ಸಿಪಿಎಲ್: ಎಲ್ಲ ಲೀಗ್ ಪಂದ್ಯ ಗೆದ್ದ ಟ್ರಿನ್ಬಾಗೊ
Team Udayavani, Sep 7, 2020, 6:58 PM IST
ಪೋರ್ಟ್ ಆಫ್ ಸ್ಪೇನ್: ಟ್ರಿನ್ಬಾಗೊ ನೈಟ್ರೈಡರ್ (ಟಿಕೆಆರ್) “ಕೆರಿಬಿಯನ್ ಪ್ರೀಮಿಯರ್ ಲೀಗ್’ನಲ್ಲಿ ಅಜೇಯ ಓಟ ಮುಂದುವರಿಸಿದೆ. ಲೀಗ್ ಹಂತದ ಎಲ್ಲ 10 ಪಂದ್ಯಗಳನ್ನು ಗೆದ್ದು ಮೆರೆದಿದೆ.
ರವಿವಾರ ರಾತ್ರಿ ನಡೆದ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಟಿಕೆಆರ್ 9 ವಿಕೆಟ್ಗಳಿಂದ ಸೇಂಟ್ ಕಿಟ್ಸ್ ಆ್ಯಂಡ್ ನೆವಿಸ್ ಪ್ಯಾಟ್ರಿಯಾಟ್ಸ್ ತಂಡವನ್ನು ಮಣಿಸಿತು. ಫವಾದ್ ಆಲಂ (21ಕ್ಕೆ 4) ದಾಳಿಗೆ ಸಿಲುಕಿದ ಸೇಂಟ್ ಕಿಟ್ಸ್ 77 ರನ್ನಿಗೆ ಕುಸಿದರೆ, ಟಿಕೆಆರ್ 11.3 ಓವರ್ಗಳಲ್ಲಿ ಒಂದೇ ವಿಕೆಟಿಗೆ 78 ರನ್ ಮಾಡಿತು.
ಇದರೊಂದಿಗೆ ಲೀಗ್ ಹಣಾಹಣಿ ಮುಗಿದಿದ್ದು, ಮಂಗಳವಾರ ರಾತ್ರಿ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಕೈರನ್ ಪೊಲಾರ್ಡ್ ನಾಯಕತ್ವದ ಟಿಕೆಆರ್ 4ನೇ ಸ್ಥಾನದಲ್ಲಿರುವ ಜಮೈಕಾ ತಲ್ಲವಾಸ್ (7 ಅಂಕ) ತಂಡವನ್ನು ಎದುರಿಸಲಿದೆ. ಇನ್ನೊಂದು ಉಪಾಂತ್ಯದಲ್ಲಿ ಗಯಾನಾ ಅಮೆಜಾನ್ ವಾರಿಯರ್ (12 ಅಂಕ) ಮತ್ತು ಸೇಂಟ್ ಲೂಸಿಯಾ ಜೂಕ್ಸ್ (12 ಅಂಕ) ತಂಡಗಳು ಮುಖಾಮುಖಿಯಾಗಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್ಐಎ ವಶಕ್ಕೆ