ಡೇವಿಸ್ ಕಪ್: ಬೆಂಗಳೂರಿನಲ್ಲಿ ಭಾರತ-ಉಜ್ಬೆಕಿಸ್ಥಾನ ಪಂದ್ಯ
Team Udayavani, Feb 18, 2017, 3:45 AM IST
ಹೊಸದಿಲ್ಲಿ: ಎಪ್ರಿಲ್ನಲ್ಲಿ ನಡೆಯಲಿರುವ ಭಾರತ-ಉಜ್ಬೆಕಿಸ್ಥಾನ ನಡುವಿನ ಡೇವಿಸ್ ಕಪ್ ಪಂದ್ಯಾವಳಿಗೆ ಬೆಂಗಳೂರು ಆತಿಥ್ಯ ವಹಿಸಲಿದೆ. ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಕಾಡೆಮಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ.
ಭಾರತ ಆತಿಥ್ಯದಲ್ಲಿ ಇದೇ ತಿಂಗಳ ಆರಂಭದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಡೇವಿಸ್ ಕಪ್ ಸ್ಪರ್ಧೆಗಳು ನಡೆದಿದ್ದವು. ಇದರಲ್ಲಿ ಭಾರತ 4-1 ರಿಂದ ಭಾರೀ ಜಯ ಸಾಧಿಸಿದೆ. ಅದೇ ರೀತಿ ಉಜ್ಬೆಕಿಸ್ಥಾನ ತಂಡಡ ಕೊರಿಯಾ ವಿರುದ್ಧ ಗೆದ್ದಿದೆ. ಹೀಗಾಗಿ ಎರಡೂ ತಂಡಗಳ ನಡುವೆ ಭಾರೀ ಹೋರಾಟವನ್ನು ನಿರೀಕ್ಷಿಸಬಹುದಾಗಿದೆ.
ಡೇವಿಸ್ ಕಪ್ನಲ್ಲಿ ಭಾರತ ಮತ್ತು ಉಜ್ಬೆಕಿಸ್ತಾನ ತಂಡಗಳು 4 ಬಾರಿ ಮುಖಾಮುಖೀಯಾಗಿದ್ದು, ತಲಾ ಎರಡು ಪಂದ್ಯಗಳನ್ನು ಗೆದ್ದ ಇತಿಹಾಸವನ್ನು ಹೊಂದಿವೆ. ಕೊನೆಯ ಬಾರಿಗೆ ಎರಡು ತಂಡಗಳು ಮುಖಾಮುಖೀಯಾಗಿದ್ದು 2012ರಲ್ಲಿ. ಈ ಪಂದ್ಯದಲ್ಲಿ ಉಜ್ಬೆಕಿಸ್ತಾನ 3-2ರಿಂದ ಜಯ ಸಾಧಿಸಿತ್ತು. ಡೇವಿಸ್ ಕಪ್ ಭಾರತ ತಂಡಕ್ಕೆ ಆಟವಾಡದ ನಾಯಕನಾಗಿ ಮಾಜಿ ಆಟಗಾರ ಮಹೇಶ್ ಭೂಪತಿ ಆಯ್ಕೆಯಾದ ಮೇಲೆ ಇದು ಮೊದಲ ಟೂರ್ನಿಯಾಗಿದೆ.