ಡೇವಿಸ್ ಕಪ್: ಭಾರತ-ಪಾಕ್ ಟೂರ್ನಿ ಲಂಡನ್ನಲ್ಲಿ
Team Udayavani, Feb 7, 2019, 12:30 AM IST
ಹೊಸದಿಲ್ಲಿ: ಪಾಕಿಸ್ಥಾನದಲ್ಲಿ ನಡೆಯಬೇಕಿದ್ದ ಭಾರತ-ಪಾಕಿಸ್ಥಾನ ಡೇವಿಸ್ ಕಪ್ ಅರ್ಹತಾ ಕೂಟ ತಟಸ್ಥ ತಾಣದಲ್ಲಿ ನಡೆಯಲಿದ್ದು, ಇದು ಲಂಡನ್ಗೆ ಸ್ಥಳಾಂತರಗೊಳ್ಳುವ ಸಾಧ್ಯತೆ ಹೆಚ್ಚಿದೆ.
ಈ ಪಂದ್ಯಾವಳಿಯನ್ನಾಡಲು ಭಾರತ ತಂಡ ಪಾಕಿಸ್ಥಾನಕ್ಕೆ ತೆರಳಬೇಕಿತ್ತು. ಆದರೆ ಇದಕ್ಕೆ ಕೇಂದ್ರ ಸರಕಾರ ಒಪ್ಪಿಗೆ ನೀಡುವ ಸಾಧ್ಯತೆ ಇಲ್ಲವಾದ್ದರಿಂದ “ಅಖೀಲ ಭಾರತ ಟೆನಿಸ್ ಅಸೋಸಿಯೇಶನ್’ ತಟಸ್ಥ ತಾಣದತ್ತ ಒಲವು ತೋರಿದೆ.
1964ರ ಮಾರ್ಚ್ ಬಳಿಕ ಭಾರತ ಡೇವಿಸ್ ಕಪ್ ತಂಡ ಪಾಕಿಸ್ಥಾನಕ್ಕೆ ತರಳಿಲ್ಲ. ಅಂದು ಲಾಹೋರ್ನಲ್ಲಿ ನಡೆದ ಪಂದ್ಯಾವಳಿಯಲ್ಲಿ ಭಾರತ 4-0 ಅಂತರದಿಂದ ಜಯಿಸಿತ್ತು.ಸೆಪ್ಟಂಬರ್ನಲ್ಲಿ ನಡೆಯಲಿರುವ ಈ ಕೂಟದಲ್ಲಿ ಜಯ ದಾಖಲಿಸಿದ ತಂಡ ವರ್ಲ್ಡ್ ಗ್ರೂಪ್ ಅರ್ಹತಾ ಪಂದ್ಯಾವಳಿಯಲ್ಲಿ ಸ್ಥಾನ ಸಂಪಾದಿಸಲಿದೆ.
ಪಾಕಿಸ್ಥಾನ ತಂಡದ ಯಾವುದೇ ಆಟಗಾರರು ಸಿಂಗಲ್ಸ್ ರ್ಯಾಂಕಿಂಗ್ನಲ್ಲಿ ಅಗ್ರ ನೂರರಲ್ಲಿ ಸ್ಥಾನ ಸಂಪಾದಿಸಿಲ್ಲ. ಹೀಗಾಗಿ ಭಾರತಕ್ಕೆ ಪಾಕ್ ಕಠಿನ ಸವಾಲಾಗಲು ಸಾಧ್ಯವಿಲ್ಲ. ಆದರೆ ಡಬಲ್ಸ್ ವಿಭಾಗದಲ್ಲಿ 67ನೇ ರ್ಯಾಂಕ್ನಲ್ಲಿರುವ ಐಮ್ಉಲ್ ಹಕ್ ಕುರೇಶಿ ಬಗ್ಗೆ ಇದೇ ಮಾತನ್ನು ಹೇಳುವಂತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ