ಚಿಂಕಿ ಯಾದವ್‌ ಒಲಿಂಪಿಕ್ಸ್‌ಗೆ ಅರ್ಹತೆ

Team Udayavani, Nov 8, 2019, 11:28 PM IST

ದೋಹಾ: ಭಾರತದ ಚಿಂಕಿ ಯಾದವ್‌ 14ನೇ ಏಶ್ಯನ್‌ ಶೂಟಿಂಗ್‌ ಚಾಂಪಿಯನ್‌ಶಿಪ್‌ನ ವನಿತೆಯರ 25ಮೀ. ಪಿಸ್ತೂಲ್‌ ವಿಭಾಗದಲ್ಲಿ ಫೈನಲಿಗೇರುವ ಮೂಲಕ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿಕೊಂಡಿದ್ದಾರೆ.

ಅರ್ಹತಾ ಸುತ್ತಿನಲ್ಲಿ ಪರಿಪೂರ್ಣ 100 ಅಂಕ ಸಹಿತ ಒಟ್ಟು 588 ಅಂಕ ಪಡೆದ ಚಿಂಕಿ ಎರಡನೇ ಸ್ಥಾನದೊಂದಿಗೆ ಫೈನಲಿಗೇರಿದರು. ಆದರೆ ಫೈನಲ್‌ನಲ್ಲಿ ಯಾವುದೇ ಪದಕ ಗೆಲ್ಲಲು ವಿಫ‌ಲರಾದ ಚಿಂಕಿ ಎಲ್ಲರನ್ನೂ ನಿರಾಸೆಯಲ್ಲಿ ಮುಳುಗಿಸಿದರು. ಫೈನಲ್‌ನಲ್ಲಿ ಅವರು ಆರನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು.

ನನಗಾದ ಖುಷಿಯನ್ನು ವರ್ಣಿಸಲು ಶಬ್ದಗಳು ಸಿಗುತ್ತಿಲ್ಲ. ಇದು ನನ್ನ ಶ್ರೇಷ್ಠ ನಿರ್ವಹಣೆ ಎಂದು ಚಿಂಕಿ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ ಬಳಿಕ ಹೇಳಿದ್ದಾರೆ.

ಈ ಸ್ಪರ್ಧೆಯಲ್ಲಿ ಪಾಲ್ಗೊಂಡ ಭಾರತದ ಇತರ ಸ್ಪರ್ಧಿಗಳಾ ದ ಅನ್ನುರಾಜ್‌ ಸಿಂಗ್‌ (575) ಮತ್ತು ನೀರಜ್‌ ಕೌರ್‌ (572) ಅನುಕ್ರಮವಾಗಿ 21ನೇ ಮತ್ತು 27ನೇ ಸ್ಥಾನ ಪಡೆದಿದ್ದರು.

11ನೇ ಶೂಟರ್‌
ಚಿಂಕಿ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ ಭಾರತದ 11ನೇ ಮತ್ತು 25 ಮೀ. ಪಿಸ್ತೂಲ್‌ ವಿಭಾಗದಲ್ಲಿ ಒಲಿಂಪಿಕ್ಸ್‌ ಗೆ ಅರ್ಹತೆ ಪಡೆದ ಎರಡನೇ ಶೂಟರ್‌ ಆಗಿದ್ದಾರೆ. ಈ ಮೊದಲು ಮ್ಯೂನಿಕ್‌ನಲ್ಲಿ ನಡೆದ ಶೂಟಿಂಗ್‌ ವಿಶ್ವಕಪ್‌ನಲ್ಲಿ ರಾಹಿ ಸರ್ನೋಬಾಟ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ