ಚಿನ್ನ ಗೆದ್ದ ಚಿತ್ರಾ; ಜಿನ್ಸನ್‌ಗೆ ಬೆಳ್ಳಿ

ಫೋಕ್‌ಸಾಮ್‌ ಗ್ರ್ಯಾನ್‌ಪ್ರಿ

Team Udayavani, Jun 20, 2019, 5:45 AM IST

ಹೊಸದಿಲ್ಲಿ: ಏಶ್ಯನ್‌ ಚಾಂಪಿಯನ್‌ ಪಿ.ಯು. ಚಿತ್ರಾ ಸ್ವೀಡನ್‌ನಲ್ಲಿ ನಡೆದ “ಫೋಕ್‌ಸಾಮ್‌ ಗ್ರ್ಯಾನ್‌ಪ್ರಿ’ ಆ್ಯತ್ಲೆಟಿಕ್ಸ್‌ ಕೂಟದಲ್ಲಿ ಚಿನ್ನದ ಪದಕ ಗೆದ್ದು ಸಂಭ್ರಮಿಸಿದ್ದಾರೆ. ಚಿತ್ರಾ ವನಿತೆಯರ 1,500 ಮೀ. ಓಟದಲ್ಲಿ ಮಾಜಿ ಕಾಮನ್ವೆಲ್ತ್‌ ಗೇಮ್ಸ್‌ ಚಾಂಪಿಯನ್‌ ಕೀನ್ಯಾದ ಮೆರ್ಸಿ ಚೆರೋನೊ ಅವರನ್ನು ಹಿಂದಿಕ್ಕಿದರು. 4 ನಿಮಿಷ 12.65 ಸೆಕೆಂಡ್‌ಗಳಲ್ಲಿ ಚಿತ್ರಾ ಗುರಿ ಮುಟ್ಟಿದರು. ಇದು ಪ್ರಸಕ್ತ ಋತುವಿನಲ್ಲಿ ಚಿತ್ರಾ ಅವರ ಅತ್ಯುತ್ತಮ ಸಾಧನೆಯಾಗಿದೆ.

ಐಎಎಎಫ್ ವರ್ಲ್ಡ್ ಕ್ರಾಸ್‌ ಕಂಟ್ರಿ ಚಾಂಪಿಯನ್‌ ಹಾಗೂ 2013ರ ವಿಶ್ವ ಚಾಂಪಿ ಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಚೆರೋನೊ 4 ನಿಮಿಷ 13.34 ಸೆಕೆಂಡ್‌ ತೆಗೆದುಕೊಂಡರು.

ಜಿನ್ಸನ್‌ಗೆ ಬೆಳ್ಳಿ ಪದಕ
ಏಶ್ಯನ್‌ ಗೇಮ್ಸ್‌ ಚಿನ್ನದ ಪದಕ ವಿಜೇತ ಜಿನ್ಸನ್‌ ಜಾನ್ಸನ್‌ ಪುರುಷರ 1,500 ಮೀ. ಓಟದಲ್ಲಿ 3 ನಿ. 39.69 ಸೆಕೆಂಡ್‌ಗಳಲ್ಲಿ ಓಟ ಮುಗಿಸಿ ಬೆಳ್ಳಿ ಪದಕ ಜಯಿಸಿದರು. ಚಿನ್ನದ ಪದಕ ಅತಿಥೇಯ ನಾಡಿನ ಆ್ಯಂಡ್ರಿಸ್‌ ಪಾಲಾಯಿತು.

ಮುರಳಿ ಶ್ರೀಶಂಕರ್‌ಗೆ ಚಿನ್ನ
ರಾಷ್ಟ್ರೀಯ ದಾಖಲೆ ಹೊಂದಿರುವ ಮುರಳಿ ಶ್ರೀಶಂಕರ್‌ ಡೆನ್ಮಾರ್ಕ್‌ನಲ್ಲಿ ಕೊಪನ್‌ಹೆಗನ್‌ ಆ್ಯತ್ಲೆಟಿಕ್ಸ್‌ನ ಪುರುಷರ ಲಾಂಗ್‌ಜಂಪ್‌ ಸ್ಪರ್ಧೆಯಲ್ಲಿ 7. 93 ಮೀ. ಜಿಗಿದು ಚಿನ್ನದ ಪದಕಕ್ಕೆ ಕೊರಳೊಡಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ರಾಜ್ಯದಲ್ಲಿ ಐದು ತಿಂಗಳ ಹಿಂದೆ ನಡೆದ ರಾಜಕೀಯ ಪ್ರಹಸನದ ಅನಂತರ ರಚನೆಯಾದ ಬಿಜೆಪಿ ಸರಕಾರದ ಅಳಿವು-ಉಳಿವು ಹಾಗೂ ಅನರ್ಹಗೊಂಡ 17 ಶಾಸಕರ ಪೈಕಿ ಉಪಚುನಾವಣೆಗೆ...

  • ಹೊಸದಿಲ್ಲಿ: ಸೋಮವಾರದಿಂದ ರಣಜಿ ಪಂದ್ಯಾವಳಿ ಆರಂಭವಾಗಲಿದೆ. ಆದರೆ ಬಿಸಿಸಿಐ ಇನ್ನೂ ಅಂಕಣ ಹೇಗಿರಬೇಕೆಂಬ ಮಾರ್ಗದರ್ಶಿ ಸೂತ್ರಗಳನ್ನು ತಿಳಿಸಿಲ್ಲ ಎಂದು ಕ್ಯುರೇಟರ್‌ಗಳು...

  • ಹೊಸದಿಲ್ಲಿ: ಎಲ್ಲ ವಾಹನ ಮಾಲಕರೂ ತಮ್ಮ ವಾಹನಗಳ ಸಂಖ್ಯೆಗೆ ತಮ್ಮ ಮೊಬೈಲ್‌ ಸಂಖ್ಯೆಗಳನ್ನು ಜೋಡಿಸುವ ನಿಯಮ ಎ. 1ರಿಂದ ದೇಶವ್ಯಾಪಿ ಕಡ್ಡಾಯವಾಗಲಿದೆ. ಕೇಂದ್ರ ಸಾರಿಗೆ...

  • ಕೋಟಿ ರೂ. ಎನ್ನುವುದು ನಮಗೆ ಇಂದಿಗೂ ಕನಸು. ಅಷ್ಟು ಹಣ ಸಂಪಾದಿಸಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದರೆ, ಬ್ಯಾಂಕಿನಲ್ಲಿ ತಿಂಗಳಿಗೆ ಕೇವಲ 5,000ರೂ. ಕೂಡಿಡುವುದರ...

  • ಮೇಲುನೋಟಕ್ಕೆ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕುಗಳ ನಡುವೆ ಜನರಿಗೆ ವ್ಯತ್ಯಾಸವೇನೂ ಕಾಣುವುದಿಲ್ಲ. ಅವೆರಡೂ ಒಂದೇ ರೀತಿ ಕಾರ್ಯ ನಿರ್ವಹಿಸುತ್ತಿರುವಂತೆ ಕಾಣುತ್ತದೆ....