ಕ್ರಿಕೆಟ್ನಿಂದ ಭಾರತ-ಪಾಕ್ ಬಾಂಧವ್ಯ ಸುಧಾರಣೆ: ಅಫ್ರಿದಿ
Team Udayavani, Feb 20, 2018, 6:30 AM IST
ಇಸ್ಲಾಮಾಬಾದ್: ಕ್ರಿಕೆಟ್ನಿಂದ ಭವಿಷ್ಯದಲ್ಲಿ ಭಾರತ-ಪಾಕಿಸ್ಥಾನ ದೇಶಗಳ ನಡುವಿನ ಬಾಂಧವ್ಯ ಸುಧಾರಣೆಗೊಳ್ಳಲು ಸಾಧ್ಯ ಎಂದು ಪಾಕಿಸ್ಥಾನದ ಮಾಜಿ ಆಟಗಾರ ಶಾಹಿದ್ ಅಫ್ರಿದಿ ಹೇಳಿದ್ದಾರೆ.
ಇತ್ತೀಚೆಗೆ ಸ್ವಿಜರ್ಲ್ಯಾಂಡಿನಲ್ಲಿ ನಡೆದ ಸೇಂಟ್ ಮಾರಿಟ್ಜ್ ಐಸ್ ಕ್ರಿಕೆಟ್ ಸಂದರ್ಭದ ಆತ್ಮೀಯ ಕ್ಷಣಗಳನ್ನು ಮೆಲುಕು ಹಾಕಿದ ಅಫ್ರಿದಿ, “ಇತ್ತಂಡಗಳ ನಡುವಿನ ಅಂತಾರಾಷ್ಟ್ರೀಯ ಪಂದ್ಯಗಳ ಕೊರತೆಯ ಕಾರಣ ನಾವು ಐಸ್ ಕ್ರಿಕೆಟ್ನಲ್ಲಿ ಪಾಲ್ಗೊಂಡು ಸಂಭ್ರಮಿಸಿದೆವು. ರಾಜಕೀಯ ವಿಚಾರಗಳನ್ನು ಬದಿಗಿಟ್ಟು ಎರಡೂ ತಂಡಗಳ ಮಧ್ಯೆ ಕ್ರಿಕೆಟ್ ಆಟಕ್ಕೆ ಅನುವು ನೀಡಿದರೆ ಭಾರತ-ಪಾಕ್ ನಡುವಿನ ಬಿಗುವಿನ ಸ್ಥಿತಿ ನಿವಾರಣೆಗೊಳ್ಳುವ ಸಾಧ್ಯತೆಗಳಿವೆ’ ಎಂದಿದ್ದಾರೆ.
ಸೌಹಾರ್ದ ಐಸ್ ಕ್ರಿಕೆಟ್ ಪಂದ್ಯದಲ್ಲಿ ಅಫ್ರಿದಿ ರಾಯಲ್ಸ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದರು. ಮಾಜಿ ಆಟಗಾರ ವಿರೇಂದ್ರ ಸೆಹವಾಗ್ ಪ್ಯಾಲೆಸ್ ಡೈಮಂಡ್ ತಂಡವನ್ನು ಮುನ್ನಡೆಸಿದ್ದರು. ಈ ಸಂದರ್ಭ ಪಾಕಿಸ್ಥಾನವನ್ನು ಅಬ್ದುಲ್ ರಜಾಕ್, ಶೋಯಿಬ್ ಅಖ್ತರ್ ಅವರಂಥ ಮಾಜಿ ಸ್ಟಾರ್ ಆಟಗಾರರು ಪ್ರತಿನಿಧಿಸಿದ್ದರೆ, ಭಾರತ ಪರ ಮೊಹಮ್ಮದ್ ಕೈಫ್, ಜಹೀರ್ ಖಾನ್, ರಮೇಶ್ ಪೊವಾರ್, ಅಜಿತ್ ಅಗರ್ಕರ್, ಜೋಗಿಂದರ್ ಶರ್ಮ ಆಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ