ಕಾಮನ್ವೆಲ್ತ್ ಗೇಮ್ಸ್: 2022; ಮಹಿಳಾ ಕ್ರಿಕೆಟ್ಗೆ ಸ್ಥಾನ
Team Udayavani, Jun 21, 2019, 5:57 AM IST
ಬರ್ಮಿಂಗ್ಹ್ಯಾಮ್: ಇಲ್ಲಿ 2022ರಲ್ಲಿ ನಡೆಯುವ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಮಹಿಳಾ ಕ್ರಿಕೆಟ್ಗೆ ಸ್ಥಾನ ಕಲ್ಪಿಸಲು ಕಾಮನ್ವೆಲ್ತ್ ಗೇಮ್ಸ್ ಫೆಡರೇಷನ್ ಕಾರ್ಯಕಾರಿ ಮಂಡಳಿ ಗುರುವಾರ ನಡೆಸಿದ ಸಭೆಯಲ್ಲಿ ನಿರ್ಧರಿಸಿದೆ.
ಕಾಮನ್ವೆಲ್ತ್ ಗೇಮ್ಸ್ನಲ್ಲಿ ಮಹಿಳಾ ಕ್ರಿಕೆಟ್ ಆಯೋಜಿಸಬೇಕೆಂದು ಪ್ರಸ್ತಾ ವನೆ ಸಲ್ಲಿಸಿದ್ದ ಐಸಿಸಿ ಹಾಗೂ ಇಸಿಬಿ ಈ ನಿರ್ಧಾರವನ್ನು ಸ್ವಾಗತಿಸಿವೆ. 1998ರಲ್ಲಿ ಕೌಲಾಲಂಪುರದಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪುರುಷರ ಕ್ರಿಕೆಟ್ ಪಂದ್ಯಾಟವೂ ನಡೆದಿತ್ತು. ಆ ಸಂದರ್ಭದಲ್ಲಿ ದ. ಆಫ್ರಿಕಾ ಚಿನ್ನದ ಪದಕ ಗಳಿಸಿತ್ತು.
ಕಾಮನ್ವೆಲ್ತ್ ಗೇಮ್ಸ್ ಫೆಡರೇಶನ್ ಕಾರ್ಯಕಾರಿ ಮಂಡಳಿ ಕೈಗೊಂಡಿ ರುವ ಈ ನಿರ್ಧಾರ ವನ್ನು ಒಕ್ಕೂಟದ ಸದಸ್ಯರು ಅಂಗೀಕರಿಸಬೇಕಿದೆ.
ಮಹಿಳೆಯರ ಸಶಕ್ತೀಕರಣ ಆದರೆ, ಇಸಿಬಿ ಜತೆ ಸೇರಿ ತಾವು ಸಲ್ಲಿಸಿದ ಪ್ರಸ್ತಾವವನ್ನು ಪರಿಗಣಿಸಿ, ಮಹಿಳಾ ಕ್ರಿಕೆಟನ್ನು ಕ್ರೀಡಾಕೂಟದ ಭಾಗವಾಗಿಸಲು ಸಿಜಿಎಫ್ ನಿರ್ಧ ರಿಸಿದ್ದು ಸಂತೋಷ ತಂದಿದೆ. ಮಹಿಳೆಯರ ಸಶಕ್ತೀಕರಣಕ್ಕೆ ಇದು ಕಾರಣವಾಗಲಿದೆ. ಕ್ರಿಕೆಟ್ ಸ್ಫೂರ್ತಿ ಯನ್ನು ಹೆಚ್ಚಿಸಲು ನೆರವಾಗಲಿದೆ ಎಂದು ಐಸಿಸಿ ಚೀಫ್ ಎಕ್ಸಿಕ್ಯೂಟಿವ್ ಮನು ಸಾವ್ನಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.