ವನಿತಾ ಹಾಕಿ: ಘಾನಾ ವಿರುದ್ಧ ಭಾರತ ಗೆಲುವಿನ ಗಾನ
Team Udayavani, Jul 29, 2022, 10:57 PM IST
ಬರ್ಮಿಂಗ್ಹ್ಯಾಮ್: ಗೇಮ್ಸ್ ವನಿತಾ ಹಾಕಿ ಪಂದ್ಯಾವಳಿಯ “ಎ’ ವಿಭಾಗದ ಮೊದಲ ಮುಖಾಮುಖಿಯಲ್ಲಿ ಘಾನಾ ವಿರುದ್ಧ ಭಾರತ 5-0 ಗೋಲುಗಳ ಗೆಲುವಿನ ಗಾನ ಮೊಳಗಿಸಿದೆ.
ಗುರ್ಜೀತ್ ಕೌರ್ ಅವಳಿ ಗೋಲು ಬಾರಿಸಿ ಮೆರೆದರು. ಇವರ ಸಾಹಸದಿಂದ ಭಾರತ 4ನೇ ನಿಮಿಷದಲ್ಲೇ ಖಾತೆ ತೆರೆಯಿತು. ಬಳಿಕ ನೇಹಾ ಮತ್ತೂಂದು ಗೋಲು ಬಾರಿಸಿದರು. ವಿರಾಮದ ವೇಳೆ ಭಾರತ 2-0 ಮುನ್ನಡೆಯಲ್ಲಿತ್ತು.
ವಿರಾಮದ ಬಳಿಕ ಭಾರತದ ಆಕ್ರಮಣ ಇನ್ನಷ್ಟು ಬಿರುಸು ಪಡೆಯಿತು. ಸಂಗೀತಾ, ಗುರ್ಜೀತ್ ಕೌರ್ ಮತ್ತು ಕೊನೆಯ ಹಂತದಲ್ಲಿ ಸಲೀಮಾ ಟೇಟೆ ಗೋಲು ಸಿಡಿಸಿದರು.
ಭಾರತ ತನ್ನ ದ್ವಿತೀಯ ಗ್ರೂಪ್ ಪಂದ್ಯವನ್ನು ಶನಿವಾರ ವೇಲ್ಸ್ ವಿರುದ್ಧ ಆಡಲಿದೆ. ಪುರುಷರ ತಂಡ ರವಿವಾರ ಘಾನಾ ವಿರುದ್ಧವೇ ತನ್ನ ಅಭಿಯಾನ ಆರಂಭಿಸಲಿದೆ.