ಸ್ಕ್ವಾಷ್: ಚಿನ್ನ ಉಳಿಸಿಕೊಳ್ಳುವ ಹಾದಿಯಲ್ಲಿ ದೀಪಿಕಾ-ಜೋಶ್ನಾ
Team Udayavani, Apr 15, 2018, 7:40 AM IST
ಗೋಲ್ಡ್ಕೋಸ್ಟ್: ಹಾಲಿ ಚಾಂಪಿಯನ್ ದೀಪಿಕಾ ಪಳ್ಳಿಕಲ್ ಮತ್ತು ಜೋಶ್ನಾ ಚಿನ್ನಪ್ಪ ಕಾಮನ್ವೆಲ್ತ್ ಗೇಮ್ಸ್ ವನಿತಾ ಡಬಲ್ಸ್ ಸ್ಕ್ವಾಷ್ ಸ್ಪರ್ಧೆಯ ಫೈನಲ್ ಪ್ರವೇಶಿಸಿದ್ದಾರೆ. ಇವರು ಗ್ಲಾಸೊYàದಲ್ಲಿ ಗೆದ್ದ ಚಿನ್ನದ ಪದಕವನ್ನು ಉಳಿಸಿಕೊಳ್ಳುವರೆಂಬ ನಿರೀಕ್ಷೆ ಭಾರತದ ಕ್ರೀಡಾಭಿಮಾನಿಗಳದ್ದು.
ಶನಿವಾರದ ಸೆಮಿಫೈನಲ್ ಸ್ಪರ್ಧೆಯಲ್ಲಿ ದೀಪಿಕಾ-ಜೋಶ್ನಾ ಇಂಗ್ಲೆಂಡ್ನ ಲಾರಾ ಮಸ್ಸಾರೊ-ಸಾರಾ ಜೇನ್ ಪೆರ್ರಿ ಜೋಡಿಯನ್ನು 2-0 (11-10, 11-5) ನೇರ ಗೇಮ್ನಿಂದ ಸೋಲಿಸಿದರು. ಆರಂಭಿಕ ಗೇಮ್ನಲ್ಲಿ ಸ್ಪರ್ಧೆ ಬಹಳ ಜಟಿಲವಾಗಿತ್ತು. ಯಾರೂ ಗೆಲ್ಲಬಹುದಾದ ಸ್ಥಿತಿ ಎದುರಾಗಿತ್ತು. ಅಂತಿಮವಾಗಿ ಭಾರತ ಸಣ್ಣ ಮೇಲುಗೈ ಸಾಧಿಸಿ ಗೆಲುವು ತನ್ನದಾಗಿಸಿತು.
ರವಿವಾರದ ಫೈನಲ್ ಸ್ಪರ್ಧೆಯಲ್ಲಿ ದೀಪಿಕಾ-ಜೋಶ್ನಾ ನ್ಯೂಜಿಲ್ಯಾಂಡಿನ ಜೋಯೆಲ್ ಕಿಂಗ್ ಮತ್ತು ಅಮಂಡಾ ಲ್ಯಾಂಡರ್ಸ್ ಮರ್ಫಿ ವಿರುದ್ಧ ಸೆಣಸಾಡಲಿದೆ. ಈ ಜೋಡಿ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯದ ರಶೆಲ್ ಗ್ರಿನ್ಹ್ಯಾಮ್-ಡೋನಾ ಆಕಾØರ್ಟ್ ಜೋಡಿಯನ್ನು 2-0 (11-9, 11-5) ಅಂತರದಿಂದ ಮಣಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ