ಪ್ಯಾರಾ ಪವರ್‌ ಲಿಫ್ಟಿಂಗ್‌ನಲ್ಲಿ ಸುಧೀರ್‌ಗೆ ಚಿನ್ನ; ಭಾರತಕ್ಕೆ ಈ ಬಾರಿ 6ನೇ ಬಂಗಾರ

Team Udayavani, Aug 5, 2022, 9:21 PM IST

ಪ್ಯಾರಾ ಪವರ್‌ ಲಿಫ್ಟಿಂಗ್‌ನಲ್ಲಿ ಸುಧೀರ್‌ಗೆ ಚಿನ್ನ; ಭಾರತಕ್ಕೆ ಈ ಬಾರಿ 6ನೇ ಬಂಗಾರ

ಬರ್ಮಿಂಗ್‌ಹ್ಯಾಮ್‌: ಭಾರತಕ್ಕೆ ಗುರುವಾರ ತಡರಾತ್ರಿ ಪ್ಯಾರಾ ಪವರ್‌ ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಒಲಿಯಿತು.

ಹರ್ಯಾಣದ ಸುಧೀರ್‌ ಅವರು ಪುರುಷರ ಹೆವಿವೇಟ್‌ನಲ್ಲಿ ಚಿನ್ನದ ಸಿಂಚನ ಮಾಡಿದರು. 2018ರ ಏಷ್ಯನ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಸುಧೀರ್‌, ಕಾಮನ್‌ವೆಲ್ತ್‌ನಲ್ಲಿ ಅದನ್ನು ಬಂಗಾರದ ಮಟ್ಟಕ್ಕೆ ಏರಿಸಿದರು. ಇದು ಭಾರತಕ್ಕೆ ಈ ಬಾರಿ ಬಂದ 6ನೇ ಬಂಗಾರದ ಪದಕ.

ಬೇಸರದ ಸಂಗತಿಯೆಂದರೆ ಕರ್ನಾಟಕದ ಮಹಿಳಾ ಸ್ಪರ್ಧಿ ಸಕೀನಾ ಖಾತುನ್‌ ಪವರ್‌ಲಿಫ್ಟಿಂಗ್‌ನಲ್ಲಿ ವಿಫ‌ಲರಾಗಿದ್ದು.

ಸುಧೀರ್‌ ತಮ್ಮ ಮೊದಲ ಯತ್ನದಲ್ಲಿ 208 ಕೆಜಿ ಎತ್ತಿದ್ದರು. 2ನೇ ಯತ್ನದಲ್ಲಿ ಅದನ್ನು 212 ಕೆಜಿಗೆ ವಿಸ್ತರಿಸಿದರು. ಮೂರನೇ ಯತ್ನದಲ್ಲಿ ಅವರು 217 ಕೆಜಿ ಎತ್ತಲು ಹೋಗಿ ವಿಫ‌ಲರಾದರು. ಇಷ್ಟರಲ್ಲಾಗಲೇ ಅವರು 134.5 ಅಂಕಗಳನ್ನು ಗಳಿಸಿಯಾಗಿತ್ತು.

ಜೊತೆಗೆ ಗೇಮ್ಸ್‌ನ ಈ ವಿಭಾಗದಲ್ಲಿ ಗರಿಷ್ಠ ತೂಕ ಎತ್ತಿದ ದಾಖಲೆಯನ್ನೂ ನಿರ್ಮಿಸಿದರು. ಹಾಗಾಗಿ ಅವರ ಚಿನ್ನದ ಪದಕ ಆಗಲೇ ಖಚಿತವಾಗಿತ್ತು. ಇಲ್ಲಿ ಕ್ರಿಸ್ಟಿಯನ್‌ ಬೆಳ್ಳಿ, ಮಿಕ್ಕಿ ಯೂಲ್‌ ಕಂಚಿನ ಪದಕ ಗೆದ್ದರು.

4ನೇ ವರ್ಷದಲ್ಲೇ ಪೋಲಿಯೊ
ಸುಧೀರ್‌ ಹಿನ್ನೆಲೆ ಇಲ್ಲಿ ಮುಖ್ಯವಾಗುತ್ತದೆ. ಹರ್ಯಾಣದ ಸೋನಿಪತ್‌ನವರಾದ ಅವರಿಗೆ ಈಗ 27 ವರ್ಷ. ಅವರಿಗೆ ಕೇವಲ 4 ವರ್ಷವಾಗಿದ್ದಾಗ ವಿಪರೀತ ಜ್ವರ ಬಂದು ಅಂಗವೈಕಲ್ಯಕ್ಕೆ ತುತ್ತಾದರು. ಆದರೆ ಅವರಲ್ಲಿ ಕ್ರೀಡಾಪಟುವಾಗಬೇಕೆಂಬ ಆಸೆ ಬಾಲ್ಯದಿಂದಲೇ ಇತ್ತು. ಹಾಗಾಗಿ ತಮ್ಮ ಕಠಿಣಯತ್ನವನ್ನು ಮುಂದುವರಿಸಿದರು. 2013ರಲ್ಲಿ ಅವರು ಕ್ರೀಡಾಜೀವನವನ್ನು ಶುರು ಮಾಡಿದರು. 2016ರಲ್ಲಿ ನಡೆದ ರಾಷ್ಟ್ರೀಯ ಕೂಟದಲ್ಲಿ ಬಂಗಾರವನ್ನು ಗೆದ್ದರು. 2018ರ ಏಷ್ಯಾ ಪ್ಯಾರಾ ಗೇಮ್ಸ್‌ ಮೂಲಕ ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಕಾಲಿಟ್ಟರು. ಅಲ್ಲಿ ಕಂಚಿನ ಪದಕವನ್ನೇ ಗೆದ್ದರು.

ಟಾಪ್ ನ್ಯೂಸ್

news-2

ಸ್ವಾತಂತ್ರ್ಯ ದಿನಾಚರಣೆ; ಅಂಬೇಡ್ಕರ್ ಭಾವಚಿತ್ರ ಮರೆತ ತಾಲೂಕಾಡಳಿತ; ದಲಿತ ಸಂಘನೆಗಳ ಆಕ್ರೋಶ

ಸ್ವಾತಂತ್ರ್ಯ ಹೋರಾಟ; ಬಾಪು ಕೈಯಲ್ಲಿ ಹೂಂಕರಿಸಿದ್ದ ಬೆತ್ತ ಕನ್ನಡ ನೆಲದ್ದು

ಸ್ವಾತಂತ್ರ್ಯ ಹೋರಾಟ; ಬಾಪು ಕೈಯಲ್ಲಿ ಹೂಂಕರಿಸಿದ್ದ ಬೆತ್ತ ಕನ್ನಡ ನೆಲದ್ದು

ಬ್ರಿಟಿಷರಿಗೆ ಸಾಧ್ಯವಾದಷ್ಟು ತೊಂದರೆ ಕೊಡಬೇಕು ಎನ್ನುವ ಛಲ ಇತ್ತು: ನಾಗಭೂಷಣ ರಾವ್‌

ಬ್ರಿಟಿಷರಿಗೆ ಸಾಧ್ಯವಾದಷ್ಟು ತೊಂದರೆ ಕೊಡಬೇಕು ಎನ್ನುವ ಛಲ ಇತ್ತು: ನಾಗಭೂಷಣ ರಾವ್‌

ಬೆಂಗಳೂರಿನ ಸ್ವಾತಂತ್ರ್ಯ ಚಳವಳಿ ಉಳಿದ ನಗರಗಳಿಗಿಂತ ಭಿನ್ನ

ಬೆಂಗಳೂರಿನ ಸ್ವಾತಂತ್ರ್ಯ ಚಳವಳಿ ಉಳಿದ ನಗರಗಳಿಗಿಂತ ಭಿನ್ನ

tricolour flag

ಮನೆ ಮನೆಗಳಲ್ಲಿ ಹಾರಿಸಿದ ತ್ರಿವರ್ಣ ಧ್ವಜ ಇಳಿಸುವ ಮುನ್ನ ಈ ಅಂಶಗಳನ್ನು ನೆನಪಿಡಿ

news-1

ಕಡಬ: ಧ್ವಜಾರೋಹಣದ ವೇಳೆ ಕುಸಿದು ಬಿದ್ದ ನಿವೃತ್ತ ಸೈನಿಕ ಮೃತ್ಯು

ವಾಡಿ : ಎಸಿಸಿ ಆವರಣದಲ್ಲಿ ಉಲ್ಟಾ ಹಾರಿದ ರಾಷ್ಟ್ರ ಬಾವುಟ!

ವಾಡಿ : ಎಸಿಸಿ ಆವರಣದಲ್ಲಿ ಉಲ್ಟಾ ಹಾರಿದ ರಾಷ್ಟ್ರ ಬಾವುಟ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಿಂಬಾಬ್ವೆಗೆ ಆಗಮಿಸಿದ ಟೀಮ್‌ ಇಂಡಿಯಾ: ಆಗಸ್ಟ್‌ 18ರಿಂದ 3 ಪಂದ್ಯಗಳ ಏಕದಿನ ಸರಣಿ

ಜಿಂಬಾಬ್ವೆಗೆ ಆಗಮಿಸಿದ ಟೀಮ್‌ ಇಂಡಿಯಾ: ಆಗಸ್ಟ್‌ 18ರಿಂದ 3 ಪಂದ್ಯಗಳ ಏಕದಿನ ಸರಣಿ

ನಾನು ನಿಜಕ್ಕೂ ಅದೃಷ್ಟವಂತೆ,ಈ ಬಾರಿ ಹ್ಯಾಟ್ರಿಕ್‌ ತಪ್ಪಲಿಲ್ಲ: ಅಲಾನಾ ಕಿಂಗ್‌

ನಾನು ನಿಜಕ್ಕೂ ಅದೃಷ್ಟವಂತೆ,ಈ ಬಾರಿ ಹ್ಯಾಟ್ರಿಕ್‌ ತಪ್ಪಲಿಲ್ಲ: ಅಲಾನಾ ಕಿಂಗ್‌

ಟೆಸ್ಟ್‌ ಸರಣಿ: ದಕ್ಷಿಣ ಆಫ್ರಿಕಾ ತಂಡದ ಬಲಗೈ ಪೇಸ್‌ ಬೌಲರ್‌ ಡ್ನೂನ್‌ ಒಲಿವರ್‌ ಔಟ್‌

ಟೆಸ್ಟ್‌ ಸರಣಿ: ದಕ್ಷಿಣ ಆಫ್ರಿಕಾ ತಂಡದ ಬಲಗೈ ಪೇಸ್‌ ಬೌಲರ್‌ ಡ್ನೂನ್‌ ಒಲಿವರ್‌ ಔಟ್‌

ಕೆನಡಿಯನ್‌ ಮಾಸ್ಟರ್: ಹ್ಯೂಬರ್ಟ್‌ ಹುರ್ಕಾಝ್- ಪಾಬ್ಲೊ ಕರೆನೊ ಬುಸ್ಟ ಮುಖಾಮುಖಿ

ಕೆನಡಿಯನ್‌ ಮಾಸ್ಟರ್: ಹ್ಯೂಬರ್ಟ್‌ ಹುರ್ಕಾಝ್- ಪಾಬ್ಲೊ ಕರೆನೊ ಬುಸ್ಟ ಮುಖಾಮುಖಿ

ಖ್ಯಾತ ಟೆನಿಸಿಗ ನೊವಾಕ್‌ ಜೊಕೋವಿಕ್‌: ಮತ್ತೆ ಲಸಿಕೆ ವಿವಾದ

ಖ್ಯಾತ ಟೆನಿಸಿಗ ನೊವಾಕ್‌ ಜೊಕೋವಿಕ್‌: ಮತ್ತೆ ಲಸಿಕೆ ವಿವಾದ

MUST WATCH

udayavani youtube

Aurobindo Ghoseರ ಕನಸಿನ ಭಾರತ ಹೇಗಿತ್ತು ಗೊತ್ತಾ?

udayavani youtube

ಮಂಗಳೂರು: ಕುದ್ರೋಳಿಯಲ್ಲಿ 900 ಕೆ.ಜಿ ಧವಸ ಧಾನ್ಯದಿಂದ ತಿರಂಗಾ ಕಲಾಕೃತಿ ರಚನೆ |

udayavani youtube

ಮರೆತುಹೋದ ಅಗೆಲು ಸೇವೆಯ ಪ್ರಸಾದದ ಊಟ ಮೂರು ದಿನವಾದ್ರೂ ಹಾಳಾಗಿರಲಿಲ್ಲ.. |ಕೊರಗಜ್ಜ ಸ್ವಾಮಿ

udayavani youtube

ಷೇರು ಮಾರುಕಟ್ಟೆ ದಿಗ್ಗಜ ರಾಕೇಶ್ ಜುಂಜುನ್‌ವಾಲಾ ಇನ್ನಿಲ್ಲ

udayavani youtube

ಉಬ್ಬು ಶಿಲ್ಪದಲ್ಲಿ ಅರಳಿದೆ ಅಮರ ಸುಳ್ಯ ಕ್ರಾಂತಿಯ ಚರಿತ್ರೆ

ಹೊಸ ಸೇರ್ಪಡೆ

news-2

ಸ್ವಾತಂತ್ರ್ಯ ದಿನಾಚರಣೆ; ಅಂಬೇಡ್ಕರ್ ಭಾವಚಿತ್ರ ಮರೆತ ತಾಲೂಕಾಡಳಿತ; ದಲಿತ ಸಂಘನೆಗಳ ಆಕ್ರೋಶ

ತೆರೆಯತ್ತ ‘ಧಮ್’..: ಇದು ಸುದೀಪ್ ಚಿತ್ರವಲ್ಲ

ತೆರೆಯತ್ತ ‘ಧಮ್’..: ಇದು ಸುದೀಪ್ ಚಿತ್ರವಲ್ಲ

ಕಾಪು ತಾಲೂಕು ಮಟ್ಟದ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ

ಕಾಪು ತಾಲೂಕು ಮಟ್ಟದ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ

ಸ್ವಾತಂತ್ರ್ಯ ಹೋರಾಟ; ಬಾಪು ಕೈಯಲ್ಲಿ ಹೂಂಕರಿಸಿದ್ದ ಬೆತ್ತ ಕನ್ನಡ ನೆಲದ್ದು

ಸ್ವಾತಂತ್ರ್ಯ ಹೋರಾಟ; ಬಾಪು ಕೈಯಲ್ಲಿ ಹೂಂಕರಿಸಿದ್ದ ಬೆತ್ತ ಕನ್ನಡ ನೆಲದ್ದು

ವಿದ್ಯಾರ್ಥಿಗಳ ಬದುಕಿನಲ್ಲಿ ಹೊಸ ಚೈತನ್ಯ ಮೂಡಿಸುತ್ತಿದೆ ವಿಶ್ವಚೇತನ

ವಿದ್ಯಾರ್ಥಿಗಳ ಬದುಕಿನಲ್ಲಿ ಹೊಸ ಚೈತನ್ಯ ಮೂಡಿಸುತ್ತಿದೆ ವಿಶ್ವಚೇತನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.