ಸಿಂಧು ರನ್ನರ್ ಅಪ್‌ಗೆ ಸಮಾಧಾನ

ಇಂಡೋನೇಶ್ಯ ಓಪನ್‌ ಬ್ಯಾಡ್ಮಿಂಟನ್‌

Team Udayavani, Jul 22, 2019, 5:24 AM IST

ಜಕಾರ್ತಾ: ಏಳು ತಿಂಗಳ ಪ್ರಶಸ್ತಿ ಬರವನ್ನು ನೀಗಿಸುವಲ್ಲಿ ಪಿ.ವಿ. ಸಿಂಧು ವಿಫ‌ಲರಾಗಿದ್ದಾರೆ. ರವಿವಾರ ಮುಗಿದ “ಇಂಡೋನೇಶ್ಯ ಓಪನ್‌ ಬ್ಯಾಡ್ಮಿಂಟನ್‌’ ಕೂಟದಲ್ಲಿ ಅವರು ರನ್ನರ್ ಅಪ್‌ಗೆ ಸಮಾಧಾನ ಪಟ್ಟಿದ್ದಾರೆ.

ಜಪಾನಿನ ಅಕಾನೆ ಯಮಾಗುಚಿ ಎದುರಿನ ವನಿತಾ ಸಿಂಗಲ್ಸ್‌ ಪ್ರಶಸ್ತಿಹಣಾಹಣಿಯಲ್ಲಿ ಸಿಂಧು 15-21, 16-21 ನೇರ ಗೇಮ್‌ಗಳ ಸೋಲನುಭವಿಸಿದರು. ಇದು ಪ್ರಸಕ್ತ ಋತು ವಿನಲ್ಲಿ ಸಿಂಧು ಆಡಿದ ಮೊದಲ ಫೈನಲ್‌ ಆಗಿತ್ತು. 51 ನಿಮಿಷಗಳಲ್ಲಿ ಈ ಸ್ಪರ್ಧೆ ಮುಗಿಯಿತು.

ಅಕಾನೆ ಯಮಾಗುಚಿ ವಿರುದ್ಧ  ಸಿಂಧು 10-4 ಅಂತರದ ಗೆಲುವಿನ ದಾಖಲೆ ಹೊಂದಿದ್ದರು. ಅಷ್ಟೇ ಅಲ್ಲ, ಕಳೆದ ನಾಲ್ಕೂ ಪಂದ್ಯಗಳಲ್ಲಿ ಯಮಾಗುಚಿಗೆ ಸೋಲುಣಿಸಿದ್ದರು. ಹೀಗಾಗಿ ಫೈನಲ್‌ನಲ್ಲಿ ಸಿಂಧು ಅವರೇ ನೆಚ್ಚಿನ ಆಟಗಾರ್ತಿಯಾಗಿ ಗೋಚ ರಿಸಿದ್ದರು. ಆದರೆ ಯಮಾಗುಚಿ ತೋರ್ಪಡಿಸಿದ ಅಮೋಘ ಪ್ರದರ್ಶಕ್ಕೆ ಸಿಂಧು ಸಾಟಿಯಾಗಲಿಲ್ಲ.

ಡಿಸೆಂಬರ್‌ನಲ್ಲಿ ನಡೆದ “ಬಿಡಬ್ಲ್ಯುಎಫ್ ವರ್ಲ್ಡ್ ಟೂರ್‌ ಫೈನಲ್ಸ್‌’ನಲ್ಲಿ ಚಾಂಪಿಯನ್‌ ಆಗಿ ಮೂಡಿಬಂದ ಪಿ.ವಿ. ಸಿಂಧು, ಜಕಾರ್ತಾದಲ್ಲಿ ಅಮೋಘ ಪ್ರದರ್ಶನ ಕಾಯ್ದುಕೊಂಡು ಬಂದಿದ್ದರು. ಆದರೆ ಫೈನಲ್‌ನಲ್ಲಿ ನೈಜ ಪ್ರದರ್ಶನ ನೀಡುವಲ್ಲಿ ವಿಫ‌ಲರಾದರು.

ಮತ್ತೂಂದು ಫೈನಲ್‌ ಸೋಲು
ಸಿಂಧು ಫೈನಲ್‌ ಸೋಲಿಗೆ ಇದು ಮತ್ತೂಂದು ಸೇರ್ಪಡೆ. ವಿಶ್ವ ಚಾಂಪಿಯನ್‌ಶಿಪ್‌, ಏಶ್ಯನ್‌ ಗೇಮ್ಸ್‌, ಕಾಮನ್ವೆಲ್ತ್‌ ಗೇಮ್ಸ್‌, ಥಾಯ್ಲೆಂಡ್‌ ಓಪನ್‌, ಕಳೆದ ವರ್ಷದ ಇಂಡಿಯಾ ಓಪನ್‌ ಫೈನಲ್‌ಗ‌ಳಲ್ಲೂ ಸಿಂಧುಗೆ ಸೋಲೇ ಸಂಗಾತಿಯಾಗಿತ್ತು.

ನನ್ನಿಂದಲೇ ತಪ್ಪು ಸಂಭವಿಸಿತು
“ಯಮಾಗುಚಿ ನಿಜಕ್ಕೂ ಉತ್ತಮ ಪ್ರದರ್ಶನ ನೀಡಿದರು. ಸುದೀರ್ಘ‌ ರ್ಯಾಲಿಗಳು ಕಂಡುಬಂದವು. ಮೊದಲ ಗೇಮ್‌ನಲ್ಲಿ ಆಗಾಗ ಮುನ್ನಡೆ ಸಾಧಿಸಿದರೂ ನಾನೇ ಕೆಲವು ತಪ್ಪು ಮಾಡಿ ಎಡವಿದೆ. ಮೊದಲ ಗೇಮ್‌ ಗೆದ್ದದ್ದಿದ್ದರೆ ಫ‌ಲಿತಾಂಶ ಬೇರೆಯದೇ ಆಗುತ್ತಿತ್ತು’ ಎಂದು ಸಿಂಧು ಪ್ರತಿಕ್ರಿಯಿಸಿದರು.

ಇದು ಅಕಾನೆ ಯಮಾಗುಚಿ ವಿರುದ್ಧ ಆಡಿದ 15 ಪಂದ್ಯಗಳಲ್ಲಿ ಸಿಂಧು ಅನುಭವಿಸಿದ ಕೇವಲ 5ನೇ ಸೋಲು. ಕೊನೆಯ ಸಲ ಸೋತದ್ದು ಕಳೆದ ವರ್ಷದ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ ಸೆಮಿಫೈನಲ್‌ನಲ್ಲಿ. ಹಾಗೆಯೇ ಇದು ಪ್ರಸಕ್ತ ಋತುವಿನಲ್ಲಿ ಯಮಾಗುಚಿ ಪಾಲಾದ 3ನೇ ಪ್ರಶಸ್ತಿ. ಅವರು ಜರ್ಮನ್‌ ಓಪನ್‌, ಏಶ್ಯನ್‌ ಚಾಂಪಿಯನ್‌ಶಿಪ್‌ನಲ್ಲೂ ಕಿರೀಟ ಏರಿಸಿಕೊಂಡಿದ್ದರು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ