ಬಿಸಿಸಿಐಗೆ ಕ್ರಿಕೆಟ್ ಆಸ್ಟ್ರೇಲಿಯ ಹೆದರಿದೆ: ಚಾನೆಲ್ 7 ಆರೋಪ
Team Udayavani, Dec 1, 2020, 9:42 PM IST
ಕ್ಯಾನ್‌ಬೆರಾ: ಕ್ರಿಕೆಟ್ ಆಸ್ಟ್ರೇಲಿಯ (ಸಿಎ) ವಿರುದ್ಧ ನೇರ ಪ್ರಸಾರ ಟಿವಿ ವಾಹಿನಿ “ಚಾನೆಲ್ 7′ ಮುಗಿಬಿದ್ದಿದೆ. ಬಿಸಿಸಿಐಗೆ ಹೆದರಿರುವ ಕ್ರಿಕೆಟ್ ಆಸ್ಟ್ರೇಲಿಯ ತನ್ನೊಂದಿಗೆ ಮಾಡಿಕೊಂಡಿರುವ ಒಪ್ಪಂದವನ್ನು ಮೀರಿದೆ. ಭಾರತದ ಪ್ರವಾಸದ ವೇಳೆ ಮೊದಲು ಟೆಸ್ಟ್ ಸರಣಿ ನಡೆಸಬೇಕಿದ್ದರೂ, ಹಾಗೆ ಮಾಡದೆ ಏಕದಿನ ಸರಣಿ ಆರಂಭಿಸಿದೆ ಎನ್ನುವುದು ಅದರ ಆರೋಪ. ಈ ಸಂಬಂಧ ಅದು ನ್ಯಾಯಾಲಯದ ಮೆಟ್ಟಿಲು ಹತ್ತಿದೆ. ಒಂದು ವೇಳೆ ಸಿಎ ಸೋತರೆ, ಅದು ಹತ್ತಿರ ಹತ್ತಿರ 100 ಕೋಟಿ ರೂ.ಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.
ಏನಿದು ವಿವಾದ?
ಕ್ರಿಕೆಟ್ ಆಸ್ಟ್ರೇಲಿಯದೊಂದಿಗೆ ಚಾನೆಲ್ 7, ಆರು ವರ್ಷಗಳ ಅವಧಿಗೆ 450 ಮಿಲಿಯನ್ ಡಾಲರ್ ಮೊತ್ತದ ನೇರಪ್ರಸಾರ ಒಪ್ಪಂದ ಮಾಡಿಕೊಂಡಿದೆ. ಈಗಾಗಲೇ ಮೂರು ವರ್ಷ ಮುಗಿದಿದೆ. ಗಮನಾರ್ಹ ಸಂಗತಿಯೆಂದರೆ, ಈ ಬಾರಿ ನಡೆಯುವ ಭಾರತ ಪ್ರವಾಸದ ಸೀಮಿತ ಓವರ್ ಪಂದ್ಯಗಳ ನೇರಪ್ರಸಾರ ಹಕ್ಕನ್ನು ಫಾಕ್ಸ್‌ಟೆಲ್ ಪಡೆದುಕೊಂಡಿದೆ. ಟೆಸ್ಟ್ ಪಂದ್ಯಗಳ ಹಕ್ಕು ಚಾನೆಲ್ 7 ಬಳಿಯಿದೆ.
ಆರಂಭದ ಮಾತುಕತೆಯಂತೆ ಮೊದಲು ಟೆಸ್ಟ್ ಸರಣಿ ನಡೆಯಬೇಕಿತ್ತು. ಈಗ ಅದನ್ನು ಕ್ರಿಕೆಟ್ ಆಸ್ಟ್ರೇಲಿಯ ಮೀರಿದೆ ಎನ್ನುವುದು ಆರೋಪ. ಸದ್ಯದ ಪ್ರಕಾರ ಕ್ರಿಸ್‌ಮಸ್‌ಗಿಂತ ಮುನ್ನ ಒಂದೇ ಒಂದು ಟೆಸ್ಟ್ ಮಾತ್ರ ನಡೆಯಲಿದೆ. ಅನಂತರ ಉಳಿದ ಟೆಸ್ಟ್‌ಗಳು ನಡೆಯಲಿವೆ. ಆ ಹೊತ್ತಿಗೆ ಜನರು ಕೆಲಸದಲ್ಲಿ ಕೆಲಸದಲ್ಲಿ ಮುಳುಗಿರುತ್ತಾರೆ.ಜತೆಗೆ ಕೊಹ್ಲಿ ಕೂಡ 3 ಟೆಸ್ಟ್‌ಗಳಲ್ಲಿ ಆಡದಿರುವುದರಿಂದ ಟಿಆರ್‌ಪಿ ಕುಸಿಯಲಿದೆ ಎನ್ನುವುದು ಚಾನೆಲ್ 7 ಆತಂಕ. ಆದ್ದರಿಂದಲೇ ಅದು, ಬಿಸಿಸಿಐ ಮತ್ತು ಫಾಕ್ಸ್‌ಟೆಲ್ ತಾಳಕ್ಕೆ ತಕ್ಕಂತೆ ಕ್ರಿಕೆಟ್ ಆಸ್ಟ್ರೇಲಿಯ ಕುಣಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444