ಕೋಮಾ ಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಅಂಡರ್-19 ಬೌಲರ್ ಮಾಂಡ್ಲಿ ಖುಮಾಲೊ
Team Udayavani, May 31, 2022, 11:18 PM IST
ಲಂಡನ್: ದಕ್ಷಿಣ ಆಫ್ರಿಕಾದ ಮಾಜಿ ಅಂಡರ್-19 ಬೌಲರ್ ಮಾಂಡ್ಲಿ ಖುಮಾಲೊ ಅವರು ಕಳೆದ ಶನಿವಾರ ರಾತ್ರಿ ಬ್ರಿಡ್ಜ್ ವಾಟರ್ನಲ್ಲಿರುವ ಪಬ್ನ ಹೊರಗಡೆ ಹಲ್ಲೆಗೊಳಗಾದ ಬಳಿಕ ಕೋಮಾ ಸ್ಥಿತಿಯಲ್ಲಿದ್ದಾರೆ.
ಅವರ ಮೆದುಳಿನಿಂದ ರಕ್ತಸ್ರಾವ ಆಗುತ್ತಿದ್ದು ಈಗಾಗಲೇ ಎರಡು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಅವರೀಗ ಗಂಭೀರ ಸ್ಥಿತಿಯಲ್ಲಿದ್ದಾರೆ.
ಖುಮಾಲೊ ನಾರ್ತ್ ಪಾಥೆರ್ಟನ್ ಕ್ರಿಕೆಟ್ ಕ್ಲಬ್ ಪರ ವೃತ್ತಿಪರ ಕ್ರಿಕೆಟ್ ಆಡುತ್ತಿದ್ದರು. ತಂಡ ಗೆದ್ದ ಖುಷಿಯಲ್ಲಿ ಸಂಭ್ರಮಾಚರಣೆ ನಡೆಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿತ್ತು.