ಸ್ವ ಹಿತಾಸಕ್ತಿ ಸಂಘರ್ಷ: ಗಂಗೂಲಿಗೂ ಸಿಕ್ಕಿತು ಕ್ಲೀನ್ ಚಿಟ್

Team Udayavani, Nov 17, 2019, 2:55 PM IST

ಮುಂಬೈ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮೇಲೆ ಮಾಡಲಾಗಿದ್ದ ಸ್ವಹಿತಾಸಕ್ತಿ ಆಪಾದನೆಯಿಂದ ಮುಕ್ತಿ ನೀಡಲಾಗಿದೆ. ಬಿಸಿಸಿಐನ ನೀತಿಪಾಲನಾ ಅಧಿಕಾರಿ ಡಿ ಕೆ ಜೈನ್ ಅವರು ಗಂಗೂಲಿ ಮೇಲಿದ್ದ ದೂರನ್ನು ತಿರಸ್ಕರಿಸಿ ಕ್ಲೀನ್ ಚಿಟ್ ನೀಡಿದ್ದಾರೆ.

ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ನ ಅಜೀವ ಸದಸ್ಯ ಸಂಜೀವ್ ಗುಪ್ತಾ ಅವರು ಕಳೆದ ಅಕ್ಟೋಬರ್ ನಾಲ್ಕರಂದು ಗಂಗೂಲಿ ಮೇಲೆ ಸ್ವಹಿತಾಸಕ್ತಿ ಆರೋಪ ಮಾಡಿದ್ದರು. ಬೆಂಗಾಲ್ ಕ್ರಿಕೆಟ್ ಅಧ್ಯಕ್ಷಗಿರಿ ಮತ್ತು ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯ ನೇತೃತ್ವವನ್ನು ಗಂಗೂಲಿ ಏಕಕಾಲಕ್ಕೆ ಹೊತ್ತಿದ್ದಾರೆ ಎಂದು ಸಂಜೀವ್ ಗುಪ್ತಾ ಆರೋಪಿಸಿದ್ದರು.

ಬಿಸಿಸಿಐನ ನೂತನ ಸಂವಿಧಾನದ ಪ್ರಕಾರ ಏಕಕಾಲಕ್ಕೆ ವ್ಯಕ್ತಿಯೋರ್ವ ಎರಡು ಅಥವಾ  ಎರಡಕ್ಕಿಂತ ಹೆಚ್ಚು ಆದಾಯ ಬರುವ ಹುದ್ದೆಗಳನ್ನು ಹೊಂದುವಂತಿಲ್ಲ.

ಅಕ್ಟೋಬರ್ 23ರಂದು ಬಿಸಿಸಿಐನ ಅಧ್ಯಕ್ಷನಾಗಿ ಆಯ್ಕೆಯಾದ ದಾದ ಬೆಂಗಾಲ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ