ಓವರೊಂದರಲ್ಲಿ 32 ರನ್ ಸಿಡಿಸಿದ ಕ್ರಿಸ್ ಗೇಲ್
Team Udayavani, Aug 4, 2019, 5:20 AM IST
ಹೊಸದಿಲ್ಲಿ: ಕೆನಡದಲ್ಲಿ ಸಾಗುತ್ತಿರುವ ಗ್ಲೋಬಲ್ ಟಿ20 ಕೂಟದಲ್ಲಿ ವೆಸ್ಟ್ಇಂಡೀಸ್ನ ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ಸಿಕ್ಸರ್ಗಳ ಸುರಿಮಳೆ ಸುರಿಸಿ ಸುದ್ದಿಯಾಗಿದ್ದಾರೆ. ಅವರು ವಿಶ್ವದ ಎಲ್ಲೆ ಆಡಿದರೂ ಸಿಕ್ಸರ್ಗಳಿಗೆ ಬರವಿಲ್ಲ.
ಶಾದಾಬ್ ಖಾನ್ ಅವರ ಒಂದು ಓವರಿನಲ್ಲಿ 32 ರನ್ ಸಿಡಿಸಿದ ಅವರು ಒಟ್ಟಾರೆ 44 ಎಸೆತಗಳಿಂದ 94 ರನ್ ಗಳಿಸಿದರು. ಇದರಿಂದಾಗಿ ವಾಂಕೋವರ್ ನೈಟ್ಸ್ ತಂಡವು ಆರು ವಿಕೆಟ್ಗಳಿಂದ ಎಡ್ಮಂಟನ್ ರಾಯಲ್ಸ್ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ.
6,6,4,4,6,6 ಶಾದಾಬ್ ಖಾನ್ ಎಸೆದ 13ನೇ ಓವರಿನಲ್ಲಿ ಗೇಲ್ ಅವರು ನಾಲ್ಕು ಸಿಕ್ಸರ್ ಮತ್ತು ಎರಡು ಬೌಂಡರಿ ಸಹಿತ 32 ರನ್ ಹೊಡೆದರು. ಒಟ್ಟಾರೆ 44 ಎಸೆತ ಎದುರಿಸಿದ ಅವರು 9 ಬೌಂಡರಿ ಮತ್ತು 6 ಸಿಕ್ಸರ್ ನೆರವಿನಿಂದ 94 ರನ್ ಹೊಡೆದರು. ವಾರದ ಹಿಂದೆ ಇದೇ ಕೂಟದ ಪಂದ್ಯವೊಂದರಲ್ಲಿ ಅವರು 122 ರನ್ ಗಳಿಸಿದ್ದರು. ಮತ್ತೆ ಶತಕ ದಾಖಲಿಸಲು ಆರು ರನ್ನಿನಿಂದ ಅವರು ಅವಕಾಶ ಕಳೆದುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು