ಕಾಮನ್ವೆಲ್ತ್ ವೆಬ್ಸೈಟ್ ಸುಶೀಲ್ ಹೆಸರು ಕಾಣೆ, ನಂತರ ಸೇರ್ಪಡೆ
Team Udayavani, Mar 31, 2018, 6:00 AM IST
ಹೊಸದಿಲ್ಲಿ: ಕಾಮನ್ವೆಲ್ತ್ ಗೇಮ್ಸ್ನ ಸಂಘಟಕರು ವೆಬ್ಸೈಟ್ನಲ್ಲಿ ಪ್ರಕಟಿಸಿದ ಕುಸ್ತಿಯ 74 ಕೆ.ಜಿ. ವಿಭಾಗದ ಸ್ಪರ್ಧಿಗಳ ಪಟ್ಟಿಯಲ್ಲಿ ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತ ಸುಶೀಲ್ ಕುಮಾರ್ ಹೆಸರು ನೋಂದಣಿಯಾಗಿರಲಿಲ್ಲ. ಇದರಿಂದ ಕೆಲಕಾಲ ಭಾರತೀಯ ಅಧಿಕಾರಿಗಳು ಮತ್ತು ಕ್ರೀಡಾಭಿಮಾನಿಗಳಲ್ಲಿ ಆತಂಕ ಸೃಷ್ಟಿಯಾಗಿತ್ತು. ಅನಂತರ ವೆಬ್ಸೈಟ್ನಲ್ಲಿ ಹೆಸರನ್ನು ಸೇರಿಸಲಾಗಿದ್ದು, ಕ್ರೀಡಾಭಿಮಾನಿಗಳು ನಿಟ್ಟುಸಿರು ಬಿಡುವಂತಾಗಿದೆ.
ಪುರುಷರ ಫ್ರೀಸ್ಟೈಲ್ 74 ಕೆ.ಜಿ. ಕುಸ್ತಿ ವಿಭಾಗದ ಸ್ಪರ್ಧಿಗಳ ಪಟ್ಟಿಯಲ್ಲಿ ಒಟ್ಟು 15 ಮಂದಿಯ ಹೆಸರನ್ನು ಮಾತ್ರ ಪ್ರಕಟಿಸಲಾಗಿತ್ತು. ಸುಶೀಲ್ ಅವರ ಹೆಸರು 16ನೇ ಕ್ರಮಾಂಕದಲ್ಲಿ ಇರಬೇಕಿತ್ತು. ಆದರೆ ಇರಲಿಲ್ಲ. ಅನಂತರ ಅಂತಿಮವಾಗಿ ವೆಬ್ಸೈಟ್ನಲ್ಲಿ ಸೇರಿಸಲಾಯಿತು. ಇನ್ನುಳಿದದಂತೆ ಪುರುಷರ ಮತ್ತು ಮಹಿಳೆಯರ ಫ್ರೀಸ್ಟೈಲ್ ಕುಸ್ತಿ ವಿಭಾಗಗಳಲ್ಲಿ ಭಾರತದ ಒಟ್ಟು 11 ಕುಸ್ತಿಪಟುಗಳು ಭಾಗವಹಿಸುತ್ತಿದ್ದು, ಎಲ್ಲರ ಹೆಸರೂ ಪ್ರಕಟವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು