ಕ್ರಿಕೆಟ್ : ದೀಪಕ್ ಹೂಡಾ ಒಂದು ವರ್ಷ ಅಮಾನತು
Team Udayavani, Jan 22, 2021, 11:41 PM IST
ವಡೋದರ: ಅಶಿಸ್ತಿನಿಂದ ವರ್ತಿಸಿದ ಅನುಭವಿ ಆಟಗಾರ ದೀಪಕ್ ಹೂಡಾ ಅವರನ್ನು ಬರೋಡಾ ಕ್ರಿಕೆಟ್ ಸಂಸ್ಥೆ (ಬಿಸಿಎ) ಒಂದು ವರ್ಷದ ಮಟ್ಟಿಗೆ ಅಮಾನತುಗೊಳಿಸಿದೆ. ಸೈಯದ್ ಮುಷ್ತಾಖ್ ಅಲಿ ಟಿ20 ಟೂರ್ನಿ ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ತಂಡದ ನಾಯಕ ಕೃಣಾಲ್ ಪಾಂಡ್ಯ ಜತೆ ಮಾತಿನ ಜಟಾಪಟಿ ನಡೆಸಿದ ಉಪನಾಯಕ ದೀಪಕ್ ಹೂಡಾ ಸಿಟ್ಟಿನಿಂದ ತಂಡ ತೊರೆದು ಅಶಿಸ್ತು ಪ್ರದರ್ಶಿಸಿದ್ದರು. ಹೂಡಾ ಅವರ ಈ ವರ್ತನೆ ಬರೋಡಾ ಕ್ರಿಕೆಟ್ ಮಂಡಳಿಯ ಆಕ್ರೋಶಕ್ಕೆ ಕಾರಣವಾಗಿತ್ತು.
ಪ್ರಸಕ್ತ ದೇಶೀಯ ಕ್ರಿಕೆಟ್ ಋತುವಿಗೆ ದೀಪಕ್ ಹೂಡಾ ಅವರನ್ನು ಪರಿಗಣಿಸಲಾಗದು. ಅವರಿಗೆ ಒಂದು ವರ್ಷ ನಿಷೇಧ ಹೇರಲು ಅಪೆಕ್ಸ್ ಕೌನ್ಸಿಲ್ ನಿರ್ಧರಿಸಿದೆ. ಘಟನೆಯ ಬಗ್ಗೆ ತಂಡದ ವ್ಯವಸ್ಥಾಪಕ ಮತ್ತು ತರಬೇತುದಾರರ ವರದಿಗಳು ಹಾಗೂ ಹೂಡಾ ಅವರೊಂದಿಗಿನ ಮಾತುಕತೆಯನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಬರೋಡಾ ಕ್ರಿಕೆಟ್ ಮಂಡಳಿ ಹೇಳಿದೆ. 2021-22ರ ಸಾಲಿನಿಂದ ಹೂಡಾ ಮತ್ತೆ ಆಡಬಹುದಾಗಿದೆ ಎಂದು ಬಿಸಿಎನ ಮಾಧ್ಯಮ ಮತ್ತು ಪ್ರಚಾರ ಸಮಿತಿಯ ಮುಖ್ಯಸ್ಥ ಸತ್ಯಜಿತ್ ಗಾಯಕ್ವಾಡ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನಾನು ಕೆಲವು ಜನರನ್ನು ನಂಬಿ ಮೋಸ ಹೋದೆ – ಡಾ| ಬಿ.ಆರ್.ಶೆಟ್ಟಿ
30 ನಿಮಿಷದಲ್ಲಿಯೇ ಕೊರೊನಾ ಲಸಿಕೆ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳಿಸಿದರು
ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ
ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್
CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani
ಹೊಸ ಸೇರ್ಪಡೆ
IPL ತಾಣ; ಫ್ರಾಂಚೈಸಿಗಳಿಗೆ ಅಸಮಾಧಾನ : ಮುಂಬಯಿ, ಬೆಂಗಳೂರು ಸೇರಿದಂತೆ 6 ತಾಣಗಳಲ್ಲಿ ಪಂದ್ಯ?
ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ : ಲೀಗ್ ಹಂತದಲ್ಲಿ ಮುಂಬಯಿ ಅಜೇಯ
ಐಪಿಎಲ್ಗೂ ಮುನ್ನ ಪ್ರಮುಖ ಆಟಗಾರರಿಗೆ ವಿಶ್ರಾಂತಿ?
ಕಿರುಕುಳ ನೀಡುತ್ತಿದ್ದ ಪತಿಯ ಹತ್ಯೆ ಸುಪಾರಿ ಕೊಟ್ಟ ಪತ್ನಿ, ಪುತ್ರ ಸೇರಿ ಐವರ ಬಂಧನ
ಕೇರಳ ರಾಜಕೀಯವಾಗಿ ಬದಲಾಗಲು ಈಗ ಸಕಾಲ : ಡಿಸಿಎಂ ಅಶ್ವತ್ಥನಾರಾಯಣ