ಕೊಪಾ ಅಮೆರಿಕ ಬ್ರಝಿಲ್ ಚಾಂಪಿಯನ್‌

Team Udayavani, Jul 9, 2019, 5:27 AM IST

ರಿಯೋ ಡಿ ಜನೈರೊ: ಕೊನೆಯ 20 ನಿಮಿಷಗಳಲ್ಲಿ ಹತ್ತೇ ಸದಸ್ಯರನ್ನು ಒಳಗೊಂಡ ಆತಿಥೇಯ ಬ್ರಝಿಲ್ ತಂಡ ‘ಕೊಪಾ ಅಮೆರಿಕ ಫ‌ುಟ್ಬಾಲ್’ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ರವಿವಾರ ರಾತ್ರಿ ನಡೆದ ಫೈನಲ್ ಕಾಳಗದಲ್ಲಿ ಅದು ಪೆರು ವಿರುದ್ಧ 3-1 ಗೋಲುಗಳಿಂದ ಜಯ ಸಾಧಿಸಿತು. ಇದು ಬ್ರಝಿಲ್ ಪಾಲಾದ 9ನೇ ಕೊಪಾ ಅಮೆರಿಕ ಪ್ರಶಸ್ತಿ. 2007ರ ಬಳಿಕ ಮೊದಲನೆಯದು.

ಬ್ರಝಿಲ್ ಪರ ಎವರ್ಟನ್‌ ಸೊರೆಸ್‌ (15ನೇ ನಿಮಿಷ), ಗ್ಯಾಬ್ರಿಯಲ್ ಜೀಸಸ್‌ (45+3ನೇ ನಿಮಿಷ) ಮತ್ತು ರಿಚರ್ಲಿಸನ್‌ (90ನೇ ನಿಮಿಷ) ಗೋಲು ಬಾರಿಸಿದರು. ಸ್ಟಾರ್‌ ಆಟಗಾರ ಗ್ಯಾಬ್ರಿಯಲ್ ಜೀಸಸ್‌ 70ನೇ ನಿಮಿಷದಲ್ಲಿ ರೆಡ್‌ ಕಾರ್ಡ್‌ ಪಡೆದು ಹೊರಬಿದ್ದಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ