ಕಾಮನ್ವೆಲ್ತ್ ಗೇಮ್ಸ್ ಟೇಬಲ್ ಟೆನಿಸ್: ಕ್ವಾರ್ಟರ್‌ಗೆ ಭಾರತ
Team Udayavani, Aug 5, 2022, 9:11 PM IST
ಬರ್ಮಿಂಗ್‌ಹ್ಯಾಮ್: ಶುಕ್ರವಾರದ ಟೇಬಲ್ ಟೆನಿಸ್ ಸಿಂಗಲ್ಸ್, ಡಬಲ್ಸ್ ವಿಭಾಗದಲ್ಲಿ ಭಾರತದ ಬಹುತೇಕ ಆಟಗಾರರು ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್‌ಗೆ ಪಯಣ ಬೆಳೆಸಿದ್ದಾರೆ.
ವನಿತಾ ಸಿಂಗಲ್ಸ್‌ನಲ್ಲಿ ಮಣಿಕಾ ಬಾತ್ರಾ 11-4, 11-8, 11-6, 12-10 ಅಂತರದಿಂದ ಆಸ್ಟ್ರೇಲಿಯದ ಜೀ ಮಿನ್‌ಹ್ಯುಂಗ್ ಅವರನ್ನು ಪರಾಭವಗೊಳಿಸಿದರು. ಇವರ ಎದುರಾಳಿ ಸಿಂಗಾಪುರದ ಜಿಯಾನ್ ಜೆಂಗ್.
ಶ್ರೀಜಾ ಅಕುಲಾ ವೇಲ್ಸ್‌ನ ಚಾರ್ಲೋಟ್ ಕ್ಯಾರಿ ವಿರುದ್ಧ ದಿಟ್ಟ ಹೋರಾಟ ನಡೆಸಿ 8-11, 11-7, 12-14, 9-11, 11-4, 15-13, 12-10 ಅಂತರದಿಂದ ಗೆದ್ದು ನಿಟ್ಟುಸಿರೆಳೆದರು. ಕ್ವಾರ್ಟರ್ ಫೈನಲ್‌ನಲ್ಲಿ ಶ್ರೀಜಾ ಎದುರಾಳಿ ಕೆನಡಾದ ಮೊ ಜಾಂಗ್. ಮಿಶ್ರ ಡಬಲ್ಸ್‌ನಲ್ಲಿ ಮಣಿಕಾ ಬಾತ್ರಾ-ಜಿ.ಸಥಿಯನ್ ಜೋಡಿ ನೈಜೀರಿಯದ ಓಲಾಜಿದ್ ಒಮೊಟಾಯೊ-ಅಜೋಕೆ ಒಜೊಮಿ ಅವರನ್ನು 11-7, 11-6, 11-7ರಿಂದ ಮಣಿಸಿ ಕ್ವಾರ್ಟರ್ ಫೈನಲ್‌ಗೆ ಏರಿತು.
ಶ್ರೀಜಾ ಅಕುಲಾ-ಅಚಂತ ಶರತ್ ಕಮಲ್ ಮಲೇಷ್ಯಾದ ಲೆಯೋಂಡ್ ಚೀ ಫಾಂಗ್-ಹೊ ಯಿಂಗ್ ಅವರನ್ನು 5-11, 11-2, 11-6, 11-5 ಅಂತರದಿಂದ ಪರಾಭವಗೊಳಿಸಿದರು. ರೀತ್ ಟೆನಿಸನ್ ಅವರಿಗೆ ಕ್ವಾರ್ಟರ್ ಫೈನಲ್ ಬಾಗಿಲು ಮುಚ್ಚಲ್ಪಟ್ಟಿತು. ಅವರನ್ನು ಸಿಂಗಾಪುರದ ಫೆಂಗ್ ತಿಯಾನ್‌ವೀ 11-2, 11-4, 9-11, 11-3, 11-4ರಿಂದ ಮಣಿಸಿದರು. ಕ್ವಾರ್ಟರ್ ಫೈನಲ್ ಪಂದ್ಯಗಳೆಲ್ಲ ಶುಕ್ರವಾರ ತಡರಾತ್ರಿ ನಡೆಯಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಿಂಬಾಬ್ವೆಗೆ ಆಗಮಿಸಿದ ಟೀಮ್ ಇಂಡಿಯಾ: ಆಗಸ್ಟ್ 18ರಿಂದ 3 ಪಂದ್ಯಗಳ ಏಕದಿನ ಸರಣಿ
ನಾನು ನಿಜಕ್ಕೂ ಅದೃಷ್ಟವಂತೆ,ಈ ಬಾರಿ ಹ್ಯಾಟ್ರಿಕ್ ತಪ್ಪಲಿಲ್ಲ: ಅಲಾನಾ ಕಿಂಗ್
ಟೆಸ್ಟ್ ಸರಣಿ: ದಕ್ಷಿಣ ಆಫ್ರಿಕಾ ತಂಡದ ಬಲಗೈ ಪೇಸ್ ಬೌಲರ್ ಡ್ನೂನ್ ಒಲಿವರ್ ಔಟ್
ಕೆನಡಿಯನ್ ಮಾಸ್ಟರ್: ಹ್ಯೂಬರ್ಟ್ ಹುರ್ಕಾಝ್- ಪಾಬ್ಲೊ ಕರೆನೊ ಬುಸ್ಟ ಮುಖಾಮುಖಿ
ಖ್ಯಾತ ಟೆನಿಸಿಗ ನೊವಾಕ್ ಜೊಕೋವಿಕ್: ಮತ್ತೆ ಲಸಿಕೆ ವಿವಾದ