾಬಾದ್‌ನಲ್ಲಿ ನಡೆದಿತ್ತು. 101 ದೇಶಗಳ 5 ಸಾವಿರಕ್ಕಿಂತ ಹೆಚ್ಚಿನ ಆ್ಯತ್ಲೀಟ್‌ಗಳು ಭಾಗವಹಿಸಿದ್ದರು. ಅಂದಿನ ಕೆಲವು ಸ್ಪರ್ಧೆಗಳು ಮುಂಬಯಿಯಲ್ಲಿ ನಡೆದಿದ್ದವು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ