ಕೊರೊನಾಪೀಡಿತ ಇಟಲಿಯಲ್ಲೇ ಉಳಿದ ಭಾರತ ಬಾಕ್ಸಿಂಗ್‌ ತಂಡ!

Team Udayavani, Feb 26, 2020, 1:10 AM IST

ಹೊಸದಿಲ್ಲಿ: ಒಲಿಂಪಿಕ್ಸ್‌ ಅರ್ಹತಾ ಕೂಟಕ್ಕಾಗಿ ಇಟಲಿಯಲ್ಲಿ ತರಬೇತಿ ನಡೆಸುತ್ತಿರುವ ಭಾರತದ ಬಾಕ್ಸಿಂಗ್‌ ತಂಡ, ಅಪಾಯವನ್ನು ತಾನಾಗಿಯೇ ಆಹ್ವಾನಿಸಿಕೊಳ್ಳುತ್ತಿ ದೆಯೇ? “ಹೌದು’ ಎನ್ನುತ್ತದೆ ಈ ವಿದ್ಯಮಾನ.

ಮಾ. 3ರಿಂದ ಜೋರ್ಡಾನ್‌ನಲ್ಲಿ ನಡೆಯುವ ಒಲಿಂಪಿಕ್ಸ್‌ ಅರ್ಹತಾ ಕೂಟಕ್ಕಾಗಿ ಅದು ಕೇಂದ್ರ ಇಟಲಿಯ ಅಸ್ಸಿಸಿಯಲ್ಲಿ ಅಭ್ಯಾಸ ನಡೆಸುತ್ತಿದೆ. ಇದೇ ವೇಳೆ ಉತ್ತರ ಇಟಲಿಯಲ್ಲಿ ಕೊರೊನಾ ವೈರಸ್‌ ಹಾವಳಿ ಜೋರಾಗಿದ್ದು 7 ಮಂದಿ ಮೃತಪಟ್ಟಿ ದ್ದಾರೆ. 229 ಮಂದಿ ಅದರಿಂದ ಬಾಧಿತ ರಾಗಿದ್ದಾರೆ. ಕೂಡಲೇ ಇಟಲಿಯಿಂದ ಜೋರ್ಡಾನಿಗೆ ತೆರಳುವಂತೆ ಸಂದೇಶ ಬಂದರೂ, ಭಾರತೀಯರು ಇಟಲಿಯಲ್ಲೇ ಮುಂದುವರಿಯುವ ನಿರ್ಧಾರ ತೆಗೆದುಕೊಂಡಿದ್ದಾರೆ!

ಭಾರತದ ಗಟ್ಟಿ ನಿರ್ಧಾರ
ಭಾರತ ತಂಡದ ಉನ್ನತ ಪ್ರದರ್ಶನ ನಿರ್ದೇಶಕ ಸ್ಯಾಂಟಿಯಾಗೊ ನೀವಾ ಹೀಗೆ ಪ್ರತಿಕ್ರಿಯಿಸಿದ್ದಾರೆ. “ನಮ್ಮ ತರಬೇತಿ ಅಸ್ಸಿಸಿಯಲ್ಲಿ ಏರ್ಪಾಡಾಗಿದೆ. ಕೊರೊನಾ ವೈರಸ್‌ ಹಬ್ಬಿರುವ ಸಂಗತಿ ಗೊತ್ತಾದಾಗ ತುಸು ಗಾಬರಿ ಗೊಳಗಾಗಿದ್ದೆವು. ಆದರೆ ವೈರಸ್‌ ಹಬ್ಬಿರುವ ಪ್ರದೇಶ ಹಾಗೂ ನಾವಿರುವ ತಾಣಕ್ಕೆ ಬಹಳ ಅಂತರವಿದೆ. ಆದ್ದರಿಂದ ಆತಂಕಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾವಿಲ್ಲೇ ಉಳಿಯುವ ನಿರ್ಧಾರ ಮಾಡಿದ್ದೇವೆ’ ಎಂದು ತಿಳಿಸಿದ್ದಾರೆ.

ಆದರೆ ಭಾರತ ತಂಡದಲ್ಲಿ ಇರುವ ಬಾಕ್ಸರ್‌ಗಳು ವಿಶ್ವವಿಖ್ಯಾತರು. 6 ಬಾರಿ ವಿಶ್ವಕಪ್‌ ಗೆದ್ದಿರುವ ಮೇರಿ ಕೋಮ್‌, ಅಮಿತ್‌ ಪಂಘಲ್‌, ವಿಕಾಸ್‌ ಕೃಷ್ಣನ್‌ ಇರುವ ಪ್ರಬಲ ತಂಡ ಇಟಲಿಯಲ್ಲಿದೆ. ಇವರಿಗೆ ಅಪಾಯವೇನಾದರೂ ಎದುರಾದರೆ ಎಂಬ ಭೀತಿ ಎದುರಾಗಿದೆ.

ಚೀನದಲ್ಲಿ ನಡೆಯಬೇಕಿತ್ತು…
ಮೂಲ ವೇಳಾಪಟ್ಟಿ ಪ್ರಕಾರ ಈ ಒಲಿಂಪಿಕ್‌ ಅರ್ಹತಾ ಕೂಟ ಚೀನದ ವುಹಾನ್‌ ಪಟ್ಟಣದಲ್ಲಿ ನಡೆ ಯಬೇಕಿತ್ತು. ಆದರೆ ಅಲ್ಲಿ ಕೊರೊನಾ ಹಾವಳಿ ತೀವ್ರಗೊಂಡ ಕಾರಣ ಒಂದು ತಿಂಗಳು ಮುಂದೂಡಲ್ಪಟ್ಟಿತು. ಅದರಂತೆ ಜೋರ್ಡಾನ್‌ನಲ್ಲಿ ಆಯೋಜನೆಯಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ