ಆರ್‌ಸಿಬಿಗೆ ಸತತ ಎರಡನೇ ಸೋಲು


Team Udayavani, Sep 24, 2021, 11:37 PM IST

ಆರ್‌ಸಿಬಿಗೆ ಸತತ ಎರಡನೇ ಸೋಲು

ಶಾರ್ಜಾ: ಯುಎಇ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಸತತ ಎರಡನೇ ಸೋಲನುಭವಿಸಿದೆ. ಕೊಹ್ಲಿ-ಧೋನಿ ತಂಡಗಳ ಮೇಲಾಟದಲ್ಲಿ ಧೋನಿ ಪಡೆಗೆ 6 ವಿಕೆಟ್‌ ಗೆಲುವು ಒಲಿದಿದೆ. ಅದು 7ನೇ ಜಯದೊಂದಿಗೆ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೆ ನೆಗೆದಿದೆ.

ಶುಕ್ರವಾರದ ಶಾರ್ಜಾ ಮುಖಾಮುಖೀಯಲ್ಲಿ ವಿರಾಟ್‌ ಕೊಹ್ಲಿ-ದೇವದತ್ತ ಪಡಿಕ್ಕಲ್‌ ಅವರ ಅಬ್ಬರದ ಆಟ ಹಾಗೂ ಶತಕದ ಜತೆಯಾಟದ ಹೊರತಾಗಿಯೂ ಆರ್‌ಸಿಬಿ 6 ವಿಕೆಟಿಗೆ 156 ರನ್ನುಗಳ ಸಾಮಾನ್ಯ ಮೊತ್ತವನ್ನಷ್ಟೇ ಗಳಿಸಿತು. ಜವಾಬಿತ್ತ ಚೆನ್ನೈ18.1 ಓವರ್‌ಗಳಲ್ಲಿ 4 ವಿಕೆಟಿಗೆ 157 ರನ್‌ ಬಾರಿಸಿತು.

ಗಾಯಕ್ವಾಡ್‌-ಡು ಪ್ಲೆಸಿಸ್‌ 71 ರನ್‌ ಪೇರಿಸಿ ಚೆನ್ನೈಗೆ ಉತ್ತಮ ಆರಂಭ ಒದಗಿಸಿದರು. ಅಲಿ, ರಾಯುಡು ಯಾವುದೇ ಒತ್ತಡವಿಲ್ಲದೆ ಬ್ಯಾಟಿಂಗ್‌ ನಡೆಸಿದರು. ರೈನಾ-ಧೋನಿ ಸೇರಿಕೊಂಡು ತಂಡವನ್ನು ದಡ ತಲುಪಿಸಿದರು.

ಆರ್ಸಿಬಿ ಆರಂಭ ಮಾತ್ರ ಅಬ್ಬರ:

ಪಂದ್ಯದ ಮೊದಲೆರಡು ಎಸೆತಗಳನ್ನೇ ಕೊಹ್ಲಿ ಬೌಂಡರಿಗೆ ಬಡಿದಟ್ಟಿ ಅಬ್ಬರಿಸುವ ಸೂಚನೆ ನೀಡಿದರು. ದೀಪಕ್‌ ಚಹರ್‌ ಅವರ ಆ ಓವರ್‌ನಲ್ಲಿ ಒಟ್ಟು 13 ರನ್‌ ಸೋರಿಹೋಯಿತು. ಅವರ ಮುಂದಿನ ಓವರ್‌ನಲ್ಲೂ ಕೊಹ್ಲಿ-ಪಡಿಕ್ಕಲ್‌ ಸಿಡಿದು ನಿಂತರು. ಹ್ಯಾಝಲ್‌ವುಡ್‌, ಠಾಕೂರ್‌ ಎಸೆತಗಳು ಬೌಂಡರಿ ಲೈನ್‌ ಮೇಲಿಂದ ಹಾದು ಹೋದವು. ಪವರ್‌ ಪ್ಲೇ ಅವಧಿಯಲ್ಲಿ ಆರ್‌ಸಿಬಿ ವಿಕೆಟ್‌ ನಷ್ಟವಿಲ್ಲದೆ 55 ರನ್‌ ಮಾಡಿತು. ಇದು 2013ರ ಬಳಿಕ ಚೆನ್ನೈ ವಿರುದ್ಧ ಮೊದಲ ವಿಕೆಟಿಗೆ ಆರ್‌ಸಿಬಿ ಪೇರಿಸಿದ 50 ಪ್ಲಸ್‌ ರನ್ನುಗಳ ಜತೆಯಾಟವಾಗಿದೆ.

ಇದೇ ವೇಳೆ ಕೊಹ್ಲಿ ಚೆನ್ನೈ ವಿರುದ್ಧ 934 ರನ್‌ ಪೇರಿಸಿ ನೂತನ ದಾಖಲೆಯನ್ನೂ ಸ್ಥಾಪಿಸಿದರು. ಕೊಹ್ಲಿ ಐಪಿಎಲ್‌ ತಂಡವೊಂದರ ವಿರುದ್ಧ ಬಾರಿಸಿದ ಅತ್ಯಧಿಕ ರನ್‌ ಇದಾಗಿದೆ. ಡೆಲ್ಲಿ ವಿರುದ್ಧ ಕೊಹ್ಲಿ 933 ರನ್‌ ಹೊಡೆದಿದ್ದಾರೆ.

ಪವರ್‌ ಪ್ಲೇ ಬಳಿಕ ರವೀಂದ್ರ ಜಡೇಜ ಬೌಲಿಂಗ್‌ ದಾಳಿಗಿಳಿದರು. ಆದರೆ ಆರ್‌ಸಿಬಿ ಆರಂಭಿಕರನ್ನು ನಿಯಂತ್ರಿಸಲು ಅವರಿಂದ ಸಾಧ್ಯವಾಗಲಿಲ್ಲ. 10 ಓವರ್‌ ಮುಕ್ತಾಯಕ್ಕೆ ಸ್ಕೋರ್‌ ನೋಲಾಸ್‌ 90ಕ್ಕೆ ಏರಿತು.

ಶತಕದ ಜತೆಯಾಟ:

70 ಎಸೆತಗಳಲ್ಲಿ ಕೊಹ್ಲಿ-ಪಡಿಕ್ಕಲ್‌ ಶತಕದ ಜತೆಯಾಟ ಪೂರೈಸಿದರು. ಇದು ಕೊಹ್ಲಿ-ಪಡಿಕ್ಕಲ್‌ ಜೋಡಿ ದಾಖಲಿಸಿದ 2ನೇ ಸೆಂಚುರಿ ಪಾಟ್ನìರ್‌ಶಿಪ್‌. ಪ್ರಸಕ್ತ ಋತುವಿನ ರಾಜಸ್ಥಾನ್‌ ಎದುರಿನ ಪಂದ್ಯದಲ್ಲಿ ಇವರಿಬ್ಬರು ಸೇರಿ ಚೇಸಿಂಗ್‌ ವೇಳೆ ಅಜೇಯ 181 ರನ್‌ ಪೇರಿಸಿ 10 ವಿಕೆಟ್‌ ಗೆಲುವು ತಂದಿತ್ತಿದ್ದರು.

ಪಡಿಕ್ಕಲ್‌ ಮತ್ತು ಕೊಹ್ಲಿ ಬೆನ್ನು ಬೆನ್ನಿಗೆ ಅರ್ಧ ಶತಕ ಪೂರೈಸಿದರು. ಕೂಡಲೇ ಆರ್‌ಸಿಬಿ ಕಪ್ತಾನನ ವಿಕೆಟ್‌ ಕಿತ್ತ ಬ್ರಾವೊ ಚೆನ್ನೈಗೆ ಮೊದಲ ಯಶಸ್ಸು ತಂದಿತ್ತರು. ಕೊಹ್ಲಿ ಕೊಡುಗೆ 41 ಎಸೆತಗಳಿಂದ 53 ರನ್‌ (6 ಬೌಂಡರಿ, 1 ಸಿಕ್ಸರ್‌). ಪಡಿಕ್ಕಲ್‌ ಆಕ್ರಮಣಕಾರಿ ಆಟವನ್ನು ಮುಂದುವರಿಸಿ 50 ಎಸೆತಗಳಿಂದ 70 ರನ್‌ ಬಾರಿಸಿದರು (5 ಫೋರ್‌, 3 ಸಿಕ್ಸರ್‌). ಆದರೆ ಶಾದೂìಲ್‌ ಠಾಕೂರ್‌ ಸತತ ಎಸೆತಗಳಲ್ಲಿ ಎಬಿಡಿ (12) ಮತ್ತು ಪಡಿಕ್ಕಲ್‌ ವಿಕೆಟ್‌ ಕಿತ್ತು ದೊಡ್ಡ ಬೇಟೆಯಾಡಿದರು. ಡೆತ್‌ ಓವರ್‌ಗಳಲ್ಲಿ 5 ವಿಕೆಟ್‌ ಉರುಳಿಸಿದ ಚೆನ್ನೈ, ಕೇವಲ 38 ರನ್‌ ನೀಡಿ ಆರ್‌ಸಿಬಿಗೆ ದೊಡ್ಡ ಬ್ರೇಕ್‌ ಹಾಕಿತು.

ಸಿಂಗಾಪುರದ ಟಿಮ್ ಡೇವಿಡ್ ಐಪಿಎಲ್ ಪದಾರ್ಪಣೆ:

ಆರ್‌ಸಿಬಿ ಈ ಪಂದ್ಯಕ್ಕಾಗಿ ಎರಡು ಬದಲಾವಣೆ ಮಾಡಿಕೊಂಡಿತು. ವೇಗಿ ಕೈಲ್‌ ಜಾಮೀಸನ್‌ ಬದಲು ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ ಟಿಮ್‌ ಡೇವಿಡ್‌, ಸಚಿನ್‌ ಬೇಬಿ ಬದಲು ನವದೀಪ್‌ ಸೈನಿ ಅವರನ್ನು ಸೇರಿಸಿಕೊಂಡಿತು. ಡೇವಿಡ್‌ ಸಿಂಗಾಪುರದ ಕ್ರಿಕೆಟಿಗ ನೆಂಬುದು ವಿಶೇಷ. ಇದರೊಂದಿಗೆ ಸಿಂಗಾಪುರದ ಆಟಗಾರನೋರ್ವನಿಗೆ ಮೊದಲ ಸಲ ಐಪಿಎಲ್‌ ಬಾಗಿಲು ತೆರೆಯಿತು.ಇದಕ್ಕೂ ಮುನ್ನ ಟಿಮ್‌ ಡೇವಿಡ್‌ 11 ತಂಡಗಳನ್ನು ಪ್ರತಿನಿಧಿಸಿದ್ದಾರೆ. ಬಿಗ್‌ ಬಾಶ್‌, ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌, ಪಾಕಿಸ್ಥಾನ್‌ ಸೂಪರ್‌ ಲೀಗ್‌ನಲ್ಲೂ ಆಡಿರುವುದು ಇವರ ಹೆಗ್ಗಳಿಕೆ.

ಟಾಪ್ ನ್ಯೂಸ್

ಡಿಡಿಎಲ್‌ಜೆ ರಂಗ ಪ್ರಯೋಗ!

ಡಿಡಿಎಲ್‌ಜೆ ರಂಗ ಪ್ರಯೋಗ!

ಕಿತ್ತೂರು ಕರ್ನಾಟಕ ನಾಮಕರಣಕ್ಕೆ ನಿರ್ಧಾರ: ಸಿಎಂ ಬೊಮ್ಮಾಯಿ‌ ಘೋಷಣೆ

ಕಿತ್ತೂರು ಕರ್ನಾಟಕ ನಾಮಕರಣಕ್ಕೆ ನಿರ್ಧಾರ: ಸಿಎಂ ಬೊಮ್ಮಾಯಿ‌ ಘೋಷಣೆ

ಎಡಪಂಥವಲ್ಲದ, ಬಲಪಂಥವಲ್ಲದ ಭಾವವೇ ಹಿಂದುತ್ವ: ದತ್ತಾತ್ರೇಯ ಹೊಸಬಾಳೆ

ಎಡಪಂಥವಲ್ಲದ, ಬಲಪಂಥವಲ್ಲದ ಭಾವವೇ ಹಿಂದುತ್ವ: ದತ್ತಾತ್ರೇಯ ಹೊಸಬಾಳೆ

ಹಣಕಾಸು, ಅನೈತಿಕ ಸಂಬಂಧಕ್ಕೆ ಟಿಟಿ ಚಾಲಕನ ಕೊಲೆ

ಹಣಕಾಸು, ಅನೈತಿಕ ಸಂಬಂಧಕ್ಕೆ ಟಿಟಿ ಚಾಲಕನ ಕೊಲೆ

ಪರಿಸರ ಹಾನಿ ನಷ್ಟ ತುಂಬಿಕೊಡಲು ಭಾರತ ಆಗ್ರಹ?

ಪರಿಸರ ಹಾನಿ ನಷ್ಟ ತುಂಬಿಕೊಡಲು ಭಾರತ ಆಗ್ರಹ?

ಎಂಎನ್‌ಎಸ್‌ ಅಧ್ಯಕ್ಷ ರಾಜ್‌ ಠಾಕ್ರೆಗೆ ಕೋವಿಡ್

ಎಂಎನ್‌ಎಸ್‌ ಅಧ್ಯಕ್ಷ ರಾಜ್‌ ಠಾಕ್ರೆಗೆ ಕೋವಿಡ್

ಪಾಕ್‌ ಚಾನೆಲ್‌ಗಳಲ್ಲಿ “ಆಲಿಂಗನ’ ಕಟ್‌!

ಪಾಕ್‌ ಚಾನೆಲ್‌ಗಳಲ್ಲಿ “ಆಲಿಂಗನ’ ಕಟ್‌!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qq

ಟಿ20 ವಿಶ್ವಕಪ್‌ : ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಕ್ಕೆ ರೋಚಕ ಜಯ

ಭಾರತದ ವಿರುದ್ಧದ ಪಂದ್ಯಕ್ಕಾಗಿ ಒಂದು ದಿನ ಮೊದಲೇ ತಂಡ ಪ್ರಕಟಿಸಿದ ಪಾಕಿಸ್ಥಾನ

ಭಾರತದ ವಿರುದ್ಧದ ಪಂದ್ಯಕ್ಕಾಗಿ ಒಂದು ದಿನ ಮೊದಲೇ ತಂಡ ಪ್ರಕಟಿಸಿದ ಪಾಕಿಸ್ಥಾನ

ಟಿ20 ವಿಶ್ವಕಪ್: ಭಾರತೀಯ ನಾಯಕನಿಗೆ ಎಚ್ಚರಿಕೆ ನೀಡಿದ ಸ್ಕಾಟ್ಲೆಂಡ್ ಬೌಲರ್!

ಟಿ20 ವಿಶ್ವಕಪ್: ಭಾರತೀಯ ನಾಯಕನಿಗೆ ಎಚ್ಚರಿಕೆ ನೀಡಿದ ಸ್ಕಾಟ್ಲೆಂಡ್ ಬೌಲರ್!

1-vv

ಪ್ಯಾರಿಸ್ ಒಲಂಪಿಕ್ಸ್‌ : ಅಮೃತ ಕ್ರೀಡಾ ದತ್ತು,ರಾಜ್ಯದ 75 ಕ್ರೀಡಾಪಟುಗಳ ಆಯ್ಕೆ

Netherlands player Ryan ten Doeschate announced retirement

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ನೆದರ್ಲೆಂಡ್ ಆಲ್ ರೌಂಡರ್ ಟೆನ್ ಡೆಶ್ಕೋಟ್

MUST WATCH

udayavani youtube

ರಾಜ್ಯದ ಪಾಲಿಟೆಕ್ನಿಕ್‌ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ : ಸಚಿವ ಡಾ. ಅಶ್ವತ್ಥನಾರಾಯಣ

udayavani youtube

11 ಮಂದಿ ಚಾರಣಿಗರು ಸಾವು, 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

udayavani youtube

ಮುಂದುವರೆದ ಒಂಟಿ ಸಲಗದ ದಾಂಧಲೆ ಕಾಂಪೌಂಡ್, ಮನೆಯ ಮೇಲ್ಚಾವಣಿ ಪುಡಿಪುಡಿ

udayavani youtube

ಕೃಷಿಕರ ಬದುಕಿಗೆ ಆಶಾಕಿರಣವಾಗಿರುವ MO4 ಭತ್ತದ ತಳಿಯನ್ನು ಯಾಕೆ ಬೆಳೆಯಬೇಕು?

udayavani youtube

ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಕಾರು, ಮಹಿಳೆ ಸಾವು

ಹೊಸ ಸೇರ್ಪಡೆ

ಡಿಡಿಎಲ್‌ಜೆ ರಂಗ ಪ್ರಯೋಗ!

ಡಿಡಿಎಲ್‌ಜೆ ರಂಗ ಪ್ರಯೋಗ!

ಕಿತ್ತೂರು ಕರ್ನಾಟಕ ನಾಮಕರಣಕ್ಕೆ ನಿರ್ಧಾರ: ಸಿಎಂ ಬೊಮ್ಮಾಯಿ‌ ಘೋಷಣೆ

ಕಿತ್ತೂರು ಕರ್ನಾಟಕ ನಾಮಕರಣಕ್ಕೆ ನಿರ್ಧಾರ: ಸಿಎಂ ಬೊಮ್ಮಾಯಿ‌ ಘೋಷಣೆ

ಎಡಪಂಥವಲ್ಲದ, ಬಲಪಂಥವಲ್ಲದ ಭಾವವೇ ಹಿಂದುತ್ವ: ದತ್ತಾತ್ರೇಯ ಹೊಸಬಾಳೆ

ಎಡಪಂಥವಲ್ಲದ, ಬಲಪಂಥವಲ್ಲದ ಭಾವವೇ ಹಿಂದುತ್ವ: ದತ್ತಾತ್ರೇಯ ಹೊಸಬಾಳೆ

ಜಿಲ್ಲಾಸ್ಪತ್ರೆ ಸಮಸ್ಯೆ ವಾರದಲ್ಲಿ ಇತ್ಯರ್ಥ: ಆಚಾರ್‌

ಜಿಲ್ಲಾಸ್ಪತ್ರೆ ಸಮಸ್ಯೆ ವಾರದಲ್ಲಿ ಇತ್ಯರ್ಥ: ಆಚಾರ್‌

ಹಣಕಾಸು, ಅನೈತಿಕ ಸಂಬಂಧಕ್ಕೆ ಟಿಟಿ ಚಾಲಕನ ಕೊಲೆ

ಹಣಕಾಸು, ಅನೈತಿಕ ಸಂಬಂಧಕ್ಕೆ ಟಿಟಿ ಚಾಲಕನ ಕೊಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.