ಹಾಕಿ: ಚಿನ್ನದ ರೇಸ್ನಿಂದ ಹೊರಬಿದ್ದ ವನಿತೆಯರು
Team Udayavani, Apr 13, 2018, 6:55 AM IST
ಗೋಲ್ಡ್ ಕೋಸ್ಟ್: ಎರಡು ಗೋಲು ದಾಖಲಿಸುವ ಸುವರ್ಣಾವಕಾಶವನ್ನು ಕೈಚೆಲ್ಲಿದ ಭಾರತದ ವನಿತೆಯರು ಗೇಮ್ಸ್ ಹಾಕಿ ಸೆಮಿಫೈನಲ್ನಲ್ಲಿ 0-1 ಗೋಲುಗಳ ಅಂತರದಿಂದ ಆಸ್ಟ್ರೇಲಿಯಕ್ಕೆ ಶರಣಾಯಿತು.
ಹೀಗಾಗಿ ಭಾರತಕ್ಕೆ ಚಿನ್ನ ಅಥವಾ ಬೆಳ್ಳಿ ಪದಕ ಗೆಲ್ಲುವ ಅವಕಾಶ ಕೈತಪ್ಪಿದೆ. ಮುಂದೆ ಕಂಚಿನ ಪದಕದ ಹೋರಾಟದಲ್ಲಿ ಭಾರತೀಯರು ಇಂಗ್ಲೆಂಡ್ ತಂಡವನ್ನು ಎದುರಿಸಲಿದ್ದಾರೆ.
ಆಸ್ಟ್ರೇಲಿಯ ಪರ ಗ್ರೇಸ್ ಸ್ಟುವರ್ಟ್3ನೇ ಕ್ವಾರ್ಟರ್ನಲ್ಲಿ ನಿರ್ಣಾಯಕ ಗೋಲು ದಾಖಲಿಸಿದರು. ತಂಡಕ್ಕೆ 1-0 ಮುನ್ನಡೆ ದೊರಕಿಸಿಕೊಟ್ಟರು. ಅನಂತರ ಭಾರತದ ನವನೀತ್ ಕೌರ್ ಹಾಗೂ ರಾಣಿ ರಾಮ್ಪಾಲ್ ಗೋಲು ದಾಖಲಿಸುವ ಅವಕಾಶವನ್ನು ಕೈಚೆಲ್ಲಿದರು. ಇದರಿಂದ ಭಾರತಕ್ಕೆ ಡ್ರಾ ಸಾಧಿಸುವ ಅಥವಾ ಗೆಲ್ಲುವ ಅವಕಾಶ ಕೈತಪ್ಪಿತು.