ಪಾಕ್‌ ವಿರುದ್ಧದ ಡೇವಿಸ್‌ ಕಪ್‌: ನಗಲ್‌, ರಾಮ್‌ಕುಮಾರ್‌ ಲಭ್ಯ

Team Udayavani, Nov 9, 2019, 4:46 AM IST

ಹೊಸದಿಲ್ಲಿ: ಭಾರತದ ಶ್ರೇಷ್ಠ ಸಿಂಗಲ್ಸ್‌ ಆಟಗಾರರಾದ ಸುಮಿತ್‌ ನಗಲ್‌ ಮತ್ತು ರಾಮ್‌ಕುಮಾರ್‌ ರಾಮನಾಥನ್‌ ಅವರು ತಟಸ್ಥ ತಾಣದಲ್ಲಿ ನಡೆಯಲಿರುವ ಪಾಕಿಸ್ಥಾನ ವಿರುದ್ಧದ ಡೇವಿಸ್‌ ಕಪ್‌ ಹೋರಾಟಕ್ಕೆ ಲಭ್ಯರಿರುತ್ತಾರೆಂದು ದೃಢಪಡಿಸಿದ್ದಾರೆ.

ಹಾಗಾಗಿ ಅವರಿಬ್ಬರನ್ನು ಡೇವಿಸ್‌ ಕಪ್‌ ತಂಡದಲ್ಲಿ ಹೆಸರಿಸುವ ಸಾಧ್ಯತೆಯಿದೆ. ಡೇವಿಸ್‌ ಕಪ್‌ ಹೋರಾಟ ನ. 29 ಮತ್ತು 30ರಂದು ನಡೆಯಲಿದೆ.

ಈ ಋತುವಿನಲ್ಲಿ ಶ್ರೇಷ್ಠ ಟೆನಿಸ್‌ ಆಟದ ಪ್ರದರ್ಶನ ನೀಡಿರುವ ನಗಲ್‌ ಅವರು ಗುರುವಾರ ರಾತ್ರಿ ಅಖೀಲ ಭಾರತ ಟೆನಿಸ್‌ ಅಸೋಸಿಯೇಶನ್‌ (ಎಐಟಿಎ)ಗೆ ಪತ್ರವೊಂದನ್ನು ಬರೆದಿದ್ದು ಡೇವಿಸ್‌ ಹೋರಾಟದಲ್ಲಿ ಭಾಗವಹಿಸುವುದನ್ನು ದೃಢಪಡಿಸಿದ್ದಾರೆ. ಹೊಸ ನಾಯಕ ರೋಹಿತ್‌ ರಾಜ್‌ಪಾಲ್‌ ಅವರ ಜತೆ ಮಾತನಾಡಿದ ಬಳಿಕ ನಗಲ್‌ ಎಐಟಿಎಗೆ ತನ್ನ ಲಭ್ಯತೆಯನ್ನು ಇಮೈಲ್‌ ಮೂಲಕ ತಿಳಿಸಿದ್ದಾರೆ ಎಂದು ಎಐಟಿಎ ಅಧಿಕಾರಿ ಹೇಳಿದ್ದಾರೆ.

ನಗಲ್‌ ಮತ್ತು ರಾಮ್‌ಕುಮಾರ್‌ ಅವರು ಲಭ್ಯರಿರುವ ಕಾರಣ ಭಾರತವು ಶ್ರೇಷ್ಠ ಸಿಂಗಲ್ಸ್‌ ಆಟಗಾರರೊಂದಿಗೆ ಪಾಕ್‌ ತಂಡವನ್ನು ಎದುರಿಸಲಿದೆ. ಈ ಹೋರಾಟದ ಮೊದಲ ದಿನ ವಿವಾಹವಾಗಲಿರುವ ಪ್ರಜ್ಞೆàಶ್‌ ಗುಣೇಶ್ವರನ್‌ ಈ ಹೋರಾಟದಲ್ಲಿ ಆಡುವುದಿಲ್ಲ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ