ಸೆಮಿಫೈನಲ್ ಪ್ರವೇಶಿಸಿದ ಮೇರಿ; ಪದಕ ಖಾತ್ರಿ
Team Udayavani, Apr 9, 2018, 6:10 AM IST
ಗೋಲ್ಡ್ಕೋಸ್ಟ್: ಐದು ಬಾರಿಯ ವಿಶ್ವ ಚಾಂಪಿಯನ್ ಬಾಕ್ಸರ್ ಎಂ.ಸಿ. ಮೇರಿ ಕೋಮ್ (48 ಕೆಜಿ) ಸೆಮಿಫೈನಲ್ ಪ್ರವೇಶಿಸುವ ಮೂಲಕ ತಮ್ಮ ಮೊದಲ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪದಕವನ್ನು ಖಾತ್ರಿಪಡಿಸಿದ್ದಾರೆ. ಅವರು ರವಿವಾರದ ಪಂದ್ಯದಲ್ಲಿ ಸ್ಕಾಟ್ಲೆಂಡ್ನ ಮೇಗನ್ ಗಾರ್ಡನ್ ಅವರನ್ನು 5-0 ಅಂತರದಿಂದ ಸೋಲಿಸಿ ಮುನ್ನಡೆ ಸಾಧಿಸಿದರು.
ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಮೇರಿ ಕೋಮ್ ಎ. 11ರ ಸೆಮಿಫೈನಲ್ ಸ್ಪರ್ಧೆಯಲ್ಲಿ ಶ್ರೀಲಂಕಾದ ಅನುಷಾ ದಿಲುÅಷಿ ಅವರನ್ನು ಎದುರಿಸಲಿದ್ದಾರೆ. ರಾಜ್ಯಸಭಾ ಸದಸ್ಯೆಯೂ ಆಗಿರುವ ಅನುಭವಿ ಬಾಕ್ಸರ್ ಮೇರಿ, ಸೆಮಿಫೈನಲ್ನಲ್ಲೂ ಗೆಲುವು ಸಾಧಿಸುವ ನಿರೀಕ್ಷೆಯಿದೆ.
ಈ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಕೋಮ್ಗೆ ಪದಕ ಖಚಿತಪಡಿಸಲು ಒಂದೇ ಪಂದ್ಯ ಗೆಲ್ಲಬೇಕಿತ್ತು. ಇದೀಗ ಸಾಕಾರಗೊಂಡಿದೆ. ಮೇರಿ ಇನ್ನೆಷ್ಟು ದೂರ ಪಯಣಿಸಬಹುದೆಂಬುದು ಮುಂದಿನ ಕುತೂಹಲ.