ಡೇವಿಸ್‌ ಸ್ಥಳಾಂತರ: ಪಾಕಿಸ್ಥಾನ ವಿರೋಧ

Team Udayavani, Nov 12, 2019, 5:18 AM IST

ಕರಾಚಿ: ಭಾರತ-ಪಾಕಿಸ್ಥಾನ ನಡುವಿನ ಡೇವಿಸ್‌ ಕಪ್‌ ಟೆನಿಸ್‌ ಪಂದ್ಯಾವಳಿಯನ್ನು ತಟಸ್ಥತಾಣಕ್ಕೆ ವರ್ಗಾಯಿಸಿದ್ದಕ್ಕೆ ಪಾಕ್‌ ಟೆನಿಸ್‌ ಮಂಡಳಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಅಂತಾರಾಷ್ಟ್ರೀಯ ಟೆನಿಸ್‌ ಮಂಡಳಿಗೆ ಅಧಿಕೃತವಾಗಿ ದೂರು ಸಲ್ಲಿಸಿರುವ ಪಾಕ್‌ ಟೆನಿಸ್‌ ಮಂಡಳಿ, ಸ್ಥಳಾಂತರ ತೀರ್ಮಾನವನ್ನು ಪ್ರಶ್ನಿಸಿದೆ.

ನಾವು ಇಸ್ಲಮಾಬಾದ್‌ನಲ್ಲಿ ಟೆನಿಸ್‌ ಪಂದ್ಯ ಆಯೋಜಿಸಲು ಸರ್ವಸನ್ನದ್ಧರಾಗಿದ್ದೇವೆ. ಆದರೂ ಪಂದ್ಯವನ್ನು ಸ್ಥಳಾಂತರಿಸಿದ್ದು ಅಚ್ಚರಿ ತರಿಸಿದೆ. ಸದ್ಯ ಭದ್ರತಾಭೀತಿಯೂ ಇಲ್ಲ, ರಾಜಕೀಯ ಒತ್ತಡಗಳೂ ಇಲ್ಲ. ಈ ಬಗ್ಗೆ ನಮಗೆ ನ. 15ರ ಒಳಗೆ ಉತ್ತರಿಸಬೇಕು ಎಂದು ಪಾಕ್‌ ಮಂಡಳಿ ಆಗ್ರಹಿಸಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ