David Warner; ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಸ್ಟೈಲಿಶ್ ಬ್ಯಾಟರ್ ವಾರ್ನರ್

Team Udayavani, Jun 25, 2024, 5:43 PM IST

David Warner retired from all formats of the cricket

ಮೆಲ್ಬೋರ್ನ್: ಒಂದೆಡೆ ಇತ್ತೀಚಿನವರೆಗೆ ಕ್ರಿಕೆಟ್ ಶಿಶು ಎಂದು ಪರಿಗಣಿಸಲಾಗುತ್ತಿದ್ದ ಅಫ್ಘಾನಿಸ್ತಾನ ತಂಡವು ಮೊದಲ ಬಾರಿಗೆ ಐಸಿಸಿ ಟಿ20 ವಿಶ್ವಕಪ್ ಸೆಮಿ ಫೈನಲ್ ಗೆ ಪ್ರವೇಶ ಪಡೆಯುತ್ತಿದ್ದಂತೆ, ಮತ್ತೊಂದೆಡೆ ಹಾಲಿ ಏಕದಿನ ಚಾಂಪಿಯನ್ ಆಸ್ಟ್ರೇಲಿಯಾ ಮನೆಗೆ ಹೊರಟಿದೆ. ಇದೇ ವೇಳೆ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರು ತನ್ನ 15 ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.

ಭಾರತದ ವಿರುದ್ದ ಸೈಂಟ್ ಲೂಸಿಯಾದಲ್ಲಿ ನಡೆದ ಪಂದ್ಯವೇ ಡೇವಿಡ್ ವಾರ್ನರ್ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿದೆ.

2009ರ ಜನವರಿ 11ರಿಂದ ಆರಂಭವಾದ ಡೇವಿಡ್ ವಾರ್ನರ್ ಎಂಬ ಕಿಂಗ್ಸ್ ಟೌನ್ ನ ಅತ್ಯದ್ಭುತ ಎಡಗೈ ಬ್ಯಾಟರ್ ನ ಕ್ರಿಕೆಟ್ ಜೀವನ ಸೈಂಟ್ ಲೂಸಿಯಾದಲ್ಲಿ ಅಂತ್ಯವಾಗಿದೆ. ಈ 15 ವರ್ಷಗಳಲ್ಲಿ ಡೇವಿಡ್ ವಾರ್ನರ್ 112 ಟೆಸ್ಟ್, 161 ಏಕದಿನ ಪಂದ್ಯಗಳು ಮತ್ತು 110 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಕಳೆದ ನವೆಂಬರ್‌ ನಲ್ಲಿ ಭಾರತ ವಿರುದ್ಧದ ವಿಶ್ವಕಪ್ ಫೈನಲ್ ವಿಜಯದೊಂದಿಗೆ ಏಕದಿನ ಕ್ರಿಕೆಟ್ ಅಂತ್ಯವಾಗಿದ್ದರೆ, ಜನವರಿಯಲ್ಲಿ ಪಾಕಿಸ್ತಾನದ ವಿರುದ್ಧ ಕೊನೆಯ ಟೆಸ್ಟ್‌ ಪಂದ್ಯವಾಡಿದ್ದರು. ಏಕದಿನ ಮತ್ತು ಟೆಸ್ಟ್ ಗೆ ವಿದಾಯ ಹೇಳಿದ್ದ ಸ್ಟೈಲಿಶ್ ಆಟಗಾರ ಟಿ20 ವಿಶ್ವಕಪ್ ನ ಫೈನಲ್ ಪಂದ್ಯದೊಂದಿಗೆ ಕ್ರಿಕೆಟ್ ವೃತ್ತಿಜೀವನ ಅಂತ್ಯಗೊಳಿಸಲು ಬಯಸಿದ್ದರು. ಆದರೆ ಅನಿರೀಕ್ಷಿತವೆಂಬಂತೆ ಆಸೀಸ್ ತಂಡವು ಸೂಪರ್ 8 ಹಂತದಲ್ಲಿಯೇ ತನ್ನ ಅಭಿಯಾನ ಅಂತ್ಯಗೊಳಿಸಿದೆ. ಹೀಗಾಗಿ ವಾರ್ನರ್ ಅವರ ಪಯಣವು ಮುಗಿದಿದೆ.

ಆದರೆ ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ತಂಡಕ್ಕೆ ಸಹಾಯ ಬೇಕಾದಲ್ಲಿ ತಾನು ಆಯ್ಕೆಗೆ ಲಭ್ಯವಿರುವುದಾಗಿ ವಾರ್ನರ್ ಹೇಳಿದ್ದಾರೆ.

ಅವರು ಟಿ20 ಕ್ರಿಕೆಟ್ ನಲ್ಲಿ 110 ಪಂದ್ಯಗಳಿಂದ 33.43 ಸರಾಸರಿ ಮತ್ತು 142.47 ಸ್ಟ್ರೈಕ್ ರೇಟ್‌ನಲ್ಲಿ 3,277 ರನ್‌ ಗಳಿಸಿದ್ದಾರೆ. ಟಿ20 ಸ್ವರೂಪದಲ್ಲಿ ಆಸ್ಟ್ರೇಲಿಯಾದ ಅತಿ ಹೆಚ್ಚು ಸ್ಕೋರರ್ ಮತ್ತು ಏಳನೇ ಅತ್ಯಂತ ಹೈಯೆಸ್ಟ್ ರನ್ ಸ್ಕೋರರ್ ಆಗಿ ನಿವೃತ್ತರಾದರು. ಅವರು ಈ ಮಾದರಿಯಲ್ಲಿ ಒಂದು ಶತಕ ಮತ್ತು 28 ಅರ್ಧಶತಕಗಳನ್ನು ಗಳಿಸಿದ್ದಾರೆ.

112 ಟೆಸ್ಟ್‌ಗಳಿಂದ ಅವರು 2011 ಮತ್ತು 2024 ರ ನಡುವೆ 26 ಶತಕಗಳು ಮತ್ತು 37 ಅರ್ಧಶತಕಗಳೊಂದಿಗೆ 44.59 ಸರಾಸರಿಯಲ್ಲಿ 8,786 ರನ್ ಗಳಿಸಿದ್ದಾರೆ.

ಅವರು 161 ಏಕದಿನ ಪಂದ್ಯಗಳಿಂದ 45.30 ಸರಾಸರಿಯಲ್ಲಿ 22 ಶತಕ ಮತ್ತು 33 ಅರ್ಧ ಶತಕಗಳ ಸಹಾಯದಿಂದ 6,932 ರನ್ ಗಳಿಸಿದ್ದಾರೆ.

ಟಾಪ್ ನ್ಯೂಸ್

ಬಿಹಾರದಲ್ಲೊಂದು ಅಮಾನುಷ ಕೃತ್ಯ… 12 ವರ್ಷದ ಬಾಲಕನನ್ನು ರೈಲು ಹಳಿಗೆ ಕಟ್ಟಿಹಾಕಿ ಥಳಿತ

ಬಿಹಾರದಲ್ಲೊಂದು ಅಮಾನುಷ ಕೃತ್ಯ… 12 ವರ್ಷದ ಬಾಲಕನನ್ನು ರೈಲು ಹಳಿಗೆ ಕಟ್ಟಿಹಾಕಿ ಥಳಿತ

3-udupi

Udupi: ಬೆಳ್ಳಂಬೆಳಗ್ಗೆ ಮನೆಯಲ್ಲಿ ಅಗ್ನಿ ದುರಂತ: ಬಾರ್ ಮಾಲೀಕ ಮೃತ್ಯು, ಪತ್ನಿ ಗಂಭೀರ  

Mudigere: ರಾಣಿ ಝರಿಯ ಕೆಸರುಮಯ ರಸ್ತೆಯಲ್ಲಿ ಬೈಕ್ ರೈಡರ್ ಹುಚ್ಚಾಟ..

Mudigere: ರಾಣಿ ಝರಿಯ ಕೆಸರುಮಯ ರಸ್ತೆಯಲ್ಲಿ ಬೈಕ್ ರೈಡರ್ ಗಳ ಹುಚ್ಚಾಟ..

Madhya Pradesh: ಒಂದೇ ದಿನದಲ್ಲಿ 11ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ವಿಶ್ವದಾಖಲೆ…

Madhya Pradesh: ಒಂದೇ ದಿನದಲ್ಲಿ 11ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ವಿಶ್ವದಾಖಲೆ…

Urban-naxal

Maharastra Urban Naxals Bill: ನಗರ ನಕ್ಸಲರಿಗೆ ಮೂಗುದಾರ

3-udupi

Udupi: ಬಾರ್‌ ಮಾಲಕರ ಮನೆಯಲ್ಲಿ ಅಗ್ನಿ ಅವಘಡ; ದಂಪತಿಗೆ ಗಂಭೀರ ಗಾಯ

SSLC-Students

SSLC Exams: ಎಸೆಸೆಲ್ಸಿ ಮಕ್ಕಳ ಮನೆ ಮನೆಗೆ ಬರ್ತಾರೆ ಶಿಕ್ಷಕರು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-urugwe

Copa America ಫುಟ್‌ಬಾಲ್‌: ಇಂದು ಆರ್ಜೆಂಟೀನಾ-ಕೊಲಂಬಿಯ ಫೈನಲ್‌

1-swamiji

Olympics ಆಟಗಾರ ಈಗ ಸ್ವಾಮೀಜಿ!

1-kik

Australia Tour; ವನಿತಾ ‘ಎ’ ತಂಡಕ್ಕೆ ಮಿನ್ನು ಮಣಿ ನಾಯಕಿ

1-K-L

Mulki; ಬಪ್ಪನಾಡು, ಶಿಮಂತೂರು ದೇಗುಲಗಳಲ್ಲಿ ರಾಹುಲ್‌ ದಂಪತಿ

1-saddas

Wimbledon Doubles: ಪ್ಯಾಟೆನ್‌-ಹೆಲಿಯೋವಾರ; ಟೌನ್ಸೆಂಡ್‌-ಸಿನಿಯಕೋವಾ ಚಾಂಪಿಯನ್ಸ್‌

MUST WATCH

udayavani youtube

ಬೆಂಗಳೂರಿನಲ್ಲೊಂದು ಟ್ರಡಿಶನಲ್ ಮುಳಬಾಗಿಲು ದೋಸೆ

udayavani youtube

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾ*ಳಿ; ಗುಂಡಿನ ದಾಳಿ ಆಗಿದ್ದಾದ್ರು ಹೇಗೆ ?

udayavani youtube

ಕಾಡಾನೆ ದಾಳಿಯಿಂದ ಜಸ್ಟ್ ಮಿಸ್ |ಭಯಾನಕ ಕಾಡಾನೆಯಿಂದ ಜಸ್ಟ್ ಮಿಸ್ ವಿಡಿಯೋ ಸೆರೆ

udayavani youtube

ಅನಂತ್- ರಾಧಿಕಾ ಮದುವೆ ಮಂಟಪದಲ್ಲಿ ಕಾಶಿ ಬನಾರಸ್ ಘಾಟ್ ಗಳ ಮರುಸೃಷ್ಟಿ

udayavani youtube

ತೆಂಕನಿಡಿಯೂರು ಗ್ರಾಮ ಪಂಚಾಯತ್ ನಲ್ಲಿ ಸದಸ್ಯರ ಜಟಾಪ

ಹೊಸ ಸೇರ್ಪಡೆ

ಬಿಹಾರದಲ್ಲೊಂದು ಅಮಾನುಷ ಕೃತ್ಯ… 12 ವರ್ಷದ ಬಾಲಕನನ್ನು ರೈಲು ಹಳಿಗೆ ಕಟ್ಟಿಹಾಕಿ ಥಳಿತ

ಬಿಹಾರದಲ್ಲೊಂದು ಅಮಾನುಷ ಕೃತ್ಯ… 12 ವರ್ಷದ ಬಾಲಕನನ್ನು ರೈಲು ಹಳಿಗೆ ಕಟ್ಟಿಹಾಕಿ ಥಳಿತ

3-udupi

Udupi: ಬೆಳ್ಳಂಬೆಳಗ್ಗೆ ಮನೆಯಲ್ಲಿ ಅಗ್ನಿ ದುರಂತ: ಬಾರ್ ಮಾಲೀಕ ಮೃತ್ಯು, ಪತ್ನಿ ಗಂಭೀರ  

Mudigere: ರಾಣಿ ಝರಿಯ ಕೆಸರುಮಯ ರಸ್ತೆಯಲ್ಲಿ ಬೈಕ್ ರೈಡರ್ ಹುಚ್ಚಾಟ..

Mudigere: ರಾಣಿ ಝರಿಯ ಕೆಸರುಮಯ ರಸ್ತೆಯಲ್ಲಿ ಬೈಕ್ ರೈಡರ್ ಗಳ ಹುಚ್ಚಾಟ..

Madhya Pradesh: ಒಂದೇ ದಿನದಲ್ಲಿ 11ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ವಿಶ್ವದಾಖಲೆ…

Madhya Pradesh: ಒಂದೇ ದಿನದಲ್ಲಿ 11ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ವಿಶ್ವದಾಖಲೆ…

Urban-naxal

Maharastra Urban Naxals Bill: ನಗರ ನಕ್ಸಲರಿಗೆ ಮೂಗುದಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.