ಪಂದ್ಯದ ನಡುವೆ ಹೃದಯಾಘಾತ: ಪಾಕ್ ಅಂಪಾಯರ್ ಸಾವು
Team Udayavani, Oct 8, 2019, 12:50 PM IST
ಇಸ್ಲಾಮಾಬಾದ್ : ಇಲ್ಲಿನ ಸ್ಥಳೀಯ ಕ್ರಿಕೆಟ್ ಪಂದ್ಯವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂಪಾಯರ್ ಓರ್ವರು ಪಂದ್ಯದ ನಡುವೆ ಹೃದಯಾಘಾತದಿಂದ ಮತಪಟ್ಟ ಘಟನೆ ಸೋಮವಾರ ನಡೆದಿದೆ.
ನಸೀಂ ಶೇಕ್ ಮೃತಪಟ್ಟ ವ್ಯಕ್ತಿ. ಸ್ಥಳಿಯ ಭಾಗದಲ್ಲಿ ತನ್ನ ಅಂಪಾಯರಿಂಗ್ ನಿಂದ ಸಾಕಷ್ಟು ಹೆಸರು ಗಳಿಸಿದ್ದ ನಸೀಂ ಸೋಮವಾರ ಪಂದ್ಯವೊಂದರಲ್ಲಿ ತೀರ್ಪುಗಾರಿಕೆ ನಡೆಸುತ್ತಿದ್ದರು. ಆದರೆ ಅಲ್ಲೆ ಕುಸಿದು ಬಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಅದಾಗಲೇ ಮೃತರಾಗಿದ್ದರು ಎಂದು ವರದಿಯಾಗಿದೆ.
ಕಸಾಯಿಖಾನೆಯಲ್ಲಿ ಕೆಲಸ ಮಾಡುತ್ತಿದ್ದರೂ ಕ್ರಿಕೆಟ್ ಮೇಲಿನ ಅತಿಯಾದ ಪ್ರೀತಿಯಿಂದ ಸ್ಥಳೀಯ ವಲಯದಲ್ಲಿ ಅಪಾರ ಜನಮನ್ನಣೆ ಪಡೆದಿದ್ದರು.