ಕ್ಲಬ್ ಕ್ರಿಕೆಟ್ನಲ್ಲಿ ವಾರ್ನರ್, ಬ್ಯಾನ್ಕ್ರಾಫ್ಟ್
Team Udayavani, May 8, 2018, 6:00 AM IST
ಸಿಡ್ನಿ: ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್ ಸರಣಿ ವೇಳೆ ಚೆಂಡು ವಿರೂಪ ಪ್ರಕರಣದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿಯಿಂದ ಕ್ರಮವಾಗಿ ಒಂದು ವರ್ಷ ಮತ್ತು 9 ತಿಂಗಳು ನಿಷೇಧಕ್ಕೊಳಗಾಗಿರುವ ಡೇವಿಡ್ ವಾರ್ನರ್ ಮತ್ತು ಕ್ಯಾಮರೂನ್ ಬ್ಯಾನ್ಕ್ರಾಫ್ಟ್ ಕ್ಲಬ್ ಕ್ರಿಕೆಟ್ ಆಡಲು ಅಣಿಯಾಗಿದ್ದಾರೆ.
ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್ನಿಂದ ನಿಷೇಧಕ್ಕೊಳಗಾಗಿದ್ದರೂ ಕ್ಲಬ್ ಕ್ರಿಕೆಟ್ನಲ್ಲಿ ಆಡಲು ಅವರಿಗೆ ಅನುಮತಿ ನೀಡಲಾಗಿದೆ. ಹೀಗಾಗಿ ಜುಲೈ ತಿಂಗಳಿಂದ ಪ್ರಮುಖ ಕ್ಲಬ್ ತಂಡದಲ್ಲಿ ಆಡಲು ವಾರ್ನರ್ ಮತ್ತು ಬ್ಯಾನ್ಕ್ರಾಫ್ಟ್ ಸಿದ್ಧವಾಗಿದ್ದಾರೆ ಎಂದು ಆಸ್ಟ್ರೇಲಿಯದ ವರದಿಯೊಂದು ತಿಳಿಸಿದೆ.
ನಿಷೇಧಕ್ಕೊಳಗಾಗಿರುವ ಮತ್ತೂಬ್ಬ ಪ್ರಮುಖ ಆಟಗಾರ ಸ್ಟೀವ್ ಸ್ಮಿತ್ ಇಂಗ್ಲೆಂಡ್ನಲ್ಲಿ ಕೌಂಟಿ ಕ್ರಿಕೆಟ್ ಆಡುವ ಸಾಧ್ಯತೆಯಿದೆ. ಆದರೆ ಇದಿನ್ನೂ ದೃಢಪಟ್ಟಿಲ್ಲ.