IPL 2020: ಡೆಲ್ಲಿ – ರಾಜಸ್ಥಾನ್ ಮುಖಾಮುಖಿ ; ಗೆಲುವಿನ ನಗೆ ಬೀರಿದ ಶ್ರೇಯಸ್ ಪಡೆ
Team Udayavani, Oct 14, 2020, 11:08 PM IST
ದುಬೈ : ರಾಜಸ್ಥಾನ್ ಎದುರಿನ ಬುಧವಾರದ ಐಪಿಎಲ್ ಮುಖಾಮುಖಿಯಲ್ಲಿ ಸಂಘಟಿತ ಪ್ರದರ್ಶನ ನಡೆಸಿದ ಡೆಲ್ಲಿ 13 ರನ್ ಗೆಲುವು ದಾಖಲಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ 7 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿ ಸವಾಲೊಡ್ಡಿತು. ಈ ಮೊತ್ತದ ಗುರಿ ಬೆನ್ನತ್ತಿದ ರಾಜಸ್ಥಾನ್ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 148 ರನ್ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.