ಸಿಡ್ನಿ ಟೆನಿಸ್: ಹಾಲಿ ಚಾಂಪಿಯನ್ ಕೊಂಟಾಗೆ ಮೊದಲ ಸುತ್ತೇ ಕಂಟಕ
Team Udayavani, Jan 10, 2018, 1:05 PM IST
ಸಿಡ್ನಿ: ಹಾಲಿ ಚಾಂಪಿಯನ್ ಜೊಹಾನ್ನಾ ಕೊಂಟಾ ಸಿಡ್ನಿ ಇಂಟರ್ನ್ಯಾಶನಲ್ ಟೆನಿಸ್ ಪಂದ್ಯಾವಳಿಯ ಮೊದಲ ಸುತ್ತಿನಲ್ಲೇ ಆಘಾತಕಾರಿ ಸೋಲುಂಡು ಹೊರಬಿದ್ದಿದ್ದಾರೆ. ಬ್ರಿಟನ್ನಿನ ಈ ನೆಚ್ಚಿನ ಆಟಗಾರ್ತಿಯನ್ನು ಪೋಲಂಡಿನ ಅಗ್ನಿಸ್ಕಾ ರಾದ್ವಂಸ್ಕಾ 6-3, 7-5 ಅಂತರದಿಂದ ಮಣಿಸಿದರು.
ಈ ಪ್ರಥಮ ಸುತ್ತಿನ ಪಂದ್ಯ ಎನ್ನುವುದು ಕಳೆದ ವರ್ಷದ ಫೈನಲ್ ಸ್ಪರ್ಧೆಯ ಪುನರಾವರ್ತನೆ ಆಗಿತ್ತು. ಆದರೆ ಫಲಿತಾಂಶ ಮಾತ್ರ ತಿರುವು ಮುರುವಾಯಿತು. 2017ರ ಸಿಡ್ನಿ ಫೈನಲ್ನಲ್ಲಿ ಕೊಂಟಾ 6-4, 6-2ರಿಂದ ರಾದ್ವಂಸ್ಕಾಗೆ ಸೋಲುಣಿಸಿ ಚಾಂಪಿಯನ್ ಆಗಿದ್ದರು. ಈ ಬಾರಿ ಮೊದಲ ಸುತ್ತಿನಲ್ಲೇ ರಾದ್ವಂಸ್ಕಾ ಸೇಡು ತೀರಿಸಿಕೊಂಡರು. ಇವರಿಬ್ಬರ ಕಾದಾಟ 82 ನಿಮಿಷಗಳ ತನಕ ಸಾಗಿತು.
ರಾದ್ವಂಸ್ಕಾ ಅವರಿನ್ನು ಅಮೆರಿಕದ ಅರ್ಹತಾ ಆಟಗಾರ್ತಿ ಕ್ಯಾಥರಿನ್ ಬೆಲ್ಲಿಸ್ ವಿರುದ್ಧ ಆಡಲಿದ್ದಾರೆ. ಮೊದಲ ದಿನದಾಟದಲ್ಲಿ ಯುಎಸ್ ಓಪನ್ ಚಾಂಪಿಯನ್ ಸ್ಟೀಫನ್ ಸ್ಲೋನ್ ಕೂಡ ಮೊದಲ ಸುತ್ತಿನ ಆಘಾತಕ್ಕೆ ಒಳಗಾಗಿದ್ದರು. ಇಟೆಲಿಯ ಅರ್ಹತಾ ಆಟಗಾರ್ತಿ ಕ್ಯಾಮಿಲಾ ಜಾರ್ಜಿ 6-3, 6-0 ಅಂತರದಿಂದ ಸ್ಲೋನ್ಗೆ ಸೋಲುಣಿಸಿದ್ದರು.
ಆತಿಥೇಯ ನಾಡಿನ ಆಶ್ ಬಾರ್ಟಿ ದ್ವಿತೀಯ ಸುತ್ತಿನ ಜಯ ದೊಂದಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಇದು ತವರಿನ ಡಬ್ಲ್ಯುಟಿಎ ಕೂಟದಲ್ಲಿ ಬಾರ್ಟಿ ಕಾಣುತ್ತಿರುವ ಮೊದಲ ಕ್ವಾರ್ಟರ್. ಆಸ್ಟ್ರೇಲಿಯದ ದರಿಯಾ ಗವ್ರಿಲೋವಾ, ಸಮಂತಾ ಸ್ಟೋಸರ್ ದ್ವಿತೀಯ ಸುತ್ತಿನಲ್ಲಿ ಪರಸ್ಪರ ಎದುರಾಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ