ಕಾಮನ್ವೆಲ್ತ್ ಗೇಮ್ಸ್ ಉದ್ಘಾಟನೆಗೆ ಸೀರೆ ಬದಲು ಪ್ಯಾಂಟು ಬಳಕೆ!
Team Udayavani, Feb 21, 2018, 6:10 AM IST
ನವದೆಹಲಿ: ವಿಶ್ವದ ಯಾವುದೇ ಕ್ರೀಡಾಕೂಟಗಳಿರಲಿ, ಅದು ಒಲಿಂಪಿಕ್ಸ್ ಅಗಿರಲಿ ಅಥವಾ ಕಾಮನ್ವೆಲ್ತ್ ಆಗಿರಲಿ ಕೂಟದ ಉದ್ಘಾಟನೆ ಸಂದರ್ಭ ಸೀರೆಯುಟ್ಟ ಭಾರತೀಯ ಮಹಿಳಾ ಕ್ರೀಡಾಪಟುಗಳು ಶಿಸ್ತಿನ ಪಥ ಸಂಚಲನವನ್ನು ನೋಡುವುದೇ ಒಂದು ಖುಷಿ.
ವಿಶ್ವದ ಎಲ್ಲ ರಾಷ್ಟ್ರಗಳಿಗಿಂತ ಪಥ ಸಂಚಲನದಲ್ಲಿ ಭಾರತದ ಮಹಿಳಾ ಸ್ಪರ್ಧಿಗಳು ವಿಭಿನ್ನವಾಗಿ ಕಾಣಿಸುತ್ತಿದ್ದರು. ಸೀರೆಯುಟ್ಟ ನಾರಿಯರು ಕೇವಲ ಭಾರತವನ್ನಲ್ಲ ಭಾರತದ ಇಡೀ ಸಂಸ್ಕೃತಿಯನ್ನೇ ವಿಶ್ವ ಮಟ್ಟದ ಕೂಟಗಳಲ್ಲಿ ಬಿಂಬಿಸುತ್ತಿದ್ದರು. ಇದೀಗ ಕಾಮನ್ವೆಲ್ತ್ ಕೂಟದ ಇತಿಹಾಸವೊಂದರಲ್ಲಿ ಹೊಸ ಬದಲಾವಣೆಯನ್ನು ಭಾರತದ ಮಟ್ಟಿಗೆ ತರಲು ಐಒಎ (ಭಾರತೀಯ ಒಲಿಂಪಿಕ್ಸ್ ಸಂಸ್ಥೆ) ನಿರ್ಧರಿಸಿದೆ.
ಹೌದು, ಇದುವರೆಗಿದ್ದ ಸೀರೆಗೆ ಎಳ್ಳುನೀರು ಬಿಟ್ಟು ಆಟಗಾರ್ತಿಯರು ಬ್ಲೇಜರ್ ವಿತ್ ಪ್ಯಾಂಟ್ ಧರಿಸಲು
ಸೂಚಿಸಿದೆ. ಇದಕ್ಕೆ ಕಾರಣ ಏನು ಎಂದು ಕೇಳಿದರೆ ಸೀರೆಗಿಂತ ಪ್ಯಾಂಟ್ ಹೆಚ್ಚು ಆರಾಮವಾಗಿರುತ್ತದೆ ಎನ್ನುವುದು ಐಒಎ ಉತ್ತರ. ಈ ಹಿಂದೆ ಅಥ್ಲೀಟ್‌ಗಳು ಹಲವು ಬಾರಿ ಸೀರೆ ಉಡುವುದು ಕಷ್ಟ ಎಂದು ಹೇಳಿದ್ದರು. 4-5 ಗಂಟೆ ಸೀರೆಯುಟ್ಟು ನಿಲ್ಲುವುದು, ಸೀರೆಯುಡಲು ಇನ್ನೊಬ್ಬರ ಸಹಾಯ ತೆಗೆದುಕೊಳ್ಳಬೇಕಿರುವುದು ಎನ್ನುವ ದೂರು ಕೇಳಿ ಬಂದಿದೆ. ಕಳೆದ ಒಲಿಂಪಿಕ್ಸ್ ಕೂಟದ ಸಂದರ್ಭದಲ್ಲೂ ದೂರು ಕೇಳಿ ಬಂದಿತ್ತು. ಇದನ್ನೆಲ್ಲ ಪರಿಗಣಿಸಿ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಐಒಎ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮೊದಲ ಟೆಸ್ಟ್ ಗೂ ಮೊದಲು ಆಸೀಸ್ ಗೆ ಆಘಾತ, ಇನ್ನೂ ಗುಣಮುಖರಾಗಿಲ್ಲ ಆಲ್ ರೌಂಡರ್
ಐಪಿಎಲ್ ಆಡುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ, ಆದರೆ..; ಚೇತೇಶ್ವರ ಪೂಜಾರ
ಅವರಿಗೆ ಏನೂ ಮಾಡಲು ಸಾಧ್ಯವಿಲ್ಲ..; ಪಾಕ್ ಎಚ್ಚರಿಕೆಗೆ ಅಶ್ವಿನ್ ತಿರುಗೇಟು
ಟರ್ಕಿ ಭೂಕಂಪದ ಅವಶೇಷಗಳಡಿ ಸಿಕ್ಕಿಬಿದ್ದ ಫುಟ್ಬಾಲ್ ತಾರೆ ಕ್ರಿಶ್ಚಿಯನ್ ಅಟ್ಸು
ಪ್ರಶಸ್ತಿ ಸೀಕರಿಸಲು ಹಿಜಾಬ್ ಧರಿಸಿ: ಬೆಂಗಳೂರಿನ ಆಟಗಾರ್ತಿಗೆ ಇರಾನ್ ಸಂಘಟಕರ ಸೂಚನೆ