ಚೆಂಡು ಬಡಿದು ಅಂಪಾಯರ್ ಸಾವು
Team Udayavani, Aug 17, 2019, 5:25 AM IST
ಕಾರ್ಡಿಫ್: ಇಂಗ್ಲೆಂಡ್ನಲ್ಲಿ ನಡೆದ ಸ್ಥಳೀಯ ಕ್ರಿಕೆಟ್ ಪಂದ್ಯದ ವೇಳೆ ತಲೆಗೆ ಚೆಂಡು ಬಡಿದು ಕ್ರಿಕೆಟ್ ಅಂಪಾಯರ್ ಒಬ್ಬರು ದುರ್ಮರಣಕ್ಕೀಡಾಗಿದ್ದಾರೆ.
ಗಂಭೀರ ಗಾಯಗೊಂಡು ಕೋಮಾ ಹಂತದಲ್ಲಿದ್ದ ಅವರು ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಈಗ ಮೃತಪಟ್ಟಿದ್ದಾರೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಮೃತರ ಹೆಸರು ಜಾನ್ ವಿಲಿಯಮ್ಸ್. ಅವರಿಗೆ 80 ವರ್ಷವಾಗಿತ್ತು. ಪೆಂಬೊಕ್ಶೈರ್ ಕೌಂಟಿ ಡಿವಿಷನ್-2ರಲ್ಲಿ ಅಂಪಾಯರಿಂಗ್ ನಡೆಸುತ್ತಿದ್ದಾಗ ತಲೆಗೆ ಚೆಂಡು ಬಡಿದಿತ್ತು.