ಬ್ಯಾಡ್ಮಿಂಟನ್: ಭಾರತಕ್ಕೆ ಮುನ್ನಡೆ
Team Udayavani, Apr 6, 2018, 6:30 AM IST
ಗೋಲ್ಡ್ ಕೋಸ್ಟ್: ಭಾರತೀಯ ಶಟ್ಲರ್ಗಳು ಗೇಮ್ಸ್ನ ಬ್ಯಾಡ್ಮಿಂಟನ್ ಸ್ಪರ್ಧೆಯ ಮಿಕ್ಸೆಡ್ ತಂಡ ವಿಭಾಗದಲ್ಲಿ ಶ್ರೀಲಂಕಾ ಮತ್ತು ಪಾಕಿಸ್ಥಾನ ವಿರುದ್ಧ 5-0 ಅಂತರದಿಂದ ಸುಲಭವಾಗಿ ಜಯ ಸಾಧಿಸಿದೆ.
ವಿಶ್ವದ ಎರಡನೇ ರ್ಯಾಂಕಿನ ಕಿದಂಬಿ ಶ್ರೀಕಾಂತ್ ಮತ್ತು ಸೈನಾ ನೆಹ್ವಾಲ್ ಅವರ ಭರ್ಜರಿ ಆಟದಿಂದಾಗಿ ಭಾರತವು ಬೆಳಗ್ಗೆ ಶ್ರೀಲಂಕಾ ಮತ್ತು ಸಂಜೆ ಪಾಕಿಸ್ಥಾನವನ್ನು ಸುಲಭವಾಗಿ ಮಣಿಸಿತು.
ಪಾಕಿಸ್ಥಾನ ವಿರುದ್ಧದ ಸಿಂಗಲ್ಸ್ ಪಂದ್ಯದಲ್ಲಿ ಶ್ರೀಕಾಂತ್ ಮುರಾದ್ ಅಲಿ ಅವರನ್ನು 21-16, 22-20 ಗೇಮ್ಗಳ ಕಠಿನ ಹೋರಾಟದಲ್ಲಿ ಜಯ ಸಾಧಿಸಿದರು. ಇದೇ ವೇಳೆ ಸೈನಾ ಮಹೂರ್ ಶಹಜಾದ್ ಅವರನ್ನು 21-7, 21-11 ಗೇಮ್ಗಳಿಂದ ಸುಲಭವಾಗಿ ಮಣಿಸಿ ಐದು ಪಂದ್ಯಗಳ ಹೋರಾಟದಲ್ಲಿ 3-0 ಮುನ್ನಡೆ ಸಾಧಿಸಿ ಗೆಲುವು ಖಚಿತಪಡಿಸಿದರು.
ಪುರುಷರ ಡಬಲ್ಸ್ನಲ್ಲಿ ಪ್ರಣವ್ ಚೋಪಾx ಮತ್ತು ಚಿರಾಗ್ ಶೆಟ್ಟಿ ಅವರು ಮುಹಮ್ಮದ್ ಇರ್ಫಾನ್ ಸಯೀದ್ ಭಟ್ಟಿ ಮತ್ತು ಮುರಾದ್ ಅಲಿ ಅವರನ್ನು 21-9, 21-15 ಗೇಮ್ಗಳಿಂದ ಉರುಳಿಸಿದರೆ ವನಿತೆಯರ ಡಬಲ್ಸ್ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ರುತ್ವಿಕಾ ಅವರು ಮಹೂರ್ ಮತ್ತು ಪಲ್ವಾಶಾ ಅವರನ್ನು 21-6, 21-10 ಗೇಮ್ಗಳಿಂದ ಕೆಡಹಿ ಕ್ಲೀನ್ಸಿÌàಪ್ ಸಾಧಿಸಿದರು.
ಮುಂದಿನ ಸುತ್ತಿನಲ್ಲಿ ಭಾರತವು ಸ್ಕಾಟ್ಲೆಂಡ್ ತಂಡವನ್ನು ಎದುರಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ