ಕತಾರ್ ವಿರುದ್ಧ ಭಾರತಕ್ಕೆ ಸೋಲು
Team Udayavani, Mar 13, 2019, 12:30 AM IST
ಹೊಸದಿಲ್ಲಿ: ಭಾರತದ ಅಂಡರ್-23 ಫುಟ್ಬಾಲ್ ತಂಡ ಕತಾರ್ ವಿರುದ್ಧದ ಪಂದ್ಯದಲ್ಲಿ ಸೋಲನುಭವಿಸಿದೆ. ಉಜ್ಬೇಕಿಸ್ಥಾನದಲ್ಲಿ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಭಾರತವು ಕತಾರ್ ವಿರುದ್ಧ 0-1 ಗೋಲಿನಿಂದ ಸೋತಿದೆ. ಈ ಪಂದ್ಯ ಎಎಫ್ಸಿ ಚಾಂಪಿಯನ್ಶಿಪ್ನ ಅರ್ಹತಾ ಕೂಟಕ್ಕೆ ತಯಾರಿ ಪಂದ್ಯವಾಗಿತ್ತು.
ಪಂದ್ಯದ ಆರಂಭದಿಂದಲೂ ಗೋಲು ಹೊಡೆಯಲು ಎರಡು ತಂಡಗಳಲ್ಲಿ ತೀವ್ರ ಪೈಪೋಟಿ ನಡೆಯಲಾರಂಭಿಸಿತು. ಎರಡು ತಂಡಗಳೂ ರಕ್ಷಣಾತ್ಮಕವಾಗಿ ಆಟವಾಡಿದ ಕಾರಣ ಮೊದಲ ಅವಧಿಯಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ದ್ವಿತೀಯಾರ್ಧದಲ್ಲಿ ಎರಡೂ ತಂಡಗಳಿಗೆ ಗೋಲು ಬಾರಿಸಲು ಅನೇಕ ಅವಕಾಶ ಇದ್ದರೂ ಗೋಲಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಕೊನೆಯ ಕ್ಷಣದಲ್ಲಿ ರಹೀಮ್ ಅಲಿ ಗೋಲು ಹೊಡೆಯುವ ಮೂಲಕ ಕತಾರ್ಗೆ 1-0 ಅಂತರದ ಗೆಲುವು ತಂದುಕೊಟ್ಟರು. ಇದೇ ತಿಂಗಳ ಕೊನೆಯಲ್ಲಿ ಎಎಫ್ಸಿ ಅಂಡರ್-23 ಅರ್ಹತಾ ಕೂಟ ಆರಂಭವಾಗಲಿದ್ದು, ಎರಡು ತಂಡಗಳು ಈ ಕೂಟಕ್ಕೆ ಗಮನ ನೀಡಲಿವೆ.