ಕಾಮನ್ವೆಲ್ತ್: ಭಾರತಕ್ಕೆ 16 ನೇ ಚಿನ್ನದ ಪದಕ ತಂದ 15ರ ಶೂಟರ್ !
Team Udayavani, Apr 13, 2018, 11:47 AM IST
ಗೋಲ್ಡ್ ಕೋಸ್ಟ್: ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತದ ಪದಕಗಳ ಬೇಟೆ ಮುಂದುವರಿದಿದ್ದು, 9 ನೇ ದಿನವಾದ ಶುಕ್ರವಾರ ಶೂಟರ್ ತೇಜಸ್ವಿನಿ ಸಾವಂತ್ ಅವರು ಚಿನ್ನದ ಪದಕ ಜಯಿಸಿದ ಬೆನ್ನಲ್ಲೇ 15 ರ ಹರೆಯದ ಶೂಟರ್ ಅನೀಶ್ ಬನ್ವಾಲಾ 16 ನೇ ಚಿನ್ನ ಗೆದ್ದು ದೊಡ್ಡ ಸಾಧನೆ ಮಾಡಿದ್ದಾರೆ.
25 ಮೀಟರ್ ರ್ಯಾಪಿಡ್ ಫೈರ್ ಸುತ್ತಿನಲ್ಲಿ ಗುರಿ ತಲುಪಿ ಚಿನ್ನದ ಪದಕವನ್ನುಅನೀಶ್ ಗೆದ್ದಿದ್ದಾರೆ. ಇದರಿಂದಾಗಿ ತೀ ಕಡಿಮೆ ವಯಸ್ಸಿನಲ್ಲಿ ಚಿನ್ನ ಗೆದ್ದ ದಾಖಲೆಯನ್ನು ತನ್ನದಾಗಿಸಿಕೊಂಡು ಭಾರತದ ಮನು ಭಾಕರ್ ಅವರ ದಾಖಲೆಯನ್ನು ಮುರಿದರು. ಇದೇ ಪಂದ್ಯಾವಳಿಯಲ್ಲಿ 16 ರ ಹರೆಯದ ಮನು ಭಾಕರ್ ಚಿನ್ನ ಗೆದ್ದಿದ್ದರು.
ಮಹಿಳೆಯರ 50ಎಂ ರೈಫಲ್ ಪ್ರೋನ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದ ತೇಜಸ್ವಿನಿ 50 ಎಮ್ ರೈಫಲ್ನಲ್ಲಿ ಚಿನ್ನ ಗೆದ್ದರು. ಅಂಜುಮ್ ಮೌದ್ಗಿಲ್ ಅವರು ಬೆಳ್ಳಿ ಪದಕ ಜಯಿಸಿದರು.
ಪದಕ ಪಟ್ಟಿಯಲ್ಲಿ 16 ಚಿನ್ನ, 8 ಬೆಳ್ಳಿ ಮತ್ತು 11 ಕಂಚಿನ ಪದಕಗಳೊಂದಿಗೆ ಭಾರತ 3 ನೇ ಸ್ಥಾನದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ